ಕ್ರೀಡೆ ಎಂದ ಮೇಲೆ ಅಲ್ಲಿ ಗಲಾಟೆ, ಜಗಳ, ಮಾತಿಗೆ ಮಾತು ಬೆಳೆಯುವುದು ಮಾಮೂಲಿ. ಆದರೆ, ಅದು ಅತಿರೇಕಕ್ಕೆ ಹೋಗಬಾರದು ಅಷ್ಟೆ. ಆದರೆ, ಇಲ್ಲೊಂದು ಘಟನೆ ನಡೆದಿದೆ. ಫುಟ್ಬಾಲ್ ಪಂದ್ಯವೊಂದರಲ್ಲಿ ಗೋಲ್ ಕೀಪರ್ ತನ್ನದೇ ತಂಡದ ಆಟಗಾರನಿಗೆ ಅದುಕೂಡ ಪಂದ್ಯದ ಮಧ್ಯೆಯೇ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ.
ಇದು 2021 ರಲ್ಲಿ ಐರಿಶ್ ಪ್ರೀಮಿಯರ್ಶಿಪ್ ಟೀಮ್ ಗ್ಲೆಂಟೊರೆನ್ನ ಗೋಲ್ ಕೀಪರ್ ಆ್ಯರೋನ್ ಮ್ಯಾಕೆರೆ ತಮ್ಮದೇ ತಂಡದ ಆಟಗಾರ ಬಾಬಿ ಬರ್ನ್ಸ್ಗೆ ಮೈದಾನದಲ್ಲಿ ಹೊಡೆದಿದ್ದಾರೆ. ಪಂದ್ಯ ಆರಂಭವಾಗಿ 80 ನಿಮಿಷ ಕಳೆದ ಬಳಿಕ ಕೊಲೆರೈನ್ ತಂಡದ ಕ್ಯಾಥಿರ್ ಫ್ರೈಲ್ ಗೋಲು ಬಾರಿಸುವ ಮೂಲಕ ಪಂದ್ಯವನ್ನು 2-2 ಅಂತರದಿಂದ ಸಮಬಲ ಸಾಧಿಸಿದರು. ಇದು ಎರಡು ವರ್ಷದ ಹಿಂದಿನ ವೀಡಿಯೋ ಆಗಿದ್ದು ಇದೀಗ ಅದರ ಬೆನ್ನಲ್ಲೆ ಇನ್ನೊಂದು ವೀಡಿಯೋ ಸಹ ಸದ್ದು ಮಾಡುತ್ತಿದೆ.
ವೈರಲ್ ಆಯ್ತು ಗೋಲ್ ಕೀಪರ್ ವೀಡಿಯೋ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ವೈರಲ್ ಆಗಿದೆ. ಇದು ಚೀನಾ ಮೂಲದ ವೀಡಿಯೋ ಆಗಿದ್ದು ಇದರಲ್ಲಿ ಗೋಲ್ ಕೀಪರ್ ಗಳ ವಿಶೇಷ ಚಾಕಚಕ್ಯತೆಯನ್ನು ಕಾಣಬಹುದು. ಆರ್ಟ್ ಸಾಕರ್ ಅನ್ನೊ ಯೂಟ್ಯೂಬ್ ಚಾನೆಲ್ ಮೂಲಕ ವೀ ಅಪ್ಲೋಡ್ ಮಾಡಲಾಗಿದೆ. 2.1ಕೋಟಿಗೂ ಅಧಿಕ ವೀಕ್ಷಿಸಲ್ಪಟ್ಟ ವೀಡಿಯೋ ಇದಾಗಿದ್ದು ಉತ್ತಮ ಲೈಕ್ಸ್ ಪಡೆದಿದೆ. ಇದರಲ್ಲಿ ಅಸಾಧ್ಯವಾದ ಸನ್ನಿವೇಶವನ್ನು ಸಾಧ್ಯವಾಗಿಸಿದ್ದ ಗೋಲ್ ಕೀಪರ್ ಸಾಧನೆಯ ಕಾಣಬಹುದು. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.