ಹೌದು ನಾವು ಪುರಾತನ ಕಾಲದಿಂದಲೂ ಕೂಡ ನಂಬಿಕೊಂಡು ಬಂದಹಾಗೆ ನಮಗೆ ವಿದ್ಯೆ ಕಲಿಸುವ ಗುರುಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜೆ ಮಾಡುತ್ತೇವೆ. ಗುರುಭ್ಯೋ ನಮಃ ಎಂದೇ ಸಂಭೋದಿಸುತ್ತೇವೇ. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ನಮಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಂ ಇದು ಹೆಚ್ಚಿನ ಶಾಲೆಗಳಲ್ಲಿ ಮಕ್ಕಳಿಗೆ ಹೇಳಿಕೊಡಲಾಗುತ್ತದೆ.
ಇನ್ನು ಶಿಕ್ಷಕರು ಕೂಡ ಮಕ್ಕಳ ಜೊತೆ ಒಂದು ಅಂತರವನ್ನೇ ಕಾಯ್ದುಕೊಂಡೇ ಇರುತ್ತಾರೆ. ಹೌದು ಮಕ್ಕಳ ಹಾಗೂ ಶಿಕ್ಷಕರ ನಡುವೆ ಅದೇನೇ ಪ್ರೀತಿ ಇದ್ದರೂ ಕೂಡ ಅದು ಗೌರವ ಪೂರ್ಣವಾಗಿರುತ್ತದೆ. ಗುರುಗಳು ಅದೆಲ್ಲಿ ಸಿಕ್ಕಿದರೂ ಕೂಡ ಭಯ ಹಾಗೂ ಗೌರವದಿಂದಲೇ ನಮಸ್ಕಾರ ಮಾಡಬೇಕು ಅನ್ನೋದನ್ನು ನಮಗೆ ಚಿಕ್ಕದಿನಿಂದಲೂ ಕೂಡ ಹೇಳಿಕೊಡಲಾಗುತ್ತದೆ.
ಮನೆಯೇ ಮೊದಲ ಪಾಠ ಶಾಲೆ ಎಂದು ಇದ್ದರೂ ಕೂಡ ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಅಂತಿದ್ದರೆ ಜೀವನದಲ್ಲಿ ಯಶಸ್ಸು ಕಾಣಬೇಕು ನಾವು ತಲುಪಬೇಕಾಗಿರುವ ಗುರಿ ಯಾವುದು ಎಂದು ನಮಗೆ ಗೊತ್ತಾಗಬೇಕು ಎಂತಿದ್ದರೆ ಅದಕ್ಕೆ ದಾರಿಯಾಗಿರುವುದೇ ಗುರುಗಳು ಅಂದರೆ ಶಿಕ್ಷಕರು ಅಲ್ಲವೇ. ಸದ್ಯ ಈಗ ಶಾಲಾ ಶಿಕ್ಷಕಿ ಮಕ್ಕಳಿಗೆ ನ್ರತ್ಯ ಹೇಳಿಕೊಡುತ್ತಿರುವ ವಿಡಿಯೋ ನೋಡಿ.