ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಾಬರ್ಟ್ ಗಾಯಕಿ ಮಂಗ್ಲಿ ಯನ್ನು ರೇಗಿಸಿದ ಅಕುಲ್…ಚಿಂದಿ ವಿಡಿಯೋ

3,266

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ತೆಲುಗು ವರ್ಷನ್ ನ ಕಣ್ಣೇ ಅದಿರಿಂದಿ ಎಂಬುವ ಸೂಪರ್ ಹಿಟ್ ಹಾಡಿಗೆ ಧ್ವನಿಯಾದವರು ತೆಲುಗಿನ ಖ್ಯಾತ ಗಾಯಕಿ ಸತ್ಯವತಿ ರಾಥೋಡ್ ಅಲಿಯಾಸ್ ಮಂಗ್ಲಿ ಅವರು.ಹೌದು ಈ ಹಾಡಿನ ಮೂಲಕ ಮಂಗ್ಲಿ ಅವರು ಕನ್ನಡ ಪ್ರೇಕ್ಷಕರ ಗಮನ ಸೆಳೆಯುವುದರ ಜೊತೆಗೆ ಮನಸ್ಸನ್ನು ಕೂಡಾ ಗೆದ್ದಿದ್ದು, ಕೇವಲ ಇದೊಂದು ಹಾಡಿನಿಂದ ಇಡೀ ಕರ್ನಾಟಕಾದ್ಯಂತ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದೇ ಹೇಳಬಹುದು.

ಈ ಹಾಡು ತೆಲುಗಿನದಾದರೂ ಕೂಡ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಕಂಡಿದ್ದು, ಅದರಲ್ಲೂ ವಿಶೇಷವಾಗಿ ದರ್ಶನ್ ಅವರ ಅಭಿಮಾನಿಗಳು ಮಂಗ್ಲಿ ಅವರ ಧ್ವನಿಗೆ ಫಿದಾ ಆಗಿದ್ದಾರೆ.ಎಲ್ಲಾದರು ಇರು, ಎಂತಾದರು ಇರು, ಎಂದಿದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ’. ಕುವೆಂಪು ಅವರ ಈ ನುಡಿ ಮುತ್ತು ಎಷ್ಟು ಅದ್ಬುತವಾದದ್ದು ಅಲ್ಲವೆ.

ಎಲ್ಲೇ ಹೋದರು, ಎಲ್ಲೇ ಜೀವಿದರು, ಎಷ್ಟೇ ಎತ್ತರಕ್ಕೆ ಬೆಳೆದರು ಕೂಡ ಜೀವಿಸಿದ, ಉಸಿರಾಡಿದ ಹಾಗೂ ಮಾತು ಕಲೆತ ತಾಯಿ ಬಾಷೆಯನ್ನ ಎಂದಿಗೂ ಮರೆಯಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ನಟಿಯರು, ಕನ್ನಡ ಚಿತ್ರರಂಗದಲ್ಲಿಯೇ ಅವಕಾಶ ಗಿಟ್ಟಿಸಿಕೊಂಡು ನಂತರ ಖ್ಯಾತಿ ಪಡೆದು, ಪರ ರಾಜ್ಯಕ್ಕೆ ಹೋದ ಮೇಲೆ ಕನ್ನಡ ಮಾತನಾಡುವುದು ಬಹಳ ಕಷ್ಟ ಹಾಗೇ ಹೀಗೇ ಎಂದು ಹೇಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳಲು ಪರ ಬಾಷೆಯನ್ನು ಹೊಗಳುತ್ತಾರೆ.

ಆದರೆ ಇಂತಹವರ ನಡುವೆ ತೆಲುಗು ಗಾಯಕಿ ಮಂಗ್ಲಿ ಅವರು, ಕನ್ನಡ ಎಂಬುದು ಬಹಳ ಸುಲಭ ಬಹಳ ಬೇಗ ಕಲಿಯುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಇದೀಗ ಸಮಾರಂಭವೊಂದ್ರಲ್ಲಿ ಅಕುಲ್ ಮಂಗ್ಲಿ ಕಾಲೆಳೆದ ವಿಡಿಯೋ ನೋಡಿ.