ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅವಾರ್ಡ್ ಪಡೆಯಲು ರಶ್ಮಿಕಾ ಬಂದಿದ್ದು ಹೇಗೆ ನೋಡಿ…ಚಿಂದಿ ವಿಡಿಯೋ

325

National Crush Rashmika Mandanna’s cute moments: ನಮ್ಮ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಹಾಗೂ ಹೆಮ್ಮೆಯ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಈಗ ಖುಷಿಯ ಕಡಲಲ್ಲಿ ತೇಲುತ್ತಿದ್ದಾರೆ. ಎಲ್ಲ ಭಾಷೆಗಳಿಂದಲೂ ಕೂಡ ಅವರಿಗೆ ಆಫರ್​ ಬರುತ್ತಿದ್ದು ಅಲ್ಲದೇ ಈಗಾಗಲೇ ನಟಿಸಿದ ಸಿನಿಮಾಗಳಿಗೆ ಪ್ರಶಸ್ತಿಗಳು ಸಿಕ್ಕಿವೆ. ಇನ್ನು ಬಣ್ಣದ ಲೋಕದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಅವರು ಮುನ್ನುಗ್ಗುತ್ತಿದ್ದು ಇತ್ತೀಚೆಗೆ ನಡೆದ ಸೈಮಾ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಮಿರಿಮಿರಿ ಮಿಂಚಿದ್ದಾರೆ.

ಹೌದು ಈ ಕಾರ್ಯಕ್ರಮದಲ್ಲಿ ಅವರಿಗೆ ಎರಡು ಪ್ರಶಸ್ತಿಗಳು ಸಿಕ್ಕಿರುವುದು ವಿಶೇಷವಾಗಿದ್ದು ಆ ಖುಷಿಯ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. 2019ರಲ್ಲಿ ತೆರೆಕಂಡ ಸಿನಿಮಾಗಳು ಈ ಪ್ರಶಸ್ತಿ ಕಣದಲ್ಲಿ ಸ್ಪರ್ಧಿಸಿದ್ದು ಕನ್ನಡದಲ್ಲಿ ನಟಿಸಿದ ಯಜಮಾನ ಹಾಗೂ ತೆಲುಗಿನಲ್ಲಿ ನಟಿಸಿದ ಡಿಯರ್​ ಕಾಮ್ರೇಡ್​ ಚಿತ್ರಗಳಿಗೆ ರಶ್ಮಿಕಾ ಪ್ರಶಸ್ತಿ ಪಡೆದಿದ್ದು ಅತ್ಯುತ್ತಮ ನಟಿ (ಕ್ರಿಟಿಕ್ಸ್​) ಅವಾರ್ಡ್​ ಅವರಿಗೆ ದೊರಕಿದೆ.

ಹೌದು ಇದು ಅವರ ಅಭಿಮಾನಿಗಳಿಗೂ ಹೆಮ್ಮೆ ತಂದಿದ್ದು ಕೆಂಪು ಬಣ್ಣದ ಗೌನ್​ ಧರಿಸಿ ಎರಡು ಟ್ರೋಫಿಗಳನ್ನು ಕೈಯಲ್ಲಿ ಹಿಡಿದು ರಶ್ಮಿಕಾ ಪೋಸ್​ ನೀಡಿದ್ದಾರೆ. ಇನ್ನು ಈ ಫೋಟೋಗಳು ಅವರ ಫ್ಯಾನ್ಸ್ ಪೇಜ್​ಗಳಲ್ಲಿ ವೈರಲ್​ ಆಗುತ್ತಿವೆ. ಹೌದು ನಟಿ ರಶ್ಮಿಕಾ ಮಂದಣ್ಣ ಅವರು ಕೆಂಪು ಬಣ್ಣದ ಗೌನ್ ನಲ್ಲಿ ಇದೇ ಮೊದಲ ಬಾರಿಗೆ ಸಿಕ್ಕಾಪಟ್ಟೆ ಹಾಟ್ ನಲ್ಲಿ ಕಾಣಿಸಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.

ಕಳೆದ ರಾತ್ರಿ ಸ್ಪೆಷಲ್​ ಆಗಿತ್ತು. ಯಜಮಾನ ಹಾಗೂ ಡಿಯರ್​ ಕಾಮ್ರೇಡ್​ ಚಿತ್ರಗಳಿಗಾಗಿ ಕನ್ನಡ ಹಾಗೂ ತೆಲುಗಿನಲ್ಲಿ ಪ್ರಶಸ್ತಿ ಪಡೆದಿದ್ದೇನೆ. ಮುಂದೊಂದು ದಿನ ಹಿಂದಿ ಮಲಯಾಳಂ ಮತ್ತು ತಮಿಳಿನಲ್ಲಿಯೂ ಪಡೆಯುತ್ತೇನೆ. ಥ್ಯಾಂಕ್ಯೂ ಸೈಮಾ. ನನ್ನನ್ನು ನಟಿಯಾಗಿಸಿದ ಪ್ರೀತಿಪಾತ್ರರಿಗೆಲ್ಲ ಧನ್ಯವಾದಗಳು ಎಂದು ರಶ್ಮಿಕಾ ಬರೆದುಕೊಂಡಿದ್ದು ಹಿಂದಿ ಮಲಯಾಳಂ ಹಾಗೂ ತಮಿಳಿನಲ್ಲಿಯೂ ಭವಿಷ್ಯದಲ್ಲಿ ಪ್ರಶಸ್ತಿ ಪಡೆಯುವುದಾಗಿ ಅವರು ಹೇಳಿರುವ ಆತ್ಮವಿಶ್ವಾಸದ ಮಾತಿಗೆ ಎಲ್ಲರೂ ಸಭಾಷ್ ಎನ್ನುತ್ತಿದ್ದಾರೆ.

ಇನ್ನು ಅನೇಕ ತಾರೆಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದು ಮಹೇಶ್​ ಬಾಬು ನಾನಿ ರಚಿತಾ ರಾಮ್​ ಶ್ರುತಿ ಹಾಸನ್​ ಶಾನ್ವಿ ಶ್ರೀವತ್ಸ ಕಾರುಣ್ಯ ರಾಮ್​ ಪನ್ನಗ ಭರಣ ಧನಂಜಯ ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇನ್ನು ರಶ್ಮಿಕಾ ಮಂದಣ್ಣ ಈಗ ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿಲ್ಲ. ಬಾಲಿವುಡ್​ನಲ್ಲೂ ಅವರು ಬ್ಯುಸಿ ಆಗಿದ್ದು ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ಮಿಷನ್​ ಮಜ್ನು ಚಿತ್ರದಲ್ಲಿ ನಟಿಸಿದ್ದಾರೆ.

ಆ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು ಅಮಿತಾಭ್​ ಬಚ್ಚನ್​ ಜೊತೆ ಗುಡ್​ಬೈ ಸಿನಿಮಾದಲ್ಲಿ ಕೂಡ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ಇನ್ನೂ ಸೈಮಾ ಪ್ರಶಸ್ತಿಯ ವೇಳೆಯೇ ರಶ್ಮಿಕಾ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ನೆಟ್ಟಿಗರ ಕಣ್ಣು ಕುಕ್ಕುವಂತಿದೆ.

ಹೌದು ಇಷ್ಟು ದಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು ಆದರೆ ಇದೇ ಮೊದಲ ಬಾರಿಗೆ ರಶ್ಮಿಕಾ ಅವರು ಕೆಂಪು ಬಣ್ಣದ ಗೌನ್ ನಲ್ಲಿ ಬಹಳ ಹಾಟ್ ಆಗಿ ಕಾಣಿಸಿಕೊಂಡಿರುವಂತಹ ಸಂಪೂರ್ಣ ವಿಡಿಯೋ ಇದೀಗ ಬಿಡುಗಡೆಯಾಗಿದ್ದು ನೀವು ಕೂಡ ಈ ವೀಡಿಯೋ ನೋಡುವ ಕುತೂಹಲವಿದ್ದರೆ ಲೇಖನಿಯ ಕೆಳಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ .

ಒಂದು ಕಾಲದಲ್ಲಿ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಮಧ್ಯೆ ಮನಸ್ತಾಪ ಮೂಡಿತ್ತು. ಹೌದು ಬಳಿಕ ಅದಕ್ಕೆ ಸ್ವತಃ ರಕ್ಷಿತ್​ ಶೆಟ್ಟಿ ಫುಲ್​ ಸ್ಟಾಪ್​ ಇಟ್ಟಿದ್ದು ಸದ್ಯ ಈಗ ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮತ್ತು ರಕ್ಷಿತ್​ ಕಾಣಿಸಿಕೊಂಡಿದ್ದಾರೆ. ಹೌದು ಅದ್ದೂರಿಯಾಗಿ ನಡೆದ ಸೈಮಾ ಅವಾರ್ಡ್ಸ್​ ಕಾರ್ಯಕ್ರಮಕ್ಕೆ ಅವರಿಬ್ಬರು ಹಾಜರಾಗಿದ್ದು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡು ಸಂಭ್ರಮಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದ್ದು ಈ ಕರಲ್​ಫುಲ್​ ಕಾರ್ಯಕ್ರಮ ಹೈದರಾಬಾದ್​ನಲ್ಲಿ ನಡೆದಿದೆ.

ಇನ್ನು ರಕ್ಷಿತ್​ ಶೆಟ್ಟಿ ಅತ್ಯುತ್ತಮ ನಟ (ಕ್ರಿಟಿಕ್ಸ್​) ಪ್ರಶಸ್ತಿ ಪಡೆದುಕೊಂಡಿದ್ದರೆ ರಶ್ಮಿಕಾ ಮಂದಣ್ಣ ಪಾಲಿಗೆ ಅತ್ಯುತ್ತಮ ನಟಿ (ಕ್ರಿಟಿಕ್ಸ್​) ಪ್ರಶಸ್ತಿ ಒಲಿದುಬಂದಿದೆ. 2019ನೇ ಸಾಲಿನ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದ್ದು ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಸಿನಿಮಾ ಬಹುಭಾಷೆಯಲ್ಲಿ ಬಿಡುಗಡೆ ಆಗಿತ್ತು.

ಭಾರಿ ಬಜೆಟ್​ನಲ್ಲಿ ಮೂಡಿಬಂದ ಆ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ. ಆದರೆ ಪ್ರಶಸ್ತಿ ಪಡೆಯುವಲ್ಲಿ ರಕ್ಷಿತ್​ ಶೆಟ್ಟಿ ಹಿಂದೆ ಬಿದ್ದಿಲ್ಲ. ಸೈಮಾ ಸಮಾರಂಭದಲ್ಲಿ ಅವರು ಅತ್ಯುತ್ತಮ ನಟ ಕ್ರಿಟಿಕ್ಸ್​ ಪ್ರಶಸ್ತಿ ಪಡೆದುಕೊಂಡಿದ್ದು ಅವರ ಫೋಟೋ ವೈರಲ್​ ಆಗುತ್ತಿದ್ದು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.