ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮೊದಲಬಾರಿ ಅವಾರ್ಡ್ ಪಡೆಯುವಾಗ ಸಪ್ತಮಿ ಗೌಡ ಯಡವಟ್ಟು..ವಿಡಿಯೋ

4,478

Sapthami Gowdas Excited On Receiving Best Debutant Actress: ಸದ್ಯ ರಿಷಬ್‌ ಶೆಟ್ಟಿಯವರ ಕಾಂತಾರ ಸಿನಿಮಾ ಮಾಡಿರುವ ಮೋಡಿ ಬಹಳ ದೊಡ್ಡದು. ಹೌದು ಈ ಸಿನಿಮಾದಲ್ಲಿ ನಟಿಸಿರುವ ಹಲವರು ಈಗ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದು ಈ ಪೈಕಿ ನಾಯಕಿ ನಟಿ ಸಪ್ತಮಿ ಗೌಡರಿಗೂ ಬೇಡಿಕೆ ಹೆಚ್ಚಾಗಿದ್ದು ಹಲವು ಸಿನಿಮಾ ಕಥೆಗಳನ್ನು ಅವರು ಕೇಳುತ್ತಿದ್ದಾರೆ. ಹೌದು ಅದರಲ್ಲಿ ನಟ ಅಭಿಷೇಕ್‌ ಅಂಬರೀಶ್‌ ಜತೆಗಿನ ಕಾಳಿ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದು ಕಾಂತಾರ ಸಿನಿಮಾದ ನಂತರ ಹತ್ತಕ್ಕೂ ಹೆಚ್ಚಿನ ಕಥೆಗಳನ್ನು ಕೇಳಿದೆ.

ಹೌದು ಅದರಲ್ಲಿ ಬೆಸ್ಟ್‌ ಅನಿಸಿದ್ದನ್ನು ಮಾತ್ರ ಆಯ್ಕೆ ಮಾಡಿದ್ದು ಈ ಬೆಸ್ಟ್‌ ಈಗ ಕೃಷ್ಣ ನಿರ್ದೇಶನದ ಕಾಳಿ ಸಿನಿಮಾ ಮೂಲಕ ಆರಂಭವಾಗಲಿದೆ. ಇದರಲ್ಲಿ ನನ್ನದು ಬಹಳ ವಿಭಿನ್ನ ಪಾತ್ರವಾಗಿದ್ದು ಕಾಂತಾರ ಸಿನಿಮಾದ ನಂತರ ನಾನು ಎಂತಹ ಪಾತ್ರದಲ್ಲಿ ನಟಿಸಬೇಕು ಎಂದುಕೊಂಡಿದ್ದೇನೋ ಅಂತಹದ್ದೇ ಪಾತ್ರವಿದು. ನನ್ನ ಮೊದಲ ಸಿನಿಮಾಗೂ ಎರಡನೇ ಸಿನಿಮಾದ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿದ್ದು ಸದ್ಯ ಈಗ ಕಾಂತಾರ ಮತ್ತು ಕಾಳಿಯ ಸಿನಿಮಾದ ಪಾತ್ರಕ್ಕೂ ವ್ಯತ್ಯಾಸವಿದೆ. ಈ ರೀತಿ ಪ್ರತಿ ಪಾತ್ರವೂ ವಿಭಿನ್ನಾಗಿರಬೇಕು ಎಂದು ಯೋಚಿಸಿ ಕಥೆಗಳನ್ನು ಓಕೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ ಸಪ್ತಮಿ ಗೌಡ.

ಪ್ರತಿ ಸಿನಿಮಾದಲ್ಲಿ ಕೂಡ ಸಪ್ತಮಿಯನ್ನು ನೋಡಿದಾಗ ಇವರು ಈ ಹಿಂದೆ ಯಾವುದೇ ಸಿನಿಮಾದಲ್ಲಿ ಇಂತಹ ಪಾತ್ರ ಮಾಡಿಲ್ಲ ಎಂದು ನೋಡುವವರು ಅಂದುಕೊಳ್ಳಬೇಕಿದ್ದು ನಾನು ಕೂಡ ಪ್ರತಿ ಪಾತ್ರದಲ್ಲಿಯೂ ಏನಾದರೊಂದು ಹೊಸದನ್ನು ಕಲಿಯಬೇಕು. ಈಗ ಕಾಳಿ ಸಿನಿಮಾದಲ್ಲಿಯೂ ಬಹಳಷ್ಟು ವಿಷಯಗಳನ್ನು ಕಲಿಯಲಿದ್ದೇನೆ. ಜತೆಗೆ ಯಾವುದೇ ಪಾತ್ರ ಒಪ್ಪಿಕೊಂಡರೂ ಅದರಲ್ಲೊಂದು ಎಕ್ಸೈಟ್‌ಮೆಂಟ್‌ ಇರಬೇಕು ಎನ್ನುವುದು ಸಪ್ತಮಿ ಮಾತಾಗಿದೆ.

ಇನ್ನು ಕಾಂತಾರ ಸಿನಿಮಾ ನಂತರ ಸಂಭಾವನೆ ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ನೀವು ಆಗಿದೆ ಎಂದುಕೊಂಡರೆ ಆಗಿದೆ ಎಂದರ್ಥ ಎಂದರು. ಹೌದು ಕಾಳಿಯ ಜತೆಗೆ ಇನ್ನೊಂದು ಸಿನಿಮಾವನ್ನು ಸಪ್ತಮಿ ಗೌಡ ಒಪ್ಪಿಕೊಂಡಿದ್ದು ಸದ್ಯದಲ್ಲೇ ಅದರ ಅನೌನ್ಸ್‌ಮೆಂಟ್‌ ಆಗಲಿದೆ. ಸದ್ಯಕ್ಕೆ ಅವರು ಕಾಳಿ ಸಿನಿಮಾ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದಾರೆ. ಕನ್ನಡ ಸಿನಿಮಾಗಳ ಜತೆಗೆ ಸಪ್ತಮಿಗೆ ಹಿಂದಿಯ ದೊಡ್ಡ ನಿರ್ಮಾಣ ಸಂಸ್ಥೆಯಿಂದಲೂ ಆಫರ್‌ ಬಂದಿದ್ದು ಆದರೆ ಅದನ್ನು ಅವರು ಒಪ್ಪಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ಇನ್ನು ಕಾಳಿ ಸಿನಿಮಾದಲ್ಲಿ ಸಪ್ತಮಿ ಗೌಡ ಪಾತ್ರದ ಬಗ್ಗೆ ಹೇಳಿರುವ ನಿರ್ದೇಶಕ ಕೃಷ್ಣ ರವರು ಸಪ್ತಮಿ ಗೌಡರದ್ದು ಬಹಳ ಇಂಟೆನ್ಸ್‌ ಇರುವ ಪಾತ್ರ. ನಾಯಕ ನಟ ಅಭಿಷೇಕ್‌ ಅವರಷ್ಟೇ ಸಮಾನ ಸ್ಕ್ರೀನ್‌ ಸ್ಪೇಸ್‌ ನಾಯಕಿಗೂ ಇದ್ದು ಮೈಸೂರು ಭಾಗದಲ್ಲಿ ಸೆಟಲ್‌ ಆಗಿರುವ ತಮಿಳು ಹುಡುಗಿಯ ಪಾತ್ರವದು. ಕೆಲವೇ ದಿನಗಳಲ್ಲಿ ಅವರ ಲುಕ್‌ ಟೆಸ್ಟ್‌ ಮತ್ತು ಫೋಟೊಶೂಟ್‌ ಮಾಡಿಸಿ ಅಧಿಕೃತ ಪೋಸ್ಟರ್‌ ಲಾಂಚ್‌ ಮಾಡುತ್ತೇವೆ ಎಂದಿದ್ದಾರೆ. ಕಾಳಿ ಸಿನಿಮಾದ ಮುಹೂರ್ತ ನವೆಂಬರ್‌ 28 ರಂದು ನಡೆಯಲಿದ್ದು ಈ ಸಿನಿಮಾಗೆ ಚರಣ್‌ರಾಜ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಇನ್ನು ಮಾಜಿ ಪೊಲೀಸ್‌ ಅಧಿಕಾರಿಯ ಪುತ್ರಿಯಾಗಿರುವ ಸಪ್ತಮಿ ಗೌಡ ಮೂಲತಃ ಕ್ರೀಡಾಪಟುವಾಗಿದ್ದು ಯಾವುದೋ ಕಾರ್ಯಕ್ರಮದಲ್ಲಿ ದುನಿಯಾ ಸೂರಿ ಕಣ್ಣಿಗೆ ಕಂಡಿದ್ದ ಇವರು ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಸಿನಿಮಾದಲ್ಲಿ ಮೂವರು ನಾಯಕಿಯರಲ್ಲಿ ಒಬ್ಬರಾಗಿ ನಟಿಸಿದ್ದರು. ಅದಾದ ಮೇಲೆ ಕಾಂತಾರ ಚಿತ್ರಕ್ಕೆ ಆಯ್ಕೆಯಾಗಿದ್ದರು. ಈಗ ಲೀಲಾ ಪಾತ್ರಧಾರಿ ಸಪ್ತಮಿ ಜಗತ್ತಿನಾದ್ಯಂತ ಗಮನ ಸೆಳೆದಿದ್ದಾರೆ. ಇನ್ನು ಸಪ್ತಮಿ ಮೊದಲ ಸಿನಿಮಾ ಸೈಮಾ ಅವಾರ್ಡ್ ಪಡೆದುಕೊಂಡಿದ್ದು ಪ್ರಶಸ್ತಿ ಪಡೆದ ಬಳಿಕ ಸಪ್ತಮಿ ಮಾತು ಹೇಗಿತ್ತು ಎಂದು ಲೇಖನಿಯ ಕೆಳಗಿರುವ ವಿಡಿಯೋದಲ್ಲಿ ನೋಡಬಹುದು.