Karnataka Times
Trending Stories, Viral News, Gossips & Everything in Kannada

ಲೀಲಾವತಿ ಅಮ್ಮನವರ ಮನೆಯಲ್ಲಿ ಭರ್ಜರಿ ಬಾಡೂಟ ಸವಿದ ಹಿರಿಯ ಕಲಾವಿದರು! ಎಲ್ಲರೂ ಒಂದೆಡೆ ಸೇರಿದ ಸುಂದರ ಕ್ಷಣಗಳು ನೋಡಿ!!

ಕನ್ನಡ ಸಿನಿಮಾರಂಗಕ್ಕೆ ಹಿರಿಯ ನಟಿ ಲೀಲಾವತಿ (Senior Actor Leelavati) ಕನ್ನಡ ಸಿನಿಮಾರಂಗಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಮಗ ವಿನೋದ್ ರಾಜ್ (Vinod Raj) ಅವರ ಜೊತೆಗೆ ವಾಸವಾಗಿರುವ ಹಿರಿಯ ನಟಿ ಲೀಲಾವತಿಯವರು ಇಳಿ ವಯಸ್ಸಿನಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡವರು. ಈ ಬಾರಿ ಹಿರಿಯ ನಟಿ ಲೀಲಾವತಿ ತಮ್ಮ ಹುಟ್ಟುಹಬ್ಬವನ್ನು ಅವರ ಪುತ್ರ ವಿನೋದ್ ರಾಜ್ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

ಇತ್ತೀಚೆಗೆ ಅವರ ಹುಟ್ಟುಹಬ್ಬದ ನೆಪದಲ್ಲಿ ಸಿನಿಮಾ ರಂಗದ ಆಪ್ತರನ್ನೆಲ್ಲಾ ಕರೆದು ಲೀಲಾವತಿ, ಪುತ್ರ ವಿನೋದ್ ರಾಜ್ ವಿಶೇಷವಾದ ಭೋಜನದ ವ್ಯವಸ್ಥೆಯನ್ನು ಮಾಡಿದ್ದಾರೆ. ಅದರ ಜೊತೆಗೆ ಲೀಲಾವತಿ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಕಲಾವಿದರು ಸೇರಿ ಹಿರಿಯ ನಟಿ ಲೀಲಾವತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ. ಈ ಸನ್ಮಾನ ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ದು, ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

Advertisement

Advertisement

ಹಿರಿಯ ನಟರಾದ ಶ್ರೀಧರ್ (Shreedhar), ದೊಡ್ಡಣ್ಣ (Doddanna), ಸುಂದರ್ ರಾಜ್ (Sundar Raj), ಜೈಜಗದೀಶ್ (Jai Jagadeesh), ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh), ಪದ್ಮಾವಸಂತಿ (Padmavasanthi), ಅಂಜಲಿ (Anjali), ಭವ್ಯ (Bhavya), ನಿರ್ದೇಶಕ ಸಾಯಿಪ್ರಕಾಶ್ (Sai Prakash).

Advertisement

ಡಿಂಗ್ರಿ ನಾಗರಾಜ್ (Dingri Nagaraj), ಟೆನ್ನಿಸ್ ಕೃಷ್ಣ (Tennis Krishna), ನಟಿ ಪೂಜಾಗಾಂಧಿ ( Actress Pooja Gandhi), ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್ (Bhama Harish) ಹಾಗೂ ಮಂಡಳಿ ಸದಸ್ಯರು ಸೇರಿದಂತೆ ಅನೇಕರು ಇದ್ದರು. ಕಲಾವಿದರಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಿದ್ದು, ಭರ್ಜರಿ ಭೋಜನವನ್ನು ಸವಿಯುವ ಟೆನ್ನಿಸ್ ಕೃಷ್ಣರವರ ವಿಡಿಯೋವೊಂದು ವೈರಲ್ ಆಗಿದೆ.

Leave A Reply

Your email address will not be published.