ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಉಸಿರು ಕಟ್ಟಿಕೊಂಡು ಹುಚ್ಚ ಚಿತ್ರದ ಹಾಡು ಹಾಡಿದ ಸುದೀಪ್..ಚಿಂದಿ ವಿಡಿಯೋ

1,632

kiccha sudeep usire usire live singing: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ರವರು ಕನ್ನಡ ಚಿತ್ರರಂಗದ ಹೆಮ್ಮೆಯ ನಟರಾಗಿದ್ದು ಸಿನಿರಂಗದಲ್ಲಿ ಮಾಡಿರುವ ಸಾಧನೆ ಅಗಾಧವಾದದ್ದು. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಮಲಯಾಳಂ ತಮಿಳು ಹಾಗೂ ಹಿಂದಿ ಭಾಷೆಯ ಚಿತ್ರರಂಗದಲ್ಲಿಯೂ ಕೂಡ ತಮ್ಮದೇ ಆದ ಛಾಪನ್ನು ಮೂಡಿಸಿ ಎಲ್ಲಡೆ ಅಭಿಮಾನಿ ಬಳಗವನ್ನು ಹೊಂದಿರುವ ಅವರು ಕೇವಲ ನಟ ಮಾತ್ರವಲ್ಲದೇ ಡೈರೆಕ್ಟರ್ ಪ್ರೊಡ್ಯೂಸರ್ ಕ್ರಿಕೆಟರ್ ಗಾಯಕ ನಿರೂಪಕ ಕೂಡ ಹೌದು ಎನ್ನಬಹುದು.

ಕಿಚ್ಚ ಸುದೀಪ್ ರವರ ನಿಜವಾದ ಹೆಸರು ಸುದೀಪ್ ಸಂಜೀವ್ ಎಂಬುದಾಗಿದ್ದು
ಸೆಪ್ಟೆಂಬರ್ 2 1973 ರಂದು ಶಿವಮೊಗ್ಗದಲ್ಲಿ ಜನಿಸುತ್ತಾರೆ. ಇನ್ನು ಸುದೀಪ್ ಅವರ ತಂದೆ ಸಂಜೀವ್ ನಂಜಪ್ಪ ಖ್ಯಾತ ಉಧ್ಯಮಿಯಾಗಿದ್ದರೆ ತಾಯಿ ಸರೋಜ ಅವರು ಗೃಹಿಣಿಯಾಗಿದ್ದಾರೆ. ಇನ್ನು ನಟ ಸುದೀಪ್ ಅವರು ದಯಾನಂದ್ ಸಾಗರ್ ಇಂಜಿನಿಯರಿಂಗ್ ಕಾಲೇಜು ಬೆಂಗಳೂರಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿದ್ದು
ಪ್ರಿಯಾ ರಾಧಾಕೃಷ್ಣ ರವರ ಜೊತೆ ವಿವಾಹವಾಗಿದ್ದಾರೆ.

ಹೌದು ಈ ದಂಪತಿಗೆ ಸಾನ್ವಿ ಸುದೀಪ್ ಹೆಸರಿನ ಮಗಳಿದ್ದುಬಇಡೀ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯನ್ನು ಹೊಂದಿರುವ ನಟ ಕಿಚ್ಚ ಸುದೀಪ್ ಅವರ ನಟನೆಯ ಸಿನಿಮಾಗಳು ಇಂದು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಹಣ ಕಲೆಕ್ಷನ್ ಮಾಡುತ್ತವೆ.

ಸದ್ಯ ಸಿನಿಮಾ ನಟರನ್ನು ಆರಾಧಿಸುವ ಅಭಿಮಾನಿಗಳು ಸಾಕಷ್ಟು ಮಂದಿ ಇರುತ್ತಾರೆ ಎನ್ನಬಹುದು. ಹೌದು ನೆಚ್ಚಿನ ನಟನನ್ನು ದೇವರ ರೀತಿ ನೋಡುವ ಫ್ಯಾನ್ಸ್​ ಕೂಡ ಇದ್ದು ಕಿಚ್ಚ ಸುದೀಪ್​ ಅವರು ಅಂತಹ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹೌದು ರಾಯಚೂರು ಜಿಲ್ಲೆ ಶಿರವಾರ ತಾಲ್ಲೂಕಿನ ಕುರಕುಂದ ಗ್ರಾಮದಲ್ಲಿ ಸುದೀಪ್​ಗಾಗಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂಬುದು ವಿಶೇಷ. ಎಲ್ಲಾ ಕಲಾವಿದರಿಗೂ ಈ ಪರಿ ಅಭಿಮಾನ ಸಿಗುವುದಿಲ್ಲ ಎನ್ನಬಹುದು.

ಇನ್ನು ಕಿಚ್ಚ ಸುದೀಪ್​ ನಟನೆ ಮಾತ್ರವಲ್ಲದೇ ಸಾಮಾಜಿಕ ಕೆಲಸಗಳಲ್ಲೂ ಕೂಡ ಗುರುತಿಸಿಕೊಂಡಿದ್ದು ಅನಾರೋಗ್ಯದಿಂದ ಬಳಲುತ್ತಿರುವ ಅನೇಕರಿಗೆ ಆರ್ಥಿಕ ನೆರವು ನೀಡಿದ್ದಾರೆ. ಹಾಗಾಗಿ ಅವರನ್ನು ಅಭಿಮಾನಿಗಳು ಅವರನ್ನು ದೇವರಂತೆ ಕಾಣುತ್ತಿದ್ದು ಇನ್ನು ಸುದೀಪ್ ಮೂರ್ತಿ ಇರುವ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದ್ದು ವಾಲ್ಮಿಕಿ ಮಹರ್ಷಿಯ 6 ಅಡಿ ಮೂರ್ತಿ ಕೂಡ ಇಲ್ಲಿದೆ. ಸುದೀಪ್​ ಅವರ 4 ಅಡಿ‌ ಎತ್ತರದ ಮೂರ್ತಿ ಪ್ರತಿಷ್ಠಾಪನೆಗೆ ಸಜ್ಜಾಗಿದ್ದು 30/40 ವಿಸ್ತೀರ್ಣದ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ತೆಲುಗಿನ ಈಗ ಚಿತ್ರದ ಪರ್ಫಾರ್ಮೆನ್ಸ್ ನೋಡಿ ದೇಶ ವಿದೇಶದ ಅತ್ಯಂತ ಅಭಿಮಾನಿಗಳು ಕಿಚ್ಚ ಸುದೀಪ್ ಅವರನ್ನು ಹೊಗಳುತ್ತಿರುತ್ತಾರೆ. ನಟನೆಯ ಮಟ್ಟಿಗೆ ಬಂದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರನ್ನು ಮೀರಿಸುವ ಮತ್ತೊಬ್ಬ ನಟ ಕನ್ನಡದಲ್ಲಿ ಇಲ್ಲ ಎಂದೇ ಹೇಳಬಹುದಾಗಿದೆ. ಸ್ಟೈಲ್ ವಿಚಾರಕ್ಕೆ ಬಂದರೂ ಸಹ ವಯಸ್ಸು 49 ಆದರೂ ಕೂಡ 25ರ ಹರೆಯದ ಯುವಕನಂತೆ ಕಾಣಿಸುತ್ತಾರೆ ಕಿಚ್ಚ.

2001 ರಲ್ಲಿ ಹುಚ್ಚ ಎಂಬ ಸಿನಿಮಾ ತೆರೆಕಂಡಿದ್ದು ಅಲ್ಲಿಯ ತನಕ ಸುದೀಪ್ ಅವರ ಸಿನಿಮಾಗಳು ಹೆಚ್ಚಾಗಿ ಹಿಟ್ ಆಗುತ್ತಿರಲಿಲ್ಲ ಹಾಗೂ ಅಷ್ಟು ಅಭಿಮಾನಿಗಳನ್ನು ಕೂಡ ಹೊಂದಿರಲಿಲ್ಲ. ಈ ಸಿನಿಮಾ ತೆರೆ ಕಂಡ ದಿನವೇ ನೋಡಿ ಸುದೀಪ್ ರವರು ಕಿಚ್ಚ ಸುದೀಪ್ ಆಗಿದ್ದು ಲಕ್ಷಾಂತರ ಅಭಿಮಾನಿಗಳನ್ನು ಸಂಸಾದಿಸಿದ್ದು. ಹೌದು ಈ ಚಿತ್ರ ರೀಮೇಕ್ ಆದರೂ ಕೂಡ ಸುದೀಪ್ ಅವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತ್ತು. ರೊಮ್ಯಾಂಟಿಕ್ ಆ್ಯಕ್ಷನ್ ಕಥೆಯನ್ನು ಹೊಂದಿದ್ದ ಹುಚ್ಚ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಓಂಪ್ರಕಾಶ್ ರಾವ್ ರವರು.

ಹೌದು ತೆರೆಯ ಮೇಲೆ ಕಿಚ್ಚನ ಆಕ್ಷನ್ ಲವ್ ಮತ್ತು ಹುಚ್ಚನ ಪಾತ್ರಗಳು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಇನ್ನು ಈ ಸಿನಿಮಾದ ಉಸಿರೇ ಉಸಿರೇ ಎಂಬ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ಈಗಲೂ ಕೂಡ ಆ ಹಾಡನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಇನ್ನು ಈ ಹಾಡನ್ನು ಸೋನು ನಿಗಮ್ ಹಾಡಿದ್ದು ಎಂದಾದರೂ ಸುದೀಪ್ ರವರ ಧ್ವನಿಯಲ್ಲಿ ಈ ಹಾಡನ್ನು ಕೇಳಿದ್ದೀರಾ ? ಸದ್ಯ ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದು ಒಂದು ವೇದಿಕೆಯಲ್ಲಿ ಸುದೀಪ್ ಉಸಿರೇ ಉಸಿರೇ ಹಾಡನ್ನು ಎಷ್ಟು ಅದ್ಭುತವಾಗಿ ಹಾಡಿದ್ದಾರೆ ನೀವೇ ನೋಡಿ.