Karnataka Times
Trending Stories, Viral News, Gossips & Everything in Kannada

ಮುದ್ದಿನ ತಮ್ಮನಿಗೆ ರಾಖಿ ಕಟ್ಟಿದ ಮಾಲಾಶ್ರೀ ಪುತ್ರಿ ಆರಾಧನಾ ರಾಮು, ಫೋಟೋಗಳು ವೈರಲ್!!

ಸ್ಯಾಂಡಲ್ ವುಡ್ ನಲ್ಲಿ ಸೆಲೆಬ್ರಿಟಿ (Sandalwood Celebrities) ಗಳು ರಕ್ಷಾ ಬಂಧನ ಹಬ್ಬವನ್ನು ಜೋರಾಗಿ ಆಚರಿಸಿಕೊಂಡಿದ್ದಾರೆ. ರಾಖಿ ಹಬ್ಬದ ಸೆಲೆಬ್ರೇಶನ್ ಫೋಟೋಗಳು ವೈರಲ್ ಆಗುತ್ತಿದೆ. ಇತ್ತ ಕನಸಿಕ ರಾಣಿ ಮಾಲಾಶ್ರೀ (Malashree) ಯವರ ಇಬ್ಬರೂ ಮಕ್ಕಳು ಕೂಡ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಚಂದನವನಕ್ಕೆ ಕಾಟೇರ (Katera) ಸಿನಿಮಾದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿಕೊಂಡಿರುವ ನಟಿ ಆರಾಧನಾ ರಾಮು (Aaradhana Ramu) ರವರು ಮುದ್ದಿನ ತಮ್ಮನಿಗೆ ರಾಖಿ ಕಟ್ಟಿದ್ದಾರೆ.

ಹೌದು, ಆರತಿ ಬೆಳಗಿ, ತಮ್ಮನ ಹಣೆಗೆ ಕುಂಕುಮವಿಟ್ಟು ರಾಖಿ ಕಟ್ಟಿರುವ ಆರಾಧನಾ ಹಾಗೂ ಅವರ ತಮ್ಮನ ರಕ್ಷಾ ಬಂಧನ ಸೆಲೆಬ್ರೇಶನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ನಟಿ ಮಾಲಾಶ್ರೀ ಮಕ್ಕಳ ರಕ್ಷಾ ಬಂಧನ ಹಬ್ಬ (Raksha Bandhana Celebration) ಸೆಲೆಬ್ರೇಶನ್ ಫೋಟೋ ನೋಡಿದ ಫ್ಯಾನ್ಸ್ ಖುಷಿ ಪಟ್ಟುಕೊಂಡಿದ್ದಾರೆ.

Advertisement

ನಟಿ ಮಾಲಾಶ್ರೀ (Malashree) ಹಾಗೂ ನಿರ್ಮಾಪಕ ರಾಮು (Ramu) ಪುತ್ರಿ ರಾಧನಾ ರಾಮ್ (Radhana Ram) ಅವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಾರಂಭದಲ್ಲಿ ನಟಿ ಮಾಲಾಶ್ರೀ ಪುತ್ರಿ ಅನನ್ಯಾ (Ananya) ಹೆಸರನ್ನು ರಾಧನಾ ರಾಮ್ ಎಂದು ಬದಲಾಯಿಸಿಕೊಂಡಿದ್ದರು. ಇದೀಗ ಮತ್ತೆ ಅದೃಷ್ಟಕ್ಕಾಗಿ ಹೆಸರಿನಲ್ಲಿ ಬದಲಾವಣೆ ಮಾಡಲಾಗಿದ್ದು, ರಾಧನಾ ಹೆಸರಿನ ಪ್ರಾರಂಭದಲ್ಲಿ ಆ ಅಕ್ಷರವನ್ನು ಸೇರಿಸಿ ಆರಾಧನಾ ಎಂದು ಹೆಸರು ಬದಲಿಸಿಕೊಂಡಿದ್ದಾರೆ.

Advertisement

Advertisement

ಈ ಬಗ್ಗೆ ನಟಿ ಆರಾಧನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ರಾಧನಾ ರಾಮ. ಇಂದಿನಿಂದ ನನ್ನ ಹೆಸರು ಆರಾಧನಾ ಎಂದು ನಿಮಗೆ ಸುದ್ದಿ ನೀಡಲು ನಾನು ಬಯಸುತ್ತೇನೆ. ಈ ಬದಲಾವಣೆಗಾಗಿ ನಿಮ್ಮೆಲ್ಲರ ಆಶೀರ್ವಾದವನ್ನು ನೀಡಬೇಕೆಂದು ನಾನು ಕೇಳುತ್ತೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು ಮತ್ತು ಇದು ಯಾವಾಗಲೂ ನನ್ನೊಂದಿಗೆ ಸದಾ ಇರಲಿ ಎಂದು ಕೇಳಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಮಗಳ ಹೆಸರನ್ನು ಆರಾಧನಾಳಾಗಿ ಬದಲಾಯಿಸಿಕೊಂಡಿದ್ದು ಈ ಬಗ್ಗೆ ನಟಿ ಮಾಲಾಶ್ರೀ (Malashree) ಯವರು ವಿನಂತಿಸಿಕೊಂಡಿದ್ದಾರೆ “ನಾನು, ರಾಕ್ ಲೈನ್ ವೆಂಕಟೇಶ್ ಹಾಗೂ ತರುಣ್ ಸುಧೀರ್ ಮೂರು ಜನ ಚರ್ಚಿಸಿ ಆರಾಧನಾ ಎಂಬ ಹೆಸರನ್ನು ಆಯ್ಕೆ ಮಾಡಿದ್ದೇವೆ. ಈ ಹೆಸರು ಬರೀ ಚಿತ್ರಕ್ಕೆ ಮಾತ್ರವಲ್ಲ. ಇನ್ನು ಮುಂದೆ ನನ್ನ ಮಗಳ ಹೆಸರೇ ಆರಾಧನಾ. ಮುಂದಿನ ಚಿತ್ರಗಳಲ್ಲೂ ಆರಾಧನಾ ಎಂಬ ಹೆಸರಿನಿಂದಲೇ ಅಭಿನಯಿಸಿಲಿದ್ದಾರೆ. ತಾವೆಲ್ಲರೂ ಮುಂದೆ ಆರಾಧನಾ ಹೆಸರನ್ನೇ ಬಳಸಿಕೊಳ್ಳಬೇಕೆಂದು ” ಎಂದು ಹೇಳಿದ್ದಾರೆ. ನಟ ದರ್ಶನ್ ನಾಯಕ ನಟನಾಗಿ ನಟಿಸುತ್ತಿರುವ ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಯಿದೆ.

Leave A Reply

Your email address will not be published.