ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಶೂಟಿಂಗ್ ನಲ್ಲಿ ಆಶಿಕಾ ರಂಗನಾಥ್ ಚಿಂದಿ ಡೈಲಾಗ್ ..ನೋಡಿ ವಿಡಿಯೋ

2,172

ಕನ್ನಡದ ಪಟಾಕಿ ಪೋರಿ ಆಶಿಕಾ ರಂಗನಾಥ್ ರವರ ಒಂದು ವೀಡಿಯೋ ಭಾರೀ ಸದ್ದು ಮಾಡುತ್ತು. ಹೌದು ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆ ನೋಡಿದ್ರೂ ಅಷ್ಟೇನೆ. ಆಶಿಕಾ ರವರ ಬೋಲ್ಡ್ ವೀಡಿಯೋ ಕಾಣಿಸುತ್ತಿತ್ತು. ಈ ವೀಡಿಯೋದ ತೀವ್ರತೆ ಎಷ್ಟು ಇತ್ತು ಅಂದ್ರೆ ಇದು ರೀಲಾ ? ರಿಯಲ್ಲಾ ಎನ್ನುವಂತಹ ಮಟ್ಟಿಗೆ ಇದು ವೈರಲ್ ಆಗಿತ್ತು.

ಆಶಿಕಾ ರಂಗನಾಥ್ ಈ ಒಂದು ವೀಡಿಯೋದಲ್ಲಿ ಕುಡಿದ ಅಮಲಿನಲ್ಲಿ ತೂರಾಡೋ ದೃಶ್ಯವೇ ಇದ್ದು ಕೊನೆಗೆ ಮಧ್ಯೆದ ಬೆರಳನ್ನ ತೋರಿಸಿ ಹೊರಟು ಹೋಗುವ ದೃಶ್ಯವೂ ಇದೇ ವೀಡಿಯೋದಲ್ಲಿಯೇ ಇದೆ. ಸಿನಿಮಾ ಶೂಟಿಂಗ್ ಬಗ್ಗೆ ಗೊತ್ತಿಲ್ಲದೇ ಇರೋರು ಇದು ರಿಯಲ್ ವೀಡಿಯೋ ಅಂತಲೇ ಅರೆಕ್ಷಣ ಅಂದುಕೊಂಡು ಬಿಡುತ್ತಾರೆ. ಆದರೆ ಅಸಲಿ ಸತ್ಯ ಬೇರೆನೇ ಇತ್ತು.

ಹೌದು ಕನ್ನಡದ ನಟಿ ಆಶಿಕಾ ರಂಗನಾಥ್ ಸಿನಿಮಾ ಮಾಡಿಕೊಂಡು ಹಾಯಾಗಿಯೇ ಇದ್ದವರು. ಇನ್ನು ರೀಲ್ಸ್ ನಲ್ಲಿ ಕುಣಿದು ಕುಪ್ಪಳಿಸಿ ಖುಷಿ ಪಟ್ಟರು. ಇಲ್ಲಿವರೆಗೂ ಆಶಿಕಾ ರಂಗನಾಥ್ ರೀಲ್ಸ್ ಗಳು ಸಿನಿಮಾ ಹಾಡುಗಳು ಮಾತ್ರ ವೈರಲ್ ಆಗುತ್ತಿದ್ದವು. ಆದರೆ ಈಗ ಒಂದು ವೀಡಿಯೋ ವೈರಲ್ ಆಗಿ ಬಿಟ್ಟಿದ್ದು ಇದು ಕುಡಿದ ಅಮಲಿನಲ್ಲಿ ಆಶಿಕಾ ತೂರಾಡೋ ವೀಡಿಯೋನೇ ಆಗಿದೆ.

ಹೌದು ಇದನ್ನ ನೋಡಿ ಎಂತವರಿಗೂ ಏನಪ್ಪ ಇದು ಕನ್ನಡದ ಹುಡುಗಿ ಹೀಗೆ ಮಾಡಿದ್ದಾಳೆ ಅಂತ ಅನಿಸಬಿಡುತ್ತದೆ.ಆಶಿಕಾ ರಂಗನಾಥ್ ರವರು ಮದ್ಯದ ಅಮಲಿನಲ್ಲಿ ತೂರಾಡಿದ್ದು ಕುಡಿತದ ನಶೆ ಇನ್ನಿಲ್ಲದಂತೆ ಮೈ-ಮನ ಆವರಿಸಿಕೊಂಡಿದೆ. ಒಂಚೂರು ಯಾವುದರ ಪರಿವೇ ಇಲ್ಲ.

ಕುಡಿದು ರೋಡ್​ ನಲ್ಲಿ ತೂರಾಡ್ತಿದ್ದರು. ಇನ್ನು ಅದ್ಯಾರೋ ಈ ಬೆಡಗಿಯ ಈ ದೃಶ್ಯ ಸೆರೆ ಹಿಡಿದಿದ್ದು ಅದಕ್ಕೆ ಫುಲ್ ಗರಂ ಆಗಿರೋ ಆಶಿಕಾ ರಂಗನಾಥ್ ರೊಚ್ಚಿಗೆದಿದ್ದಾರೆ. ಅದೇ ಸಿಟ್ಟಿನಲ್ಲಿಯೇ ಕ್ಯಾಮೆರಾ ಆಫ್​ ಮಾಡಿ ಎಂದು ಹೇಳಿ ಮಧ್ಯೆದ ಬೆರಳು ತೋರಿಸಿ ಹೊರಟೇ ಹೋಗಿದ್ದರು.

ಆಶಿಕಾ ರಂಗನಾಥ್ ವೈರಲ್ ವೀಡಿಯೋ ನಂತರ ರಿಯಾಕ್ಟ್ ಮಾಡಿದ್ದು ಈ ವೀಡಿಯೋ ರೆಮೋ ಸಿನಿಮಾದ ವೀಡಿಯೋನೆ ಆಗಿದೆ. ಇದು ರಿಯಲ್ ಅಲ್ಲ. ರೀಲ್ ವೀಡಿಯೋ. ಅದು ಹೇಗೆ ಹೊರಗಡೆ ಬಂತೋ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದು ವೈರಲ್ ವೀಡಿಯೋವನ್ನ ತುಂಬಾ ಒಂಚೂರು ಗಮನಿಸಿದರೆ ನಿಮಗೆ ಗೊತ್ತಾಗಿಯೇ ಬಿಡುತ್ತದೆ. ಯಾಕೆಂದ್ರೆ ಸಿನಿಮಾ ಸೆಟ್​ನಲ್ಲಿರೋ ಲೈಟ್​ಗಳು ಎಲ್ಲವೂ ಇಲ್ಲಿ ಕಾಣಿಸುತ್ತವೆ. ಸಿನಿಮಾ ಟೀಮ್​​ನ ಇತರ ಸದಸ್ಯರು ಇಲ್ಲಿ ಅಕ್ಕ-ಪಕ್ಕದಲ್ಲಿಯೇ ನಿಂತಿದ್ದಾರೆ.

ಇನ್ನು ರೇಮೊ ಸಿನಿಮಾದ ಪ್ರಮೋಷನ್​ ಗಾಗಿಯೇ ಹೀಗೆ ಮಾಡಿದ್ರೇ? ಈ ಒಂದು ಪ್ರಶ್ನೆಗೆ ಡೈರೆಕ್ಟರ್ ಪವನ್ ಒಡೆಯರ್ ಅವರಿಂದಲೂ ಯಾವುದೇ ಉತ್ತರ ಬರೋದಿಲ್ಲ. ಆಶಿಕಾ ಕೂಡ ಈ ಬಗ್ಗೆ ಏನೂ ಹೇಳೋದಿಲ್ಲ. ಅದು ಅವರಿಗೆ ಗೊತ್ತಿದಿಯೋ ಇಲ್ವೋ ಅನ್ನೋದೇ ಡೌಟು.

ಇರಲಿ ಬಿಡಿ ಸಿನಿಮಾ ರಿಲೀಸ್ ಟೈಮ್​ ನಲ್ಲಿ ಇಂತಹ ವೈರಲ್ ಎಡವಟ್ಟುಗಳು ಆಗ್ತಾನೇ ಇರುತ್ತವೆ. ಇದನ್ನ ಯಾರು ಲೀಕ್ ಮಾಡಿದ್ರೋ ಏನೋ. ಸಿನಿಮಾ ರಿಲೀಸ್ ಆಗೋ ಮುಂಚೇನೆ ಹೀಗೆ ಆಗಿದೆ ಅಂತಲೂ ನಟಿ ಆಶಿಕಾ ರಂಗನಾಥ್ ಹೇಳಿಕೊಂಡಿದ್ದರು. ಸದ್ಯ ಇದೀಗ ಚಿತ್ರದ ಮೇಕಿಂಗ್ ವಿಡಿಯೋ ಒಂದು ರಿಲೀಸ್ ಆಗಿದ್ದು ಇಲ್ಲಿ ಆಶಿಕಾ ಡೈಲಾಗ್ ಹೊಡೆಯಲು ಎಷ್ಟು ಸೈಕಲ್ ಹೊಡೆಯುತ್ತಿದ್ದಾರೆ ನೀವೆ ನೋಡಿ.