ಡಿಬಾಸ್ ಖ್ಯಾತಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಬ ಈ ಒಂದು ಹೆಸರಿಗೆ ಎಂಥಹ ತಾಕತ್ತು ಇದೆ ಎಂದು ತಮಗೆಲ್ಲರಿಗೂ ಗೊತ್ತೇ ಇದೆ. ಒಂದು ಕಾಲದ ಟಾಪ್ ನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರನಾಗಿದ್ದರೂ ಸಹ ಡಿಬಾಸ್ ದರ್ಶನ್ ಅವರು ಸಿನಿಮಾ ಕರಿಯರ್ ಜರ್ನಿ ಅಷ್ಟು ಸುಲಭವಾಗಿರಲಿಲ್ಲ.
ದರ್ಶನ್ ಅವರು ಸಿನಿಮಾ ಜರ್ನಿಯನ್ನು ಶುರು ಮಾಡಿದ್ದೂ ಒಬ್ಬ ಲೈಟ್ ಬಾಯ್ ಆಗಿ ಎಂಬುದು ತಮಗೆ ತಿಳಿದಿರಬಹುದು. ಹೌದು ಶಿವಣ್ಣ ಅವರ ಜನುಮದ ಜೋಡಿ ಸಿನಿಮಾದಲ್ಲಿ ದರ್ಶನ್ ಅವರು ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದು ಆ ಬಳಿಕ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನೂ ಮಾಡುತ್ತಾ ಮೆಜೆಸ್ಟಿಕ್ ಎಂಬ ಚಿತ್ರದ ಮೂಲಕ ಹೀರೊ ಆಗಿ ಹೊರ ಹೊಮ್ಮಿದರು.
ಹೌದು ಇವತ್ತಿಗೆ ಡಿಬಾಸ್ ದರ್ಶನ್ ಅವರು ಕನ್ನಡದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದು ಕರ್ನಾಟಕದಲ್ಲಿ ದರ್ಶನ್ ಅವರಿಗೆ ಕೋಟ್ಯಂತರ ಜನ ಅಭಿಮಾನಿಗಳಿದ್ದಾರೆ.
ಕಳೆದ ವರುಷ ಡಿಬಾಸ್ ದರ್ಶನ್ ಅವರ ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿಯಾದ ಪ್ರದರ್ಶನ ಕಂಡಿದ್ದು ರಾಬರ್ಟ್ ಸಿನಿಮಾವನ್ನು ಉಮಾಪತಿ ಅವರು ನಿರ್ಮಾಣ ಮಾಡಿ ತರುಣ್ ಸುಧೀರ್ ರವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೀಗ ಅಭಿಮಾನಿಯೇ ಮದುವೆಗೆ ಸೈರ್ಪ್ರೈಸ್ ಎಂಟ್ರಿ ಕೊಟ್ಟ ದರ್ಶನ್ ವಿಡಿಯೋ ನೋಡಿ.