ಸದ್ಯ ಬಾಲಿವುಡ್‌ನಲ್ಲಿ(Bollywood) ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದ್ದಾರೆ ನಟಿ ನೋರಾ ಫತೇಹಿ (Nora Fatehi). ಹಾಗಂತ ಅವರು ಭಾರತದವರಲ್ಲ. ಮೂಲತಃ ಕೆನಡಾದವರಾದ (Canada) ನೋರಾ ಪ್ರಸ್ತುತ ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದು ಅವರು ನರ್ತಿಸಿದ ಹಾಡುಗಳು ಯೂಟ್ಯೂಬ್‌ನಲ್ಲಿ (YouTube) ಕೋಟ್ಯಂತರ ಬಾರಿ ವೀಕ್ಷಣೆ (Views) ಕಾಣುತ್ತವೆ.
ಹೌದು ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ (South India) ಚಿತ್ರರಂಗದಲ್ಲೂ ನೋರಾ ನಟಿಸಿದ್ದು ಪಡ್ಡೆ ಹುಡುಗರ ಪಟ್ಟದರಸಿಯಾಗಿದ್ದಾರೆ. ಬಾಹುಬಲಿ (Bahubali) ಸಿನಿಮಾದ ಮನೋಹರಿ (Manohari) ಹಾಡಿನ ಮೂಲಕ ನೋರಾಗೆ ಸಿಕ್ಕಿತ್ತು ದೊಡ್ಡ ಬ್ರೇಕ್. ಹೌದು ಈ ಮನೋಹರಿ ಗೀತೆ ನೂರಾರು ಮಿಲಿಯನ್ ವೀವ್ಸ್ ಪಡೆದಿತ್ತು.ಬಾಲಿವುಡ್‌ನಲ್ಲಿ ಬಹುಬೇಡಿಕೆಯ ಐಟಂ(Item) ಡಾನ್ಸರ್ ಆಗಿ ಗುರುತಿಸಿಕೊಂಡಿರುವ ಈ ನಟಿಯದಿಲ್‌ಬರ್ ದಿಲ್‌ಬರ್ ಹಾಡಿಗೆ ಸಿಕ್ಕಿರುವುದು 67.8 ಕೋಟಿ ವೀವ್ಸ್.ಅಲ್ಲದೇ 33 ಕೋಟಿ ಬಾರಿ ವೀಕ್ಷಣೆ ಕಂಡಿದೆ ಓ ಸಾಕಿ ಸಾಕಿ ಸಾಂಗ್.
ಇನ್ನು ಸ್ಟ್ರೀಟ್ ಡಾನ್ಸರ್ 3ಡಿ ಚಿತ್ರದಲ್ಲಿ ಕಿಚ್ಚು ಹಚ್ಚಿರುವ ಗರ್ಮಿ ಹಾಡಿನಲ್ಲಿ ನೋರಾ ಅದ್ಬುತವಾಗಿ ಸೊಂಟ ಬಳುಕಿಸಿದ್ದರು.ಸ್ತ್ರೀ ಸಿನಿಮಾದ ಕಮಾರಿಯಾ ಹಾಡು ಸೂಪರ್ ಹಿಟ್ ಆಗಿದ್ದು ತೆಲುಗು ತಮಿಳು ಮಲಯಾಳಂ ಚಿತ್ರರಂಗದಲ್ಲೂ ಬಹು ಬೇಡಿಕೆ ನಟಿಯಾಗಿದ್ದಾರೆ ನೋರಾ.ಇನ್ನು ಬಾಲಿವುಡ್‌ನಲ್ಲಿ ಪ್ರಸ್ತುತ ನಂ.1 ಐಟಂ ಡಾನ್ಸರ್ ಕೂಡ ಹೌದು.
ಹೀಗೆ ಇಷ್ಟೆಲ್ಲಾ ಖ್ಯಾತಿಗಳಿಸಿರುವ ನೋರಾ ರವರ ಅದ್ಬುತ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ (SocialMedia) ವೈರಲ್ ಆಗುತ್ತಿದ್ದು ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ (India’s Best Dancer) ವೇದಿಕೆಯಲ್ಲಿ ನೋರಾ ರವರು ಸೊಂಟ ಬಳುಕಿಸಿರುವ ಪರಿಗೆ ಎಲ್ಲರೂ ಕೂಡ ನಿಬ್ಬೆರಗಾಗಿದ್ದಾರೆ. ಒಮ್ಮೆ ನೀವು ಕೂಡ ಲೇಖನಿ ಕೆಳಗಿನ ವಿಡಿಯೋ ನೋಡಿ ಕಮೆಂಟ್ ಮೂಲಕ ನಿಮ್ಮ ಅನಿಸಿಕೆ ತಿಳಿಸಿ.
ಇನ್ನು ಬಾಲಿವುಡ್ ಅಂಗಳ ಖ್ಯಾತ ಡ್ಯಾನ್ಸರ್ ಕಮ್ ನಟಿ ನೋರಾ ಫತೇಹಿ (Nora Fatehi) ಜೊತೆಗೆ ಆರ್ಯನ್ ಖಾನ್ (Aryan Khan) ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಬಾಲಿವುಡ್ ಅಂಗಳದಲ್ಲಿ ಹಬ್ಬಿದೆ.ನೋರಾ ಫತೇಹಿ ಮತ್ತು ಆರ್ಯನ್ ಖಾನ್ ನಡುವೆ ವಯಸ್ಸಿನ ಅಂತರ ಇದ್ದು ಹಾಗಿದ್ದರೂ ಕೂಡ ಇಬ್ಬರ ನಡುವೆ ಡೇಟಿಂಗ್ ವಿಚಾರ ಅನೇಕರಲ್ಲಿ ಅಚ್ಚರಿ ಮೂಡಿಸಿದೆ.
ದುಬೈನಲ್ಲಿ ಅದ್ಧೂರಿಯಾಗಿ ಹೊಸ ವರ್ಷ ಆರಂಭಿಸಿದ ಆರ್ಯನ್ ಖಾನ್ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ರು ಈ ಫೋಟೋಗಳು ಇದೀಗ ವೈರಲ್ ಆಗಿದ್ದು ನಟಿ ನೋರಾ ಫತೇಹಿ ಕೂಡ ಹೊಸ ವರ್ಷದ ಸಂದರ್ಭದಲ್ಲಿ ದುಬೈನಲ್ಲಿ ಇದ್ದರು. ಅವರು ಹಂಚಿಕೊಂಡ ಫೋಟೋದ ಬ್ಯಾಗ್ರೌಂಡ್ ಕೂಡ ಆರ್ಯನ್ ಖಾನ್ ಶೇರ್ ಮಾಡಿದ ಫೋಟೋದ ರೀತಿಯೇ ಇದೆ.ಇಬ್ಬರು ದುಬೈಗೆ ಹೋಗಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದ್ದು, ಆ ಕಾರಣದಿಂದ ಇಬ್ಬರ ಡೇಟಿಂಗ್ ಬಗ್ಗೆ ಅನುಮಾನ ಶುರುವಾಗಿದೆ