ಸದ್ಯ ಚಂದನವನದ ಬಹುಬೇಡಿಕೆಯ ನಟಿ ಎಂದರೆ ಲಕ್ಕಿ ಗರ್ಲ್, ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು. ಕಳೆದ ಎರಡು ವರುಷಗಳಿಂದ ಈ ಗುಳಿ ಕೆನ್ನೆ ಸುಂದರಿ ಬಹುತೇಕ ಹಿಟ್ ಸಿನಿಮಾಗಳನ್ನೇ ಚಿತ್ರರಂಗಕ್ಕೆ ನಿಡುತ್ತಾ ಬಂದಿದ್ದಾರೆ.
ಸ್ಯಾಂಡಲ್ ವುಡ್ ನ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಅಭಿನಯಿಸಿ ಸೈ ಅನ್ನಿಸಿಕೊಂಡಿರುವ ಈ ರಚ್ಚು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಒಪ್ಪಿಕೊಂಡು ಸದಾ ನಿರತರಾಗಿರುತ್ತಾರೆ. ಇದೀದ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ರಚ್ಚು ಸಿನಿಮಾ ನಿರ್ಮಾಣ ಮಾಡುವುದಕ್ಕೂ ಮುಂದಾಗಿದ್ದಾರೆ.
ಸಿನಿಮಾರಂಗದಲ್ಲಿ ಬರೀ ಸ್ಟಾರ್ ನಟರಷ್ಟೆ ಅಲ್ಲದೇ, ನಟಿಮಣಿಯರು ಕೂಡ ಸಿನಿಮಾ ನಿರ್ಮಾಣ ಮಾಡುವ ಕನಸು ಕಾಣುತ್ತಿದ್ದು, ನಟನೆಯ ಜೊತೆ, ಸಿನಿಮಾ ನಿರ್ಮಾಣದ ಮೇಲೂ ನಟಿಮಣಿಯರು ಹೆಚ್ಚು ಮನಸು ಮಾಡುತ್ತಾರೆ.
ಕನ್ನಡದ ಗುಳಿಕೆನ್ನೆ ಸುಂದರಿ ರಚಿತಾ ರಾಮ್ ಅವರು ಕೂಡ ಇದೀಗ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟಾಕ್ಕುವ ಸುಳಿವು ಕೊಟ್ಟಿದ್ದು, ತಮ್ಮ ಬ್ಯಾನರ್ನ ಮೊದಲನೇ ಸಿನಿಮಾದಲ್ಲಿ ದರ್ಶನ್ ನಟಿಸಬೇಕು ಎಂಬುದು ಅವರ ಮಹದಾಸೆಯಾಗಿದೆ. ಇದೀಗ ಅಕುಲ್ ಜೊತೆ ಅವರು ಕುಣಿದ ವಿಡಿಯೋ ವೈರಲ್ ಆಗಿದೆ