ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಯುವಕನನ್ನು ಎತ್ತಿ ತಿರುಗಿಸಿದ ಪಂಜುರ್ಲಿ ದೈವ…ನೋಡಿ ವಿಡಿಯೋ

2,108

Kanteri Jumadi Banta Billu Pagari, Kandettu: ಸದ್ಯ ಕಾಂತಾರ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು ಮೊದಲಿಗೆ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ಈ ಮಟ್ಟಿಗೆ ಕಲೆಕ್ಷನ್ ಮಾಡುತ್ತದೆ ಎಂಬ ಊಹೆ ಯಾರಿಗೂ ಕೂಡ ಇರಲಿಲ್ಲ. ಸ್ವತಃ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೂ ಕೂಡ ತಮ್ಮ ಕಾಂತಾರ ಚಿತ್ರ ಇಷ್ಟೊಳ್ಳೆ ಕಲೆಕ್ಷನ್ ಮಾಡಲಿದೆ ಎಂಬ ಅಂದಾಜೂ ಕೂಡ ಇರಲಿಲ್ಲ ಎನ್ನಬಹುದು.

ಈ ಕಾರಣದಿಂದಾಗಿ ಚಿತ್ರವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡದೇ ಕೇವಲ ಕನ್ನಡ ಭಾಷೆಯಲ್ಲಿ ಮಾಡಿತ್ತು ಕಾಂತಾರ ಚಿತ್ರತಂಡ. ಹೌದು ಆದರೆ ಕನ್ನಡದಲ್ಲಿಯೇ ನೆರೆ ರಾಜ್ಯದ ಚಿತ್ರಮಂದಿರಗಳಲ್ಲಿ ಕಾಂತಾರ ತುಂಬಿದ ಪ್ರದರ್ಶನ ಕಾಣಲು ಆರಂಭಿಸಿದ್ದು ಪರಭಾಷಾ ಸಿನಿ ಪ್ರೇಕ್ಷಕರಿಂದ ಚಿತ್ರವನ್ನು ಡಬ್ ಮಾಡುವಂತೆ ಮನವಿಗಳು ಕೇಳಿಬಂದವು. ಇದರಿಂದಾಗಿ ಪ್ರೇರೇಪಿತಗೊಂಡ ಕಾಂತಾರ ತಂಡ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ಮಾರ್ಪಾಡು ಮಾಡಿತು.

ಸದ್ಯ ಈ ವಾರ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ ನಾಲ್ಕು ಸಿನಿಮಾಗಳು ಬಿಡುಗಡೆ ಆಗಿದ್ದವು. ಹೌದು ಅದರಲ್ಲಿ ಚಿತ್ರರಂಗದ ಬಹುಮುಖ ಪ್ರತಿಭೆ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಕೂಡ ಒಂದಾಗಿದ್ದು ಸಿನಿಮಾದ ಬಗ್ಗೆ ಬಹುತೇಕ ಪಾಸಿಟಿವ್ ರಿವ್ಯು ಬಂದಿರುವ ಕಾರಣದಿಂದಾಗಿ ಶುಕ್ರವಾರ ಬಿಡುಗಡೆ ಕಂಡ ಬಹುತೇಕ ಚಿತ್ರಮಂದಿರಗಳಲ್ಲಿ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಇದೀಗ ಈ ಚಿತ್ರದ ನಂತರ ಭೂತಕೋಲದ ವಿಡಿಯೋಗಳು ವಾಟ್ಸಾಪ್ ನಲ್ಲಿ ವೈರಲ್ ಆಗುತ್ತಿವೆ. ಅದರ ವಿಡಿಯೋ ನೋಡಿ.