ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಚಂದನ್ ಶೆಟ್ಟಿ ಜೊತೆ ವಂಶಿಕಾ ಡ್ಯಾನ್ಸ್ ನೋಡಿ…ಚಿಂದಿ ವಿಡಿಯೋ

5,168

Vanshika Dance To Chandan Song : ನನ್ನಮ್ಮ ಸೂಪರ್ ಸ್ಟಾರ್ ಗಿಚ್ಚಿ ಗಿಳಿಗಿಲಿ ಶೋನಲ್ಲಿ ಅದ್ಭುತವಾದ ನಟನೆ ಡೈಲಾಗ್ ಮೂಲಕ ಎಲ್ಲರ ಗಮನಸೆಳೆದ ಬಿಜಲಿ ಪಟಾಕಿ ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ಅವರ ಮಗಳು ವಂಶಿಕಾ ಅಂಜನಿ ಕಶ್ಯಪ ಅವರು ಈಗ ಸಿನಿಮಾ ರಂಗಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದು ಇತ್ತೀಚೆಗೆ ಶಾಲೆಗೆ ಹೋಗಲು ಶುರುಮಾಡಿರುವ ವಂಶಿಕಾ ರವರು ರಿಯಾಲಿಟಿ ಶೋಕ ನಂತರ ಲವ್ ವಂಶಿಕಾ ಸಿಂಹ ನಟನೆಯ ಸಿನಿಮಾದಲ್ಲಿ ನಟಿಸಿದ್ದಾರೆ. ಹೌದು ನಟಿಸುವಾಗ ಇದನ್ನು ವಸಿಷ್ಠ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.

ನನ್ನಮ್ಮ ಸೂಪರ್ ಸ್ಟಾರ್ ವಂಶಿಕಾ ಅವರ ಮೊದಲ ಪ್ರೋಮೋ ರಿಲೀಸ್ ಆಗಿದ್ದರಿಂದ ಎಲ್ಲರಿಗೂ ಇಷ್ಟಪಟ್ಟಿದ್ದು ವಂಶಿಕಾ ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದಂತೂ ಸುಳ್ಳಲ್ಲ. ಹೌದು ಅದಾದ ನಂತರ ಸಿನಿಮಾ ವೆಬ್ ಸಿರೀಸ್ ನಲ್ಲಿ ನಟಿಸುವ ಆಫರ್ ಹುಡುಕಿಕೊಂಡು ಬಂದಿದೆ ಎಂದು ಮಾಸ್ಟರ್ ಆನಂದ್ ಹೇಳಿಕೊಂಡಿದ್ದಾರೆ.

ನನ್ನ ಮಗಳು ಈಗ ತಾನೇ ಶಾಲೆಗೆ ಹೋಗಲು ಪ್ರಾರಂಭ ಮಾಡಿದ್ದು ಅವಳಿಗೆ ಇಷ್ಟ ಆದರೆ ಅವಳು ನಟಿಸಲಿ. ಮುಂದೆ ಅವಳು ನಟನೆಯಲ್ಲಿ ಮುಂದುವರಿಯಬಹುದು ಬೇರೆ ರಂಗ ಆಯ್ಕೆ ಮಾಡಿಕೊಳ್ಳಬಹುದಾಗಿದ್ದರೆ ಅದು ಅವಳ ಇಷ್ಟ. ಇನ್ನು ನಾನು ಯಾವುದೇ ಕಾರಣಕ್ಕೂ ಒತ್ತಾಯ ಹೇರೋದಿಲ್ಲ ಎಂದು ಮಾಸ್ಟರ್ ಆನಂದ್ ಹೇಳಿದ್ದಾರೆ. ವಸಿಷ್ಠ ಹೀರೋ ಆಗಿ ನಟಿಸ್ತಿರುವ ಲವ್ ಲಿ ಸಿನಿಮಾದಲ್ಲಿ ಬೈಕ್ ಮೇಲೆ ಕುಳಿತು ಧಮ್ ಹೊಡೆಯುತ್ತಾ ಸಖತ್ ಸ್ಟೈಲೀಶ್ ಲುಕ್‌ನಲ್ಲಿ ವಸಿಷ್ಠ ಸಿಂಹ ನಟಿಸಿರುವ ಪೋಸ್ಟರ್ ರಿಲೀಸ್ ಆಗಿದೆ.

ಇದು ಕಮರ್ಷಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು ರೊಮ್ಯಾನ್ಸ್-ಲವ್ ಸ್ಟೋರಿ ಜೊತೆಗೆ ರೌಡಿಸಂ ವಿಭಿನ್ನ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದೆ. ಹೌದು ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ಲವ್ಲಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಚಿತ್ರಕ್ಕೆ ವಂಶಿಕಾಗೆ ಬರೋಬ್ಬರಿ ಐದು ಲಕ್ಷ ರು ಸಂಭಾವನೆ ನೀಡಲಾಗಿದೆ. ಸದ್ಯ ಇದೀಗ ವಂಶಿಕಾ ಹವಾ ಸಿಕ್ಕಾಪಟ್ಟೆ ಜೋರಾಗಿದೆ ಎನ್ನಬಹುದು. ಹೌದು ಸಾಕಷ್ಟು ಸಿನಿಮಾ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದೀಗ ಚೆಂದನ್ ಶೆಟ್ಟಿ ಯವರ ಜೊತೆ ವೇದಿಕೆ ಮೇಲೆ ಹೇಗೆ ಕುಣಿದಿದ್ದಾರೆ ನೀವೆ ನೋಡಿ.