ನಮ್ಮ ಚೆಂದನವನದಲ್ಲಿ ದಾಖಲೆ ಬರೆದ ಸಿನಿಮಾಗಳಲ್ಲಿ ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ನಟನೆಯ ಆಪ್ತಮಿತ್ರ ಕೂಡಾ ಒಂದಾಗಿದ್ದು ಈ ಸಿನಿಮಾ ಹಾಡುಗಳಂತೂ ಇಂದಿಗೂ ಎಲ್ಲರ ಮೋಸ್ಟ್ ಫೆವರೆಟ್ ಎನ್ನಬಹುದು. ಅದರಲ್ಲೂ ಸೌಂದರ್ಯ ನೃತ್ಯ ಮಾಡಿರುವ ರಾ ರಾ ಹಾಡಂತೂ ಇಂದಿಗೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಹೌದು ದ್ವಾರಕೀಶ್ ಚಿತ್ರ ಬ್ಯಾನರ್ ಅಡಿಯಲ್ಲಿ ನಟ ನಿರ್ದೇಶಕ ನಿರ್ಮಾಪಕ ದ್ವಾರಕೀಶ್ ಈ ಚಿತ್ರವನ್ನು ನಿರ್ಮಿಸಿದರೆ ಖ್ಯಾತ ನಿರ್ದೇಶಕ ಪಿ. ವಾಸು ಚಿತ್ರಕಥೆ ಬರೆದು ಸಿನಿಮಾವನ್ನು ನಿರ್ದೇಶಿಸಿದ್ದರು.
ಈ ಸಿನಿಮಾ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ದ್ವಾರಕೀಶ್ ರವರಿಗೆ ದೊಡ್ಡ ಲಾಭ ತಂದುಕೊಟ್ಟಿದ್ದು ಗುರುಕಿರಣ್ ಸಂಗೀತ ನೀಡಿದ್ದ ಈ ಚಿತ್ರ 27 ಆಗಸ್ಟ್ 2004 ರಂದು ಬಿಡುಗಡೆಯಾಗಿತ್ತು. ಮನೋವೈದ್ಯನ ಪಾತ್ರದಲ್ಲಿ ಡಾ. ವಿಷ್ಣುವರ್ಧನ್ ಗಂಗಾ/ನಾಗವಲ್ಲಿ ಪಾತ್ರದಲ್ಲಿ ಸೌಂದರ್ಯ ಪತ್ನಿ ಗಂಗಾಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪತಿ ಪಾತ್ರದಲ್ಲಿ ರಮೇಶ್ ಹಾಗೂ ಸೌಮ್ಯ ಪಾತ್ರದಲ್ಲಿ ಪ್ರೇಮ ಮತ್ತು ರಾಮಚಂದ್ರ ಆಚಾರ್ಯ ಪಾತ್ರದಲ್ಲಿ ಅವಿನಾಶ್ ಹೀಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. 1993 ರಲ್ಲಿ ಬಿಡುಗಡೆಯಾಗಿದ್ದ ಮಲಯಾಳಂ ನ ಮಣಿಚಿತ್ರತಾಳ್ ರೀಮೇಕ್ ಸಿನಿಮಾ ಇದಾಗಿದ್ದು ಕನ್ನಡದಲ್ಲಿ ದೊಡ್ಡ ಹಿಟ್ ಆಗಿತ್ತು.
ಆಪ್ತಮಿತ್ರ ನಂತರ ಚಂದ್ರಮುಖಿ ಹೆಸರಿನಲ್ಲಿ ತಮಿಳು-ತೆಲುಗಿಗೆ ಹಾಗೂ ಭೂಲ್ ಬುಲಯ್ಯಾ ಹೆಸರಿನಲ್ಲಿ ಹಿಂದಿಗೆ ಕೂಡಾ ರೀಮೇಕ್ ಮಾಡಲಾಗಿದ್ದು ಆಪ್ತಮಿತ್ರ ಯಶಸ್ಸಿನ 6 ವರ್ಷಗಳ ಬಳಿಕ ಆಪ್ತರಕ್ಷಕ ಸಿನಿಮಾ ಕೂಡ ಮಾಡಲಾಯ್ತು. 19 ಫೆಬ್ರವರಿ 2010 ರಲ್ಲಿ ಆಪ್ತರಕ್ಷಕ ಸಿನಿಮಾ ಬಿಡುಗಡೆಯಾಗಿದ್ದು ಈ ಚಿತ್ರವನ್ನು ಕೂಡಾ ಪಿ. ವಾಸು ನಿರ್ದೇಶಿಸಿದ್ದರು.
ಬಹಳ ಬೇಸರದ ಸಂಗತಿ ಎಂದರೆ ಆಪ್ತಮಿತ್ರ ಸಿನಿಮಾ ಬಿಡುಗಡೆಯಾಗುವ 4 ತಿಂಗಳ ಮುನ್ನವೇ 17 ಏಪ್ರಿಲ್ 2004 ರಂದು ನಟಿ ಸೌಂದರ್ಯ ಹೆಲಿಕಾಪ್ಟರ್ ಆಘತದಲ್ಲಿ ಅಗಲಿದರು. ಅದೇ ರೀತಿ ಆಪ್ತರಕ್ಷಕ ಬಿಡುಗಡೆಗೂ 2 ತಿಂಗಳ ಮುನ್ನ ಡಾ. ವಿಷ್ಣುವರ್ಧನ್ ಹೃದಯಾಘಾತದಿಂದ ಅಗಲಿದರು. ಆಪ್ತಮಿತ್ರ ಸೌಂದರ್ಯ ಅವರ ಕೊನೆಯ ಚಿತ್ರವಾದರೆ ಇತ್ತ ಆಪ್ತರಕ್ಷಕ ವಿಷ್ಣುವರ್ಧನ್ ಅವರ ಕಡೆಯ ಸಿನಿಮಾವಾಗಿತ್ತು. ಇವೆರಡೂ ಘಟನೆಗಳನ್ನು ಕೆಲವರು ಸಿನಿಮಾದ ನಾಗವಲ್ಲಿ ಪಾತ್ರಕ್ಕೆ ಲಿಂಕ್ ಮಾಡಿದರು ಎನ್ನಬಹುದು.![Gurukiran: Learnt music after I started earning | Deccan Herald]()

ಎರಡೂ ಸಿನಿಮಾಗಳ ಚಿತ್ರೀಕರಣದ ಸಮಯದಲ್ಲಿ ಚಿತ್ರತಂಡದವರಿಗೆ ಬಹಳ ತೊಂದರೆಯಾಗಿತ್ತು ಎಂಬ ಇಲ್ಲಸಲ್ಲದ ಸುಳ್ಳುಕಥೆಗಳು ಆ ಸಮಯದಲ್ಲಿ ದೊಡ್ಡ ಸುದ್ದಿಯಾಗಿದ್ದು ಇದಿಷ್ಟೇ ಅಲ್ಲದೇ ತಮಿಳು ಹಿಂದಿಯಲ್ಲಿ ಈ ಸಿನಿಮಾ ಮಾಡಿದವರಿಗೂ ಕೂಡ ತೊಂದರೆಯಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈ ಚಿತ್ರದಲ್ಲಿ ಆಚಾರ್ಯ ರಾಮಚಂದ್ರ ಶಾಸ್ತ್ರಿ ಪಾತ್ರದಲ್ಲಿ ನಟಿಸಿದ್ದ ಹಿರಿಯ ನಟ ಅವಿನಾಶ್ ಅವರಿಗೂ ಸೌಂದರ್ಯ ವಿಷ್ಣುವರ್ಧನ್ ನಂತರ ನೀವೇ ಎಂದು ಕೆಲವರು ಹೇಳಿದ್ದರಂತೆ. ಸದ್ಯ ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವಿನಾಶ್ ಈ ವಿಚಾರವಾಗಿ ಮಾತನಾಡಿದ್ದಾರೆ.
ಎರಡು ಸಿನಿಮಾ ಚಿತ್ರೀಕರಣದ ಸಮಯದಲ್ಲಾಗಲೀ ನಂತರವಾಗಲೀ ನನಗೆ ಯಾವುದೇ ತೊಂದರೆ ಆಗಿಲ್ಲ. ಅವರಿಬ್ಬರನ್ನು ಬಿಟ್ಟರೆ ನಂತರ ನೀವೇ ಆದ್ದರಿಂದ ಶಾಂತಿ ಪೂಜೆ ಮಾಡಿಸಿ ಎಂದುಶಾಸ್ತ್ರ ಹೇಳುವವರು ನನಗೆ ಹೇಳಿದ್ದರು. ಆದರೆ ನನಗೆ ಇಂತ ವಿಚಾರಗಳಲ್ಲಿ ನಂಬಿಕೆ ಇರಲಿಲ್ಲ. ಮೂಲ ಚಿತ್ರವಾದ ಮಣಿಚಿತ್ರತಾಳ್ ನಲ್ಲಿ ನಟಿಸಿರುವ ಪ್ರತಿಯೊಬ್ಬರೂ ಈಗ ಚೆನ್ನಾಗೇ ಇದ್ದಾರೆ.
ಕೆಲವರು ನಮಗೆ ಏನೇನೋ ಅನುಭವ ಆಯ್ತು ಎಂದು ಹೇಳಿಕೊಂಡಿದ್ದು ನನಗಂತೂ ಯಾವ ಅನುಭವ ಆಗಿಲ್ಲ. ಮನೆಯಿಂದ ಹೊರಗೆ ಹೋಗಲೇಬೇಡಿ ಎಂದೂ ಕೆಲವರು ಹೇಳಿದ್ದು ಆದರೆ ನಾನು ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳಲಿಲ್ಲ. ಊರೆಲ್ಲಾ ಸುತ್ತಿ ಬಂದರೂ ನನಗೆ ಏನೂ ಆಗಲಿಲ್ಲ ನಾನು ಯಾವ ಹೋಮ,ಲ ಪೂಜೆಯನ್ನೂ ಮಾಡಿಸಲಿಲ್ಲ ಅಂದು ಅವಿನಾಶ್ ರವರು ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ.