ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಎಂತಾ ಸಿನಿಮಾ ಮಾಡಿದ್ಯಾ ನೀನು …ಮನೆಗೆ ಕರೆಸಿ ರಿಷಬ್ ಗೆ ರಜನಿ ಕೊಟ್ಟ ಗಿಫ್ಟ್ ನೋಡಿ

21,496

rajini meets rishab shetty kannada: ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ರವರು ಸೂಪರ್ ಹಿಟ್ ಕಾಂತಾರ ಸಿನಿಮಾ ನೋಡಿದ್ದು ಕನ್ನಡದ ಕಾಂತಾರ ಚಿತ್ರ ವೀಕ್ಷಿಸಿ ತುಂಬಾ ಖುಷಿಪಟ್ಟಿದ್ದಾರೆ. ಹೌದು ಕಾಂತಾರ ನನಗೆ ತುಂಬಾ ಖುಷಿ ತಂದಿದ್ದು ಈಗ ಇನ್ನೂ ಒಂದು ಹೆಜ್ಜೆ ಮುಂದೇ ಹೋದ ಸೂಪರ್ ಸ್ಟಾರ್ ರಜನಿಕಾಂತ್ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನ ತಮ್ಮ ಬಳಿಗೆ ಕರೆಸಿಕೊಂಡಿದ್ದಾರೆ.

ಹೌದು ಸುಮಾರು ಹೊತ್ತು ಮನಬಿಚ್ಚಿ ಮಾತನಾಡಿದ್ದು ಸಿನಿಮಾದ ಬಗೆಗಿನ ತಮ್ಮ ಅಭಿಪ್ರಾಯವನ್ನ ಮತ್ತೊಮ್ಮೆ ಹಂಚಿಕೊಂಡಿದ್ದಾರೆ. ಇನ್ನು ಆ ಕ್ಷಣ ನಿಜಕ್ಕೂ ರಿಷಬ್​ ಶೆಟ್ಟಿಗೆ ಗ್ರೇಟ್ ಫೀಲಿಂಗ್ ಕೊಟ್ಟಿದ್ದು ಸೂಪರ್ ಸ್ಟಾರ್ ಆದರೂ ಕೂಡ ಯೋಗಿ ರೀತಿನೇ ಬದುಕುತ್ತಿರೋ ರಜನಿಕಾಂತ್ ರವರಿಂದ ರಿಷಬ್ ಶೆಟ್ಟಿ ಆಶೀರ್ವಾದವನ್ನೂ ಪಡೆದುಕೊಂಡಿದ್ದಾರೆ. ಹೌದು ಕಾಲಿಗೆ ಬಿದ್ದು ರಜಿನಿಗೆ ಗೌರವ ಕೂಡ ಸಲ್ಲಿಸಿದ್ದು ಈಗ ಇದುವೇ ಟಾಕ್ ಆಫ್ ದಿ ಟೌನ್ ಆಗಿದೆ ಎನ್ನಬಹುದು.

ಸದ್ಯ ಕಾಂತಾರ ಸಿನಿಮಾ ನಿಜಕ್ಕೂ ರಿಷಬ್ ಶೆಟ್ಟಿಯವರ ಜೀವನದ ಹಾದಿಯನ್ನೇ ಬದಲಿಸಿದೆ ಎನ್ನಬಹುದಾಗಿದ್ದು ಒಂದೇ ಒಂದು ಸಿನಿಮಾ ಇಡೀ ದೇಶ-ವಿದೇಶಕ್ಕೆ ರಿಷಬ್ ಶೆಟ್ಟಿಯನ್ನ ಪರಿಚಯಸಿ ಬಿಟ್ಟಿದೆ. ಇನ್ನು ಕಾಂತಾರ ಸಿನಿಮಾದ ಖ್ಯಾತಿಗೆ ಅದೆಷ್ಟೋ ಜನ ಸಿನಿಮಾ ಮಂದಿ ಮರುಳಾಗಿದ್ದು ರಿಷಬ್ ಶೆಟ್ಟಿಯನ್ನ ಅದೆಷ್ಟೊ ಜನ ಹೊಗಳುತ್ತಲೇ ಇದ್ದಾರೆ.

ಆದರೆ ರಿಷಬ್ ಶೆಟ್ಟಿಯನ್ನ ಮನಸಾರೆ ಮೆಚ್ಚಿಕೊಂಡ ರಜನಿಕಾಂತ್ ಚೆನ್ನೈನ ಮನೆಗೂ ಕರೆಸಿಕೊಂಡಿದ್ದುರಜನಿಕಾಂತ್ ಸಿನಿಮಾ ಮೆಚ್ಚುತ್ತಾರೆ ಅಂದ್ರೆ ಸುಮ್ನೆ ಏನೂ ಅಲ್ಲ.  ಹೌದು ಸಾಕಷ್ಟು ಸಿನಿಮಾ ಮಾಡಿದ್ದು ಸಾಕಷ್ಟು ಕತೆಗಳಿಂದ ಅನುಭವ ಕೂಡ ಇದೆ. ಇತರ ಸಿನಿಮಾ ನೋಡಿದ ಅನುಭವ ಕೂಡ ಇದ್ದುಕಾಂತಾರ ಸಿನಿಮಾ ರಜನಿಕಾಂತ್ ಗೂ ಬಹಳ ಇಷ್ಟ ಆಗಿದೆ.

ಇದನ್ನ ನೋಡಿದ ರಜನಿಕಾಂತ್ ರವರು ಕಾಂತಾರ ಚಿತ್ರ ನೋಡಿ ರೋಮಾಂಚನಗೊಂಡೆ. ಭಾರತೀಯ ಸಿನಿಮಾರಂಗದಲ್ಲಿ ಈ ಸಿನಿಮಾ ಒಂದು ಮಾಸ್ಟರ್ ಪೀಸ್ ಅಂತಲೇ ಹೇಳಿದ್ದರು. ರಿಷಬ್ ಶೆಟ್ಟಿ ಸೇರಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ.ಕಾಂತಾರ ಸಿನಿಮಾ ಗುಂಗಿನಲ್ಲಿಯೇ ಇರೋ ರಜನಿಕಾಂತ್ ರವರು ಸದ್ಯ ಈಗ ರಿಷಬ್ ಶೆಟ್ರನ್ನ ತಮ್ಮ ಮನೆಗೂ ಕರೆಸಿಕೊಂಡಿದ್ದು ಕರೆಸಿಕೊಂಡು ಸುಮಾರು ಹೊತ್ತು ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ರಿಷಬ್ ಶೆಟ್ಟಿಯವರನ್ನ ಹಾಗೆ ಕಳಿಸದೇ ಇರುವ ರಜನಿಕಾಂತ್ ಗೌರವಿಸಿದ್ದು ಶಾಲ್ ಹೊದಿಸಿ ಸನ್ಮಾನಿಸಿದ್ದಾರೆ. ಅಲ್ಲದೆ ಚಿನ್ನದ ಸರ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ತುಂಬಾ ಖುಷಿಯಾಗಿರೋ ರಿಷಬ್ ಶೆಟ್ಟಿ, ತಮಗನಿಸಿದ್ದನ್ನ ಬರೆದುಕೊಂಡಿದ್ದಾರೆ.ನೀವು ಒಂದ್ ಸಲ ಹೊಗಳಿದ್ರೆ.. ನೂರು ಸಲ ಹೊಗಳ್ದ೦ಗೆ ನಮಗೆ. ಧನ್ಯವಾದಗಳು sir ನಮ್ಮ ಕಾಂತಾರ ಚಿತ್ರ ನೋಡಿ ನೀವು ಮೆಚ್ಚಿದ್ದಕ್ಕೆ ನಾವು ಸದಾ ಆಭಾರಿ ಎಂದು ರಿಷಬ್
ಬರೆದುಕೊಂಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಒಂದು ಸಿನಿಮಾ ಮೆಚ್ಚೋದೇನು ಮೆಚ್ಚಿ ತಮ್ಮ ಮನೆಗೂ ಕರೆಸಿಕೊಂಡು ರಿಷಬ್ ಶೆಟ್ಟಿ ಅವರನ್ನ ಮಾತನಾಡಿಸೋದು ಅಂದರೆ ತಮಾಷೆಯ ವಿಚಾರವಲ್ಲ.ಇದು ನಿಜಕ್ಕೂ ರಿಷಬ್ ಶೆಟ್ಟಿ ಅದೃಷ್ಟವೇ ಅಂತಲೇ ಹೇಳಬಹುದು. ಸಿನಿಮಾ ಗೆಲುವು ಒಂದು ಕಡೆಯಾದರೆ ರಜನಿಕಾಂತ್ ಮೆಚ್ಚುಗೆ ಇನ್ನೊಂದು ಕಡೆ ಇದೆ. ಎರಡೂ ಇರೋದ್ರಿಂದ ಇಡೀ ಟೀಮ್ ಸಂತೋಷ ಡಬಲ್ ಟ್ರಿಪಲ್ ಆಗಿದೆ ಎನ್ನಬಹುದು. ಇನ್ನು ರಜನಿಕಾಂತ್ ಮತ್ತು ರಿಷಬ್ ಶೆಟ್ಟಿ ಮೀಟ್ ಆಗಿರೋ ವಿಷಯದ ಫೋಟೋಗಳನ್ನ ನಿರ್ಮಾಪಕ ವಿಜಯ್​ ಕಿರಗಂದೂರು ರವರು ಕೂಡ ತಮ್ಮ ಅಧಿಕೃತ ಪೇಜ್ ನಲ್ಲೂ ಹಂಚಿಕೊಂಡು ಸಂತೋಷ ಪಟ್ಟಿದ್ದಾರೆ.