ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸತ್ಯ ಸೀರಿಯಲ್ ಸಾಗರ್ ನಿಶ್ಚಿತಾರ್ಥ ಊಟದ ಕಾಮಿಡಿ ನೋಡಿ…ವಿಡಿಯೋ

22,406

Sathya Kannada Serial Karthik Engagement with SiriRaju: ಸತ್ಯ ಎಂಬ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು ಕಿರುತೆರೆಯಲ್ಲಿ ಸಣ್ಣ ಸಣ್ಣ ಪಾತ್ರಗಳ ಮೂಲಕ ಬಣ್ಣ ಹಚ್ಚಿದ ಸಾಗರ್ ಬಿಳಿ ಗೌಡ ತವರಿಗೆ ಸತ್ಯ ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿದೆ ಎನ್ನಬಹುದು. ಹೌದು ಸಾಗರ್ ಬಿಳಿ ಗೌಡ ಅವರು ಕಾರ್ತಿಕ್ ಅಂದರೆ ಅಮುಲ್ ಬೇಬಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದು ಸಾಗರ್ ಬಿಳಿ ಗೌಡ ರವರಿಗೆ ನಟಿಸುವುದು ಎಂದರೆ ತುಂಬಾನೇ ಇಷ್ಟ.

ಹೌದು ನಟನಾಗುವ ಆಸೆಯಿಂದ ಕೆಲ ತರಬೇರಿಗಳನ್ನು ಸಹ ವಿದೇಶದಲ್ಲಿ ಪಡೆದವರು. ಇನ್ನು ಸಾಗರ್ ರವರು ಲಂಡನ್ ನಲ್ಲಿ ಎಂಬಿಎ ಓದಿದ್ದು ಭಾರತದಲ್ಲಿ ಮಾಸ್ಟರ್ ಇನ್ ಬಿಸಿನೆಸ್ ಲಾ ಕೂಡ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಓದಿದ ಮೇಲೂ ಮನಸೆಲ್ಲಾ ಇದ್ದದ್ದು ಮಾತ್ರ ಅಭಿನಯರಂಗದಲ್ಲಿ. ಹೌದು ಹಾಗಾಗಿ ಸಾಗರ್ ರವರು ಅಭಿನಯ ತರಬೇತಿ ಕೇಂದ್ರಕ್ಕೆ ಸೇರಿಕೊಂಡಿದ್ದು ನಟನಾ ಶಾಲೆಗೆ ಸೇರಿಕೊಂಡರು. ಬಳಿಕ ವಿದೇಶಕ್ಕೆ ತೆರಳಿ ಆರು ತಿಂಗಳ ಕಾಲ ಅಡ್ವಾನ್ಸ್ ಆಕ್ಟಿಂಗ್ ಕೋರ್ಸ್ ಕೂಡ ಮಾಡಿದ್ದಾರೆ.

ಇನ್ನು ಆಕ್ಟಿಂಗ್ ಕೋರ್ಸ್ ಎಲ್ಲಾ ಮುಗಿದ ಬಳಿಕ ಸಾಗರ್ ಅವರು ಕಿರುತೆರೆಗೂ ಕೂಡ ಎಂಟ್ರಿ ಕೊಟ್ಟರು. ಹೌದು ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ಇದರಲ್ಲಿ ಮನೆ ಕೆಲಸದವನ ಪಾತ್ರ ಮಾಡಿದ್ದರು. ತದ ನಂತರ ಸಾಗರ್ ಅವರಿಗೆ ಉದಯ ಟಿವಿಯಲ್ಲಿ ಮೂಡಿ ಬಂದ ಮನಸಾರೆ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿದ್ದು ಇದರಲ್ಲಿ ಸಾಗರ್ ತಲೆಹರಟೆ ತುಂಟಾಟ ತಮಾಷೆ ಮಾಡಿಕೊಂಡು ನಟಿಸಿದ್ದರು.

ಇದರ ಬಳಿಕ ಸತ್ಯ ಧಾರಾವಾಹಿಯಲ್ಲಿ ನಾಯಕ ನಟನ ಪಾತ್ರವನ್ನು ನಿಭಾಯಿಸುತ್ತಿದ್ದು ಈಗಾಗಲೇ ಸುಮಾರು ಎರಡು ವರ್ಷಗಳಿಂದ ಮೂಡಿ ಬರುತ್ತಿರುವ ಸತ್ಯ ಧಾರಾವಾಹಿಯಲ್ಲಿ ಸಾಗರ್ ರವರ ಪಾತ್ರವನ್ನು ಎಲ್ಲರೂ ಕೂಡ ಮೆಚ್ಚಿಕೊಂಡಿದ್ದಾರೆ. ಇನ್ನು ಸಾಗರ್ ಬಿಳಿ ಗೌಡ ರವರು ತಮ್ಮ ಜೀವನದ ಮುಖ್ಯ ಹಂತವನ್ನು ತಲುಪಿದ್ದು ಅದೇನೆಂದರೆ ಕಿರುತೆರೆಯ ಜೋಡಿಗಳ ಸಾಲಿಗೆ ಸಾಗರ್ ಕೂಡ ಸೇರಲಿದ್ದಾರೆ.

ಕಳೆದ ವರ್ಷ ನಡೆದ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಸಾಗರ್ ಅವರು ತಮಗೆ ಬೈಕ್ ಕಾರುಗಳೆಂದರೆ ಬಹಳ ಪ್ರೀತಿ. ಅದು ಬಿಟ್ಟು ಯಾವುದೇ ಹುಡುಗಿಯ ಮೇಲೂ ಲವ್ ಇಲ್ಲ ಎಂದಿದ್ದರು. ಹೌದು ಆದರೆ ಇದೀಗ ಕಿರುತೆರೆ ನಟಿಯೊಂದಿಗೆ ಉಂಗುರ ಬದಲಾಯಿಸಿಕೊಳ್ಳಲು ಸಜ್ಜಾಗಿದ್ದು ತಮ್ಮ ಪ್ರೇಯಸಿಯನ್ನು ಅಭಿಮಾನಿಗಳಿಗೆ ಪರಿಚಯಿಸಿ ಶಾಕ್ ಕೊಟ್ಟಿದ್ದಾರೆ. ಹೌದು ಅದು ಬೇರೆ ಯಾರೂ ಅಲ್ಲ. ಎಲ್ಲರಿಗೂ ಗೊತ್ತಿರುವ ನಟಿ ಸಿರಿ ರಾಜು ಅವರು.

ಮಾಡೆಲ್ ಕಮ್ ಕಿರುತೆರೆ ನಟಿಯಾಗಿರುವ ಸಿರಿ ರಾಜು ಕೂಡ ಬಣ್ಣದ ಲೋಕದವರೇ. ಈಗಾಗಲೇ ಕೆಲ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಂಡಿದ್ದು ವಿಜಯ್ ರಾಘವೇಂದ್ರ ಅವರೊಂದಿಗೆ ಎಫ್ಐಆರ್ 6ಟು6 ಎಂಬ ಸಿನಿಮಾದಲ್ಲಿ ನಟಿಸಿದ್ದರೆ. ಇನ್ನು ನಾಲ್ಕು ವರ್ಷಗಳ ಹಿಂದೆಯೇ ಇದಂ ಪ್ರೇಮಂ ಜೀವನಂ ಎಂಬ ಸಿನಿಮಾದಲ್ಲೂ ಕೂಡ ನಟಿಸಿದ್ದು ಇನ್ನು ಕೆಲ ಧಾರಾವಾಹಿ ಹಾಗೂ ವೆಬ್ ಸೀರೀಸ್ ಗಳಲ್ಲಿ ಸಿರಿ ರಾಜು ಅವರು ನಟಿಸಿದ್ದಾರೆ.

ಸದ್ಯ ಸಿರಿ ರಾಜು ಹಾಗೂ ಸಾಗರ್ ಬಿಳಿಗೌಡ ಈಗ ಪ್ರೇಮ ಲೋಕದಲ್ಲಿದ್ದು ಇಬ್ಬರೂ ಪ್ರೀತಿಸಿ ಈಗ ಮದುವೆಯಾಗುವ ಹಂತವನ್ನೂ ತಲುಪಿದ್ದಾರೆ. ಈಗಾಗಲೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಯ ಮದುವೆ ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ. ಈ ಸಂತಸದ ಸುದ್ದಿಯನ್ನು ಸಿರಿ ರಾಜು ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದು ನನ್ನ ಬದುಕಿನ ಅತ್ಯತ್ತಮ ವ್ಯಕ್ತಿ ಎಂದು ಪರಿಚಯಿಸಿದ್ದಾರೆ. ಇನ್ನು ಸಾಗರ್ ಬಿಳಿಗೌಡ ಅವರು ಕೂಡ ಇಬ್ಬರ ವಿಡಿಯೋ ವೊಂದನ್ನು ಶೇರ್ ಮಾಡಿಕೊಂಡಿದ್ದು ಈ ವಿಡಿಯೋ ಎಷ್ಟು ಕ್ಯೂಟ್ ಇದೆ ನೀವೆ ನೋಡಿ.