ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಶ್ವಿನಿ ಮೇಡಂ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸಿದ್ದಾರೆ ನೋಡಿ….

663

ನಟ ಪುನೀತ್​ ರಾಜ್​ಕುಮಾರ್​ ರವರು ಇಂದು ಭೌತಿಕವಾಗಿ ನಮ್ಮ ಜೊತೆ ಇಲ್ಲದೇ ಇರಬಹುದು. ಹೌದು ಆದರೆ ಅವರ ನೆನಪು ಸದಾ ಶಾಶ್ವತ. ಎಲ್ಲ ವಿಶೇಷ ಸಂದರ್ಭಗಳಲ್ಲೂ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಹಬ್ಬ-ಹರಿದಿನಗಳಲ್ಲಿ ಅಪ್ಪು ಬಹುವಾಗಿ ನೆನಪಾಗುತ್ತಾರೆ. ಪ್ರತಿ ಹಬ್ಬಕ್ಕೂ ಅವರು ಮನಸಾರೆ ವಿಶ್​ ಮಾಡುತ್ತಿದ್ದು ಆ ವಿಡಿಯೋಗಳು ಈಗ ವೈರಲ್​ ಆಗುತ್ತಿವೆ. ಹೌದು ಈ ಹಿಂದೆ ದೀಪಾವಳಿ ಹಬ್ಬಕ್ಕೆ ಪುನೀತ್​ ರಾಜ್​ಕುಮಾರ್​ ಅವರು ಎಲ್ಲ ಅಭಿಮಾನಿಗಳಿಗೆ ಶುಭ ಕೋರಿದ್ದು ಆ ವಿಡಿಯೋಗಳನ್ನು ಈಗ ಫ್ಯಾನ್ಸ್​ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಈ ವಿಡಿಯೋಗಳನ್ನು ನೋಡಿದರೆ ನಿಜವಾಗಿಯೂ ಪುನೀತ್​ ರಾಜ್​ಕುಮಾರ್​ ಅವರು ಮೇಲಿಂದ ಎಲ್ಲ ಅಭಿಮಾನಿಗಳಿಗೆ ಶುಭ ಕೋರುತ್ತಿದ್ದಾರೆ ಎನಿಸುತ್ತದೆ. ಅವರು ನಮ್ಮ ನಡುವೆ ಇಲ್ಲವಲ್ಲ ಎಂಬ ಸತ್ಯ ಅರಿವಾದಾಗ ಹೃದಯ ಭಾರ ಆಗುತ್ತದೆ. ಪ್ರತಿ ಸಂದರ್ಭದಲ್ಲೂ ಅಭಿಮಾನಿಗಳು ಅವರನ್ನು ಮಿಸ್​ ಮಾಡಿಕೊಳ್ಳುತ್ತಲೇ ಇದ್ದಾರೆ. ರಸ್ತೆ ಪಾರ್ಕ್​ ವೃತ್ತ ಮುಂತಾದವುಗಳಿಗೆ ಪುನೀತ್​ ರಾಜ್​ಕುಮಾರ್​ ಅವರ ಹೆಸರನ್ನು ಇಡುವ ಮೂಲಕ ನಮನ ಸಲ್ಲಿಸಲಾಗುತ್ತಿದೆ.

ಎಲ್ಲ ವಿಶೇಷ ಸಂದರ್ಭದಲ್ಲೂ ಅಪ್ಪು ಪೋಟೋ ಹಿಡಿದು ಬರುತ್ತಾರೆ ಅಭಿಮಾನಿಗಳು.ಸದ್ಯ ಈ ನೋವಿನಲ್ಲಿಯೇ ಅಶ್ವಿನಿ ಕುಮಾರ್ ರವರು ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಾಕ್ಷ್ಯಚಿತ್ರ ಕನ್ನಡ ನಾಡು ನುಡಿಯ ಬಗ್ಗೆ ಸಹಜವಾಗಿ ಅಭಿನಯಿಸಿ ತೋರಿಸಿರುವ ಚಿತ್ರ ಬಿಡುಗಡೆಯಾಗಿದ್ದು ದಾಖಲೆ ಬರೆದಿದೆ.

ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಕೊನೆಯ ಬಾರಿಗೆ ದೊಡ್ಡ ಪರದೆಯ ಮೇಲೆ ನೋಡಿ ಭಾವುಕರಾಗಿದ್ದು ಕನ್ನಡಿಗರಿಗೆ ಪುನೀತ್ ಅಭಿಮಾನಿಗಳಿಗೆ ಇದೊಂದು ರೀತಿಯಲ್ಲಿ ಹಬ್ಬ. ಕಳೆದ ವರ್ಷ ಅಕ್ಟೋಬರ್ 29ರಂದು ಪುನೀತ್ ರಾಜ್ ಕುಮಾರ್ ಹಠಾತ್ ಆಗಿ ಹೃದಯಾಘಾತದಿಂದ ಅಗಲಿಕೆ ಹೊಂದಿದ ನಂತರ ಅವರ ಪತ್ನಿ ಅಶ್ವಿನಿಯವರು ಸಾರ್ವಜನಿಕವಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಯಾವ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ.

ಇದೀಗ ಗಂಧದ ಗುಡಿ ಚಿತ್ರದ ಬಿಡುಗಡೆ ಸಮಯದಲ್ಲಿ ಚಿತ್ರದ ತೆರೆಯ ಹಿಂದಿನ ಪಯಣವನ್ನು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರೊಂದಿಗೆ ಸಂದರ್ಶನದಲ್ಲಿ ವಿವರಿಸಿದ್ದಾರೆ. ಇನ್ನು ಈ ನಡುವೆ ದೀಪಾವಳಿ ಹಬ್ಬವನ್ನು ಅಶ್ವಿನಿ ಅವರು ಆಚರಿಸುವ ವಿಚಾರ ಇದೀಗ ಬೆಳಕಿಗೆ ಬಂದಿದ್ದು ಹಿರಿಯ ಮಗಳು ಧೃತಿ ಯವರು ನ್ಯೂಯಾರ್ಕ್ ನಲ್ಲಿ ಇರುವ ಕಾರಣ ಎರಡನೇ ಪುತ್ರಿ ವಂದಿತ ಅವರ ಜೊತೆಯೇ ಅಶ್ವಿನಿ ಮೇಡಂ ದೀಪಾವಳಿ ಹಬ್ಬ ಆಚರಿಸಿದ್ದಾರೆ.

ಹೌದು ಮಗಳಿಗೆ ತಂದೆ ಇಲ್ಲ ಎಂಬ ಕೊರಗು ಕಾಡಬಾರದು ಎಂಬ ಕಾರಣಕ್ಕಾಗಿ ಅಶ್ವಿನಿ ಮೇಡಂರವರು ಹಬ್ಬ ಹರಿದಿನಗಳನ್ನು ಮನೆಯಲ್ಲಿಯೇ ಆಚರಿಸುತ್ತಿದ್ದು ಇದೀಗ ಕಿರಿಯ ಮಗಳು ವಂದಿತ ಜೊತೆ ಪಟಾಕಿ ಹೊಡೆಯುವ ಮೂಲಕ ದೀಪಾವಳಿ ಹಬ್ಬ ಆಚರಿಸಿದ್ದಾರೆ.