Karnataka Times
Trending Stories, Viral News, Gossips & Everything in Kannada

ಯುವ ಸಿನಿಮಾ ಸೆಟ್‌ಗೆ ಭೇಟಿ ನೀಡಿ ಮುನಿಸಿಗೆ ಪೂರ್ಣವಿರಾಮ ಎಳೆದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್!!

ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ನಟರ (Star Actor) ನಡುವೆ ಆಗಾಗ ವೈ-ಮನಸ್ಸುಗಳು ಮೂಡುತ್ತವೆ. ಅದಲ್ಲದೇ ನಟರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾ ವಾರ್ ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಈ ವಾರ್ ತಾರಕಕ್ಕೆ ಏರಬಹುದು. ಈ ಹಿಂದೆ ದೊಡ್ಮೆನೆ ಫ್ಯಾನ್ಸ್ (Dodmane Fans) ಹಾಗೂ ದರ್ಶನ್ ಫ್ಯಾನ್ಸ್‌ (Darshan Fans) ನಡುವೆ ವಾರ್ ನಡೆದಿತ್ತು. ಹೊಸಪೇಟೆ (Hosapete) ಯಲ್ಲಿ ನಡೆದ ಗಲಾಟೆಯು ಎರಡು ಕುಟುಂಬಗಳ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು. ಆದರೆ ನಟ ದರ್ಶನ್ ಅವರು ಈ ಮುನಿಸಿಗೆ ಪೂರ್ಣವಿರಾಮವಿಟ್ಟಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಯುವ’ (Yuva) ಸೆಟ್‌ಗೆ ಭೇಟಿ ನೀಡಿದ್ದಾರೆ. ನಗರದ ಹೆಚ್‌ಎಂಟಿ ಫ್ಯಾಕ್ಟರಿ (HMT Factory) ಯಲ್ಲಿ ‘ಯುವ’ (Yuva) ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಸೆಟ್‌ಗೆ ಇದ್ದಕ್ಕಿದ್ದಂತೆ ‘ಕಾಟೇರ’ ಚಿತ್ರತಂಡ ಎಂಟ್ರಿ ಕೊಟ್ಟಿದ್ದು, ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ (Tarun Sudheer) ಇಬ್ಬರು ಯುವ ರಾಜ್‌ಕುಮಾರ್ (Yuvaraj Kumar) , ಸಂತೋಷ್‌ ಆನಂದ್‌ ರಾಮ್ (Santhosh Anand Ram), ಸಪ್ತಮಿ ಗೌಡ (Saptami Gowda) ಜೊತೆಗೆ ಸಮಯ ಕಳೆದಿದ್ದಾರೆ.

Advertisement

ನಟ ದರ್ಶನ್‌ ಆಗಮಿಸಿದ್ದು, ಯುವ ಸಿನಿಮಾ ಶೂಟಿಂಗ್‌ ಕೆಲ ಕಾಲ ಸ್ಥಗಿತಗೊಳಿಸಲಾಗಿದೆ. ನಟನನ್ನು ಪ್ರೀತಿಯಿಂದ ಸೆಟ್‌ಗೆ ಸ್ವಾಗತಿಸಿದ್ದು, ನಗು ನಗುತ್ತಲೇ ಮಾತನಾಡಿದ್ದಾರೆ. ಈ ವೇಳೆಯಲ್ಲಿ ಸಪ್ತಮಿ ಗೌಡ, ಯುವ ಎಲ್ಲರೂ ದರ್ಶನ್‌ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ದರ್ಶನ್ ಅವರು ಯುವ ಸೆಟ್ ಗೆ ಆಗಮಿಸಿರುವ ವಿಡಿಯೋವೊಂದು ವೈರಲ್ (Viral) ಆಗಿವೆ. ಈ ವಿಡಿಯೋ ಹಾಗೂ ಫೋಟೊಗಳನ್ನು ಈಗ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು, ದೊಡ್ಮನೆ ಕುಟುಂಬ ಹಾಗೂ ದರ್ಶನ್ ಅವರು ಒಟ್ಟಾಗಿರುವುದು ಫ್ಯಾನ್ಸ್ ಗಳಿಗೆ ಖುಷಿ ನೀಡಿದೆ.

Advertisement

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ (Katera) ಸಿನಿಮಾಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. 70ರ ದಶಕದ ಕತೆಯನ್ನು ತೆರೆ ಮೇಲೆ ತರಲಾಗುತ್ತಿದ್ದು, ದರ್ಶನ್ ಗೆ ಜೋಡಿ ಯಾಗಿ ರಾಧನಾ ರಾಮ್ (Radhana Ram) ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬ್ಯುಸಿಯಿರುವಾಗಲೇ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

Advertisement

ಕಳೆದ ಕೆಲ ದಿನಗಳ ಹಿಂದೆ ನಟ ದರ್ಶನ್ ಹಾಗೂ ಜೋಗಿ ಪ್ರೇಮ್ (Jogi Prem) ಕಾಂಬಿನೇಷನ್​ನ ಸಿನಿಮಾ ಘೋಷಣೆ ಮಾಡಲಾಗಿದೆ. ಈ ಚಿತ್ರಕ್ಕೆ ಕೆವಿಎನ್ (KVN) ಸಂಸ್ಥೆ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಕಾಟೇರ ಸಿನಿಮಾದ ಶೂಟಿಂಗ್ (Shooting) ಮುಗಿದ ಕೂಡಲೇ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.