Puneeth Rajkumar Gandhadagudi Making : ಸದ್ಯ ಗಂಧದ ಗುಡಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ಕೊನೆ ಸಿನಿಮಾವಾಗಿದ್ದು ಕಾಕತಾಳೀಯವೋ ಏನೋ ಕೊನೆ ಸಿನಿಮಾದಲ್ಲೂ ಸಂದೇಶವನ್ನು ಇಟ್ಟು ಹೊರಟು ಹೋಗಿದ್ದಾರೆ. ಹೌದು ಅದೇ ಅಪ್ಪು ಕಂಡ ಕನಸು ಈಗ ತೆರೆಮೇಲೆ ಮೂಡುತ್ತಿದ್ದು ಅಪ್ಪು ತೆರೆಮೇಲೆ ಪವರ್ಸ್ಟಾರ್ ಆಗಿ ಕಂಡಿದ್ದೇ ಹೆಚ್ಚು. ಆದರೆ ಗಂಧದ ಗುಡಿ’ಮ ಇದೂವರೆಗೂ ನಟಿಸಿದ ಸಿನಿಮಾಗಳ ಪೈಕಿ ವಿಭಿನ್ನ ಸಿನಿಮಾವಾಗಿದ್ದು ಪುನೀತ್ ರಾಜ್ಕುಮಾರ್ ಆಗಿಯೇ ತೆರೆಮೇಲೆ ಕಾಣಿಸಿಕೊಳ್ಳುವ ಅಪ್ಪು ಈ ಸಿನಿಮಾದಲ್ಲಿ ನಗಿಸುತ್ತಾರೆ.
ಅಳಿಸುತ್ತಾರೆ. ಅಚ್ಚರಿ ಮೂಡುವಂತೆ ಮಾಡುತ್ತಾರೆ.ಪವರ್ಸ್ಟಾರ್ ಅಭಿಮಾನಿಗಳಿಗೆ ಕನ್ನಡಿಗರಿಗೆ ಈ ಸಿನಿಮಾ ನಿಜಕ್ಕೂ ಸ್ಪೆಷಲ್. ಹೌದು ಯಾಕಂದರೆ ಇನ್ನು ಎಷ್ಟೇ ವರ್ಷಗಳಾದರೂ ಕರ್ನಾಟಕ ಪ್ರಕೃತಿ ಸೌಂದರ್ಯ ಹೀಗಿತ್ತು ಅನ್ನೋದಕ್ಕೆ ಇದೊಂದು ದಾಖಲೆ. ಹೌದು ಅದರಲ್ಲಿ ಸ್ವತ: ಪುನೀತ್ ರಾಜ್ಕುಮಾರ್ ಇದ್ದಾರೆ ಅನ್ನೋದು ಮತ್ತೊಂದು ದಾಖಲೆಯಾಗಿದ್ದು ಅದಕ್ಕೆ ಕನ್ನಡಿಗರು ಕೂಡ ಉತ್ಸಾಹದಿಂದಲೇ ಸಿನಿಮಾ ನೋಡುತ್ತಿದ್ದಾರೆ.
ಗಂಧದ ಗುಡಿ ಬಿಡುಗಡೆಯಾಗಿ ಇಂದಿಗೆ ನಾಲ್ಕನೇ ದಿನ. ಕಳೆದ ಮೂರು ದಿನಗಳಂತೆ ನಾಲ್ಕನೆ ದಿನವೂ ಥಿಯೇಟರ್ನಲ್ಲಿ ರೆಸ್ಪಾನ್ಸ್ ಚೆನ್ನಾಗಿದೆ. ಬುಕ್ ಮೈ ಶೋ ಪ್ರಕಾರ ಟಿಕೆಟ್ಗಳನ್ನು ಫಾಸ್ಟ್ ಆಗಿ ಖರೀದಿ ಮಾಡುತ್ತಿದ್ದು ಭಾನುವಾರ ಬೆಳಗ್ಗೆ ಹೊತ್ತಿಗೆ ಗಂಧದ ಗುಡಿ ಸಿನಿಮಾ ರಿಲೀಸ್ ಆದ ಕಡೆಗಳಲ್ಲೆಲ್ಲಾ ಸುಮಾರು ಶೇ.80ರಷ್ಟು ಬುಕಿಂಗ್ ಆಗಿದೆ. ಹೀಗಾಗಿ ಇಂದು ಸಿನಿಮಾ ಗಳಿಕೆ ಜೋರಾಗಿರುತ್ತೆ ಅನ್ನೋದನ್ನು ನಿರೀಕ್ಷೆ ಮಾಡಲಾಗುತ್ತಿದೆ. ಇನ್ನು ಪುನೀತ್ ರಾಜ್ಕುಮಾರ್ ಗಂಧದ ಗುಡಿಗೆ ಪ್ರೇಕ್ಷಕರು ಹಿಂದೆಂದೂ ನೀಡದಷ್ಟು ರೆಸ್ಪಾನ್ಸ್ ಕೊಟ್ಟಿದ್ದು ಕುಟುಂಬ ಸಮೇತ ಪ್ರೇಕ್ಷಕರು ಥಿಯೇಟರ್ಗೆ ಬಂದು ಸಿನಿಮಾ ನೋಡುತ್ತಿದ್ದಾರೆ.
ಗಂಧದಗುಡಿ ದಿವಂಗತ ನಟ ಪುನೀತ್ ರಾಜ್ಕುಮಾರ್ ಕನಸಿನ ಪ್ರಾಜೆಕ್ಟ್. ಕರ್ನಾಟಕದ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಜಗತ್ತನ್ನು ಇದರಲ್ಲಿ ಅನಾವರಣ ಮಾಡಲಾಗಿದೆ. ಈಗಾಗಲೇ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದು ಪಿಆರ್ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಮಡ್ಸ್ಕಿಪರ್ ಸಂಸ್ಥೆ ಜಂಟಿಯಾಗಿ ಈ ವೈಲ್ಡ್ ಡಾಕ್ಯುಮೆಂಟರಿ ನಿರ್ಮಾಣ ಮಾಡಿವೆ. ಸದ್ಯ ಸಿನಿಮಾ ಚಿತ್ರೀಕರಣದ ವೇಳೆ ಅಶ್ವಿನಿ ಹಾಗೂ ಪುನೀತ್ ರಾಜ್ ಕುಮಾರ್ ರವರು ಕಳೆದ ಕೆಲ ಕ್ಷಣದ ವಿಡಿಯೋ ವೈರಲ್ ಆಗುತ್ತಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಮೇಕಿಂಗ್ ವಿಡಿಯೋ ದಲ್ಲಿ ಪುನೀತ್ ರಾಜ್ಕುಮಾರ್ ಕ್ಯಾಮರಾ ಹಿಡಿದು ಶೂಟಿಂಗ್ ವೇಳೆ ಎಷ್ಟು ಖುಷಿ ಖುಷಿಯಾಗಿ ಕಾಲ ಕಳೆದಿದ್ದಾರೆ ಎನ್ನುವುದನ್ನು ನೋಡಬಹುದಾಗಿತ್ತು. ತಂಡದ ಸದಸ್ಯರೊಬ್ಬರು ಜಗ್ಗೇಶ್ ಸಿನಿಮಾಗಳ ಸನ್ನಿವೇಶಗಳನ್ನು ಅಭಿನಯಿಸಿ ತೋರಿಸುತ್ತಿದ್ದು ಅದನ್ನು ನೋಡಿ ಎಂಜಾಯ್ ಮಾಡುತ್ತಾ ಪುನೀತ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು.
ನಂತರ ತಾವು ಕೂಡ ಅದನ್ನು ಮಾಡಿ ತೋರಿಸಿದ್ದರು. ಈ ವಿಡಿಯೋದಲ್ಲಿ ನಗುವಿನ ರಾಜಕುಮಾರನನ್ನು ಕಂಡು ಅಭಿಮಾನಿಗಳು ಬೇಸರಗೊಂಡಿದ್ದರು. ಸದ್ಯ ಈಗ ಬಿಡುಗಡೆ ಯಾಗಿರುವ ವಿಡಿಯೋ ದಲ್ಲಿ ಅಶ್ವಿನಿ ಅವರ ಜೊತೆ ಕಾಡಿನಲ್ಲಿ ಅಪ್ಪು ಹೇಗೆ ಕಾಲ ಕಳೆದಿದ್ದಾರೆ ನೋಡಿ.