ಕಾಂತರಾ ಸಿನಿಮಾದ ಮೂಲಕ ಇಂದು ಪ್ಯಾನ್ ಇಂಡಿಯಾ ಸ್ಟಾರ್ ನಟನಾಗಿ ಹೊರಹೊಮ್ಮಿರುವಂತಹ ರಿಷಬ್ ಶೆಟ್ಟಿಯವರು, ಒಂದಲ್ಲ ಒಂದು ವಿಚಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಸದಾ ಸದ್ದು ಮಾಡತ್ತಲೇ ಇರುತ್ತಾರೆ. ಕೇವಲ ಸಣ್ಣ ಪುಟ್ಟ ಸಿನಿಮಾಗಳನ್ನು ಮಾಡಿಕೊಂಡು ತಕ್ಕಮಟ್ಟದಲ್ಲಿ ಗುರುತಿಸಿಕೊಂಡಿದ್ದಂತಹ ರಿಷಭ್ ಶೆಟ್ಟಿ(Rishab Shetty) ಎಂದು ತಮ್ಮ ಅಪ್ರತಿಮ ಅಭಿನಯದ ಪ್ರವೃತ್ತಿಯನ್ನು ಬಾಲಿವುಡ್ ಅಂಗಳದವರಿಗೂ ಮುಟ್ಟಿಸಿ ಎಲ್ಲಾ ಸಿನಿ ಇಂಡಸ್ಟ್ರಿಗು ಬೇಕಿರುವಂತಹ ಬಹು ಬೇಡಿಕೆಯ ನಟನಾಗಿ ಹೊರಹೊಂದಿದ್ದಾರೆ.
ಹೌದು ಸ್ನೇಹಿತರೆ, ಇತರೆ ಭಾಷೆಯಿಂದ ಸಾಲು ಸಾಲು ಸಿನಿಮಾಗಳ ಆಫರ್ ಬಂದರು ಸಹ ಮೊದಲು ಕನ್ನಡಕ್ಕೆ ನನ್ನ ಆದ್ಯತೆ, ಆನಂತರ ಇತರೆ ಭಾಷೆಗಳು ಎನ್ನುವ ಮೂಲಕ ಕನ್ನಡಿಗರ ಮನಸ್ಸನ್ನು ಕದ್ದರು. ಸದ್ಯ ಕಾಂತರಾ ಪಾರ್ಟ್ ಟು(Kantara 2) ಸಿನಿ ಕೆಲಸಗಳಲ್ಲಿ ಬ್ಯುಸಿ ಇರುವಂತಹ ಈ ನಟ ಯಾವುದೇ ಹಬ್ಬ ಹರಿದಿನಗಳು ಬಂದರು ಮನೆಯವರೊಂದಿಗೆ ಸೇರಿ ಒಟ್ಟಾಗಿ ಬಹಳ ಖುಷಿ ಖುಷಿಯಿಂದ ಆಚರಿಸುವ ಮೂಲಕ ಅದರ ಕೆಲ ಸುಂದರ ಕ್ಷಣಗಳನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಳ್ಳುತ್ತಾರೆ.
Advertisement
ಅದರಂತೆ ಮೊನ್ನೆ ಅಷ್ಟೇ ಅಂದರೆ ಆಗಸ್ಟ್ 30ನೇ ತಾರೀಕಿನಂದು ನಡೆದ ರಕ್ಷಾ ಬಂಧನ (Raksha Bandhan) ಹಬ್ಬದ ಅಂಗವಾಗಿ ಮನೆಯಲ್ಲಿರುವಂತಹ ಇಬ್ಬರು ಮುದ್ದಾದ ಮಕ್ಕಳಿಗೆ ಹಬ್ಬದ ಅರ್ಥವನ್ನು ತಿಳಿಸಿ ಅದರ ಆಚರಣೆಯನ್ನು ಮಾಡಿಸಿದ್ದಾರೆ. ಹೌದು ಗೆಳೆಯರೇ ರಣವಿತ್(Ranvit) ಮತ್ತು ರಾಧ್ಯ ಶೆಟ್ಟಿ(Radhya Shetty) ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದು ಅವರಿಬ್ಬರ ರಕ್ಷಾ ಬಂಧನ ಹಬ್ಬದ ಸುಂದರ ಕ್ಷಣಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
Advertisement
ಪುಟ್ಟ ಕಂದಮ್ಮ ರಾಧ್ಯ ತನ್ನ ಅಣ್ಣನಿಗೆ ರಾಖಿ ಕಟ್ಟಿ ಹಣೆಗೆ ತಿಲಕ ಇಟ್ಟು ಕಾಲಿಗೆ ನಮಸ್ಕರಿಸುತ್ತಿರುವ ಸಾಲು ಸಾಲು ಫೋಟೋಗಳನ್ನು ತಂದೆ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇಬ್ಬರು ಮಕ್ಕಳು ಕೆಂಪು ಬಣ್ಣದ ಉಡುಪನ್ನು ಧರಿಸಿ ಕಣ್ಣಿಗೆ ಗಾಗಲ್ಸ್ ಹಾಕಿಕೊಂಡು ಬಹಳ ಕ್ಯೂಟ್ ಆಗಿ ಫೋಟೋಗೆ ಪೋಸ್ ನೀಡಿದ್ದು, ರಿಷಬ್ ಶೆಟ್ಟಿ(Rishab Shetty) ಮತ್ತು ಪ್ರಗತಿ ಶೆಟ್ಟಿ (Pragathi Shetty) ಅವರ ಮುದ್ದಾದ ಮಕ್ಕಳನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ರಿಷಬ್ ತಮ್ಮ instagram ಪೇಜ್ನಲ್ಲಿ “ಅಣ್ಣ ತಂಗಿಯ ಮಧುರ ಬಾಂಧವ್ಯಕ್ಕೆ ಸಾಕ್ಷಿಯಾಗುವ ರಕ್ಷಾಬಂಧನದ ಶುಭಾಶಯಗಳು” ಎಂಬ ಕ್ಯಾಪ್ಶನ್ ಬರೆದು ತಮ್ಮ ಮಕ್ಕಳ ಸಾಲು ಸಾಲು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ(Rishab Shetty) ಅವರ ಆತ್ಮೀಯರಾದಂತಹ ವಿಜೇತ್ ಕುಂದಾಪುರ(Vejith Kundapura) ಎಂಬುವವರ ಅದ್ಭುತ ಕ್ಯಾಮರಾ ಕೈಚಳಕದಲ್ಲಿ ಮಕ್ಕಳ ಫೋಟೋ ಬಹಳ ಸುಂದರವಾಗಿ ಮೂಡಿ ಬಂದಿದ್ದು ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.