ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಚಿಕ್ಕ ಪಾತ್ರವಾದರೂ ಗೆಳೆಯ ಪ್ರಮೋದ್ ಶೆಟ್ಟಿಗೆ ರಿಷಬ್ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ….

90,425

kantara pramod shetty: ಸದ್ಯ ಇದೀಗ ದೇಶದೆಲ್ಲೆಡೆ ದೊಡ್ಡ ಸಂಚಲನ ಮೂಡಿಸಿರುವ ಸಿನಿಮಾ ಎಂದರೆ ಅದು ಕನ್ನಡದ ಕಾಂತಾರ ಅಂತಾನೇ ಹೇಳಬಹುದು. ಹೌದು ಕಾಂತಾರ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಸೂಪರ್ ಹಿಟ್ ಆಗುತ್ತದೆ ಎಂದು ಸ್ವತಃ ಚಿತ್ರ ತಂಡದವರೇ ಭಾವಿಸಿರಲಿಲ್ಲ ಎನ್ನಬಹುದು. ಮೊದಮೊದಲು ಕೇವಲ ಕನ್ನಡ ಭಾಷೆಯಲ್ಲಿ ತೆರೆಕಂಡ ಈ ಸಿನಿಮಾ ಇದೀಗ ಕರುನಾಡ ಗಡಿ ದಾಟಿ ಹಿಂದಿ ತೆಲುಗು ತಮಿಳು ಮಲಯಾಳಂ ಹೀಗೆ ಪಂಚ ಭಾಷೆ ಯಲ್ಲಿ ಇತಿಹಾಸ ಬರೆಯುವುದರ ಜೊತೆಗೆ ಪ್ರತಿಯೊಬ್ಬರೂ ಕೂಡ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ ಎನ್ನಬಹುದು.

ಭೂತಾರಾಧನೆಯ ಮೂಲ ಕಥೆ ಹೊಂದಿರುವ ಈ ಸಿನಿಮಾ ನೆಲದ ಸಂಸ್ಕೃತಿ ಜಾನಪದ ಕಲೆಯನ್ನು ಇಡೀ ದೇಶಕ್ಕೆ ಪರಿಚಯಿಸಿದ್ದು ಚಿತ್ರದ ಕಥಾ ಹಂದರ ಹಾಗೂ ಮೇಕಿಂಗ್ ಸ್ಟೈಲ್ ಗೆ ಪರಭಾಷಿಗರು ಬೆರಗಾಗಿದ್ದಾರೆ ಎನ್ನಬಹುದು. ಅದರಲ್ಲಿಯೂ ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ಅಭಿನಯವನ್ನು ನೋಡಿ ಪ್ರತಿಯೊಬ್ಬರೂ ಕೂಡ ಮಾರುಹೋಗಿದ್ದು ಸಿನಿಮಾದ ಕೊನೆಯ ಇಪ್ಪತ್ತು ನಿಮಿಷದಲ್ಲಿ ರಿಷಭ್ ಅವರ ಅಭಿನಯ ನೋಡಿ ಎಂತಹವರ ಮೈ ಕೂಡ ರೋಮಾಂಚನವಾಗುತ್ತದೆ.

ಸದ್ಯ ಇದೀಗ ಕಾಂತಾರ ಸಿನಿಮಾ ಪ್ರತಿ ಭಾಷೆಯಲ್ಲೂ ಕೂಡ ಕೋಟಿ ಕೋಟಿ ಹಣವನ್ನು ದೋಚುತ್ತಿದ್ದು ಈ ಹಿಂದಿನ ಎಲ್ಲಾ ಸಿನಿಮಾಗಳ ದಾಖಲೆಯನ್ನು ಕೂಡ ಪುಡಿಪುಡಿ ಮಾಡಿ ಎಲ್ಲಾ ಕಡೆಯಲ್ಲಿಯೂ ಕೂಡ ನಂಬರ್ ಒನ್ ಸಿನಿಮಾ ಎಂದೆನಿಸಿಕೊಂಡಿದೆ.ಸಾಮಾನ್ಯ ಪ್ರೇಕ್ಷಕರು ಮಾತ್ರವೇ ಅಲ್ಲದೆ ವಿವಿಧ ಚಿತ್ರರಂಗದ ಸ್ಟಾರ್ ನಟ ನಟಿಯರು ತಂತ್ರಜ್ಞರು ಕೂಡ ಸಿನಿಮಾವನ್ನು ವೀಕ್ಷಿಸಿ ಸಿನಿಮಾದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದು ದೊಡ್ಡ ದೊಡ್ಡ ಚಿತ್ರನಟರನ್ನು ಸಹ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ ಕಾಂತಾರ ಸಿನಿಮಾ.

ಇತ್ತೀಚೆಗಷ್ಟೇ ಭಾರತದ ಸೂಪರ್ ಸ್ಟಾರ್ ನಟ ರಜನೀಕಾಂತ್ ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಟ್ವೀಟ್ ಮಾಡಿ ರಿಷಬ್ ಶೆಟ್ಟಿಯವರನ್ನು ಚಿತ್ರತಂಡವನ್ನು ಹೊಗಳಿದ್ದು ಮಾತ್ರವಲ್ಲದೆ ಕಾಂತಾರ ಸಿನಿಮಾ ಭಾರತದ ಮಾಸ್ಟರ್‌ ಪೀಸ್ ಎಂದಿದ್ದಾರೆ.

ಇನ್ನು ಸಿನಿಮಾ ಬಗ್ಗೆ ಟ್ವೀಟ್ ಮಾಡಿರುವ ರಜನೀಕಾಂತ್ ನಾವು ತಿಳಿದುಕೊಂಡಿರುವುದಕ್ಕಿಂತಲೂ ತಿಳಿದುಕೊಂಡಿರದೇ ಇರುವುದೇ ಹೆಚ್ಚು ಎಂಬುದನ್ನು ಕಾಂತಾರ ಸಿನಿಮಾ ಮೂಲಕ ಅದ್ಭುತವಾಗಿ ಹೇಳಲಾಗಿದೆ. ರಿಷಬ್ ಶೆಟ್ಟಿ ಅಂತೂ ರೋಮಾಂಚನಗೊಳಿಸಿಬಿಟ್ಟಿದ್ದಾರೆ. ರಿಷಬ್ ನಟನಾಗಿ ಬರಹಗಾರನಾಗಿ ನಿರ್ದೇಶಕನಾಗಿ ಅದ್ಭುತ ಕಾರ್ಯ ಮಾಡಿರುವ ನಿಮಗೆ ನನ್ನ ಗೌರವಗಳು. ಭಾರತದ ಮಾಸ್ಟರ್ ಪೀಸ್‌ ಸಿನಿಮಾ ಕಾಂತಾರದ ಎಲ್ಲ ನಟರು ತಂತ್ರಜ್ಞರಿಗೆ ನನ್ನ ಅಭಿನಂದನೆಗಳು ಎಂದಿದ್ದಾರೆ.

ಈ ನಡುವೆ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಗಳ ಸಂಭಾವನೆ ಬಗ್ಗೆ ಚರ್ಚೆ ಪ್ರಾರಂಭವಾಗಿದ್ದು ಅದರಲ್ಲಿಯೂ ಕೂಡ ರಿಷಬ್ ರವರ ಆಪ್ತರಾದ ಪ್ರಮೋದ್ ಶೆಟ್ಟಿ ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.ನಟ ಪ್ರಮೋದ್ ಶೆಟ್ಟಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ನಟರಲ್ಲಿ ಒಬ್ಬರು. ಅನೇಕ ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟ ಪ್ರಮೋದ್ ಶೆಟ್ಟಿ ಅವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ ಎಂದು ಹೇಳಿದರೆ ತಪ್ಪಾಗಲ್ಲ.Kantara Sapthami Gowda: ಕಾಂತಾರದ ಖಡಕ್ ಸುಂದರಿ ಇವರೇ ನೋಡಿ!

ನಟ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಅವರ ಚಿತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ಅವರು ಇದ್ದೆ ಇರುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಕಿರಿಕ್ ಪಾರ್ಟಿ ಅವನೇ ಶ್ರೀಮನ್ ನಾರಾಯಣ ಹೀರೋ ಹರಿಕಥೆ ಅಲ್ಲ ಗಿರಿಕಥೆ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ಬಹಳ ಫೇಮಸ್ ಆಗಿದ್ದ ನಟ ಪ್ರಮೋದ್ ಶೆಟ್ಟಿ ಅವರು ಸದ್ಯ ಕನ್ನಡ ಚಿತ್ರರಂಗದ ಬಹಳ ಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದಾರೆ.

ಕಾಂತಾರ ಸಿನಿಮಾದಲ್ಲಿ ರಾಜಕೀಯ ವ್ಯಕ್ತಿಯಾಗಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಕೆಲಸಮಯ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ ಎನ್ನಬಹುದು. ಇನ್ನು ಈ ಸಿನಿಮಾಕ್ಕೆ ಪ್ರಮೋದ್ ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಹೇಳುವುದಾದರೆ ಪ್ರಮೋದ್ ಶೆಟ್ಟಿ ಈ ಸಿನಿಮಾದ ಅಭಿನಯಕ್ಕಾಗಿ ಕೇವಲ ಐವತ್ತು ಲಕ್ಷ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯ ಈ ಸಿನಿಮಾ ಸೂಪರ್ ಹಿಟ್ ಆಗಿದ್ದು ಸಿನಿಮಾ ನೂರು ದಿನಗಳನ್ನು ಪೂರೈಸಿದ ನಂತರ ಮತ್ತೊಮ್ಮೆ ಕಲಾವಿದರಿಗೆ ಸಂಭಾವನೆ ನೀಡಲಾಗುತ್ತದೆ ಎನ್ನಲಾಗಿದೆ. ಕಾಂತಾರ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಅವರ ಅಭಿನಯ ತಮಗೆ ಇಷ್ಟವಾಗಿದ್ದಲ್ಲಿ ತಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.