ನಮ್ಮ ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಸಿಂಡ್ರೆಲಾ ರಾಧಿಕಾ ಪಂಡಿತ್ ರವರು ಅಗ್ರಸ್ತಾನದಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಪ್ರೀತಿ ಮಾಡಿ ಆರಯ ವರ್ಷಗಳ ಹಿಂದೆ ಮದುವೆಯಾದರು ಸದ್ಯ ಈಗ ಈ ಮುದ್ದಾದ ದಂಪತಿಗೆ ಒಂದು ಹೆಣ್ಣು ಮಗು ಮತ್ತು ಒಂದು ಗಂಡು ಮಗು ಕೂಡ ಇದ್ದು ಮದುವೆಯಾದ ಎರಡು ವರ್ಷದ ಬಳಿಕ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ವರ್ಷ ಕಳೆಯುವುದರ ಒಳಗೆ ಗಂಡು ಮಗುವಿಗೂ ಕೂಡ ಜನ್ಮ ನೀಡಿದರು. ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್ ಹಾಗೂ ಮೂರನೇ ಮಗುವಿನ ಗರ್ಭಿಣಿ ಆಗಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ.
ಹೌದು ಇತ್ತೀಚೆಗಷ್ಟೇ ರಾಧಿಕಾ ಹಾಗೂ ಯಶ್ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಒಂದನ್ನ ಹಂಚಿಕೊಂಡಿದ್ದು ಇದನ್ನ ನೋಡಿದ ಅಭಿಮಾನಿಗಳು ರಾಧಿಕಾ ಅವರು ಮತ್ತೆ ಗರ್ಭಿಣಿ ಆಗಿದ್ದಾರೆ ಅನ್ನುವ ಸಂಶಯವನ್ನ ವ್ಯಕ್ತಪಡಿಸಿದ್ದರು. ಹೌದು ಅಭಿಮಾನಿಗಳ ಈ ಸಂಶಯ ಮತ್ತು ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು ಸ್ವತಃ ರಾಧಿಕಾ ಪಂಡಿತ್ ಅವರೇ ಇದರ ಬಗ್ಗೆ ಪ್ರತಿಕ್ರಿಯೆಯನ್ನ ನೀಡಿದ್ದು ಅಭಿಮಾನಿಗಳ ಪ್ರಶ್ನೆಗೆ ಉತ್ತರವನ್ನ ನೀಡಿದ್ದಾರೆ. ಹಾಗಾದರೆ ಮೂರನೇ ಮಗುವಿನ ಬಗ್ಗೆ ರಾಧಿಕಾ ಪಂಡಿತ್ ರವರು ಹೇಳಿದ್ದೇನು ಗೊತ್ತಾ.
ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್ ಮತ್ತೆ ಗರ್ಭಿಣಿಯಾಗಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿರುವುದು ಸಾಮಾನ್ಯವಾಗಿ ತಮಗೆಲ್ಲ ತಿಳಿದೇ ಇದೆ. ರಾಧಿಕಾ ಅವರ ಇತ್ತೀಚಿನ ಫೋಟೋ ನೋಡಿದ ನೆಟ್ಟಿಗರು ರಾಧಿಕಾ ಪಂಡಿತ್ ಮತ್ತೆ ಗರ್ಭಿಣೀನ ಹಾಗೆ ಮೂರನೇ ಮಗುವಿನ ನಿರೀಕ್ಷೆಯಲ್ಲಿ ಇದ್ದೀರಾ ಎಂದು ಕಾಮೆಂಟ್ ಮಾಡಿದ್ದು ಆ ಚಿತ್ರದಲ್ಲಿ ಯಶ್ ಅವರು ಮೂರೂ ಬೀಳುಗಳನ್ನ ಹಣೆಯ ಮೇಲೆ ಇಟ್ಟುಕೊಂಡಿರುವುದು ಅಭಿಮಾನಿಗಳ ಅನುಮಾನಕ್ಕೆ ಕಾರಣವಾಗಿತ್ತು.
ಇನ್ನು ಅಭಿಮಾನಿಗಳ ಪ್ರಶ್ನೆಗೆ ರಾಧಿಕಾ ಪಂಡಿತ್ ಉತ್ತರವನ್ನ ನೀಡಿದ್ದು ಈ ಫೋಟೋ ನೋಡಿ ಅನೇಕರು ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಭಾವಿಸಿದವರಿಗೆ ಇಲ್ಲ ನಾನು ಗರ್ಭಿಣಿ ಅಲ್ಲ ಎಂದು ಹೇಳಿದ್ದಾರೆ. ರಾಧಿಕಾ ಪಂಡಿತ್ ಮತ್ತು ಈ ಮೂಲಕ ರಾಧಿಕಾ ಪಂಡಿತ್ ಮತ್ತೆ ಗರ್ಭಿಣಿ ಅನ್ನುವ ವದಂತಿಗೆ ಬ್ರೇಕ್ ಹಾಕಿದ್ದಾರೆ. ಆದರೆ ಇದರಲ್ಲಿ ಒಂದು ಟ್ವಿಸ್ಟ್ ಅನ್ನು ನೀಡಿರುವ ರಾಧಿಕಾ ಪಂಡಿತ್ ರವರು ಸದ್ಯಕ್ಕೆ ಮೂರನೇ ಮಗು ಏನೂ ಇಲ್ಲ ಆದರೆ ಯಶ್ ಗೆ ಮಗು ಎಂದರೆ ಬಹಳ ಇಷ್ಟ ಎಂಬ ಹೇಳಿಕೆಯನ್ನು ಕೂಡ ನೀಡಿದ್ದಾರೆ.
ಸದ್ಯ ರಾಧಿಕಾ ಪಂಡಿತ್ ರವರ ಮಾತು ಕೇಳುತ್ತಿದ್ದರೆ ನಿಜಕ್ಕೂ ಯಶ್ ದಂಪತಿಗಳು ಮೂರನೇ ಮಗುವಿಗೆ ತಯಾರಾಗಿದ್ದಾರೆ ಎಂಬ ಕುತೂಹಲ ಮತ್ತೊಮ್ಮೆ ಮೂಡಿದ್ದು ಯಶ್ ಗೆ ಮಗು ಅಂದರೆ ಇಷ್ಟ ಎಂದಿರುವ ರಾಧಿಕಾ ನಿಜಕ್ಕೂ ಮೂರನೇ ಮಗುವಿಗೆ ಜನ್ಮ ನೀಡುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ