ಚಿತ್ರಮಂದಿರಗಳಲ್ಲಿ ಸರಿ ಸುಮಾರು ಸಾವಿರಾರು ಕೋಟಿ ಬಾಚಿದ ಆರ್ಆರ್ಆರ್ ಸಿನಿಮಾ ಒಟಿಟಿಯಲ್ಲೂ ಧೂಳ್ಳೆಬ್ಬಿಸಿತು. ಹೌದು ಈ ಚಿತ್ರ ತೆರೆಕಂಡು ತಿಂಗಳುಗಳೇ ಉರುಳಿದರೂ ಸಿನಿಮಾದ ಹವಾ ಕಡಿಮೆ ಆಗಿಲ್ಲ. ಹಲವು ವಿಚಾರಗಳಿಂದ ಈ ಸಿನಿಮಾ ಸುದ್ದಿ ಆಗುತ್ತಿದೆ. ಸದ್ಯ ಈಗ ಹಾಲಿವುಡ್ ಅಂಗಳದಲ್ಲಿ ಚಿತ್ರಕ್ಕೆ ಪುರಸ್ಕಾರ ಸಿಕ್ಕಿದ್ದು ಹಾಲಿವುಡ್ನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ರಾಜಮೌಳಿ ಸಿನಿಮಾಗೆ ರನ್ನರ್ ಅಪ್ ಸಿಕ್ಕಿದೆ. ಹೌದು ಭಾರತದ ಚಿತ್ರವೊಂದು ಈ ರೀತಿಯ ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದ್ದು
ರಾಜಮೌಳಿ ಚಿತ್ರಗಳಲ್ಲಿ ಅದ್ದೂರಿತನ ಕೊಂಚ ಹೆಚ್ಚೇ ಇರುತ್ತದೆ. ಹೌದು ಆರ್ಆರ್ಆರ್ ಚಿತ್ರ ಕೂಡ ಸಖತ್ ಅದ್ದೂರಿಯಾಗಿ ಮೂಡಿ ಬಂದಿದ್ದು ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 1000+ ಕೋಟಿ ರೂಪಾಯಿ ಬಾಚಿಕೊಂಡಿರುವುದು ಚಿತ್ರದ ಹೆಚ್ಚುಗಾರಿಕೆ. ಇನ್ನು ಈ ಚಿತ್ರಕ್ಕೆ ಹಾಲಿವುಡ್ ಮಂದಿಯೂ ಕೂಡ ಮೆಚ್ಚುಗೆ ಸೂಚಿಸಿದ್ದು ಈಗ ಚಿತ್ರ ಹಾಲಿವುಡ್ ಸಿನಿಮಾಗಳ ಜತೆ ಸ್ಪರ್ಧಿಸಿ ಗೆಲುವಿನ ಸಮೀಪದಲ್ಲಿ ಹಿನ್ನಡೆ ಕಂಡಿದೆ.
ಹೌದು ಅಮೆರಿಕದಲ್ಲಿ ನಡೆದ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಮಿಡ್ ಸೀಸನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದ್ದು ಸದ್ಯ ಈ ಪೈಕಿ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಆರ್ಆರ್ಆರ್ ಸಿನಿಮಾ ನಾಮ ನಿರ್ದೇಶನಗೊಂಡಿತ್ತು. ಈ ವಿಭಾಗದಲ್ಲಿ ಹಾಲಿವುಡ್ನ ದಿ ಬ್ಯಾಟ್ಮನ್ ಹಾಗೂ ಟಾಪ್ ಗನ್: ಮಾರ್ವಿಕ್ ಸಿನಿಮಾಗಳು ಸಹ ಇದ್ದು ಅಂತಿಮವಾಗಿ ಎವರಿಥಿಂಗ್ ಎವರಿವೇರ್ ಆಲ್ ಎಟ್ ಒನ್ಸ್ ವಿನ್ನರ್ ಆಗಿ ಹೊರ ಹೊಮ್ಮಿದರೆ ಆರ್ಆರ್ಆರ್ ರನ್ನರ್ ಅಪ್ ಆಗಿದೆ.
ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದು ಮಾರ್ಚ್ 24ರಂದು ಆರ್ಆರ್ಆರ್ ಸಿನಿಮಾ ತೆರೆಗೆ ಬಂತು. ಹೌದು ಮೇ ಅಂತ್ಯಕ್ಕೆ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿದ್ದು ನೆಟ್ಫ್ಲಿಕ್ಸ್ನಲ್ಲಿ ಆರ್ಆರ್ಆರ್ ಹಿಂದಿ ಅವತರಣಿಕೆ ಪ್ರದರ್ಶನವಾಗುತ್ತಿದೆ.
ಹೌದು ತೆಲುಗು ತಮಿಳು ಮಲಯಾಳಂ ಹಾಗೂ ಕನ್ನಡ ಅವತರಣಿಕೆಗಳು ಜೀ5ನಲ್ಲಿ ಬಿತ್ತರವಾಗಿದ್ದು ಈ ಸಿನಿಮಾ ಮೇಕಿಂಗ್ ಮೂಲಕ ಸಾಕಷ್ಟು ಗಮನ ಸೆಳೆಯಿತು. ಜ್ಯೂ.ಎನ್ಟಿಆರ್ ಹಾಗೂ ರಾಮ್ ಚರಣ್ ಕಾಂಬಿನೇಷನ್ ಫ್ಯಾನ್ಸ್ಗೆ ಇಷ್ಟವಾಯಿತು. ನೈಜ ಪಾತ್ರಗಳನ್ನು ಇಟ್ಟುಕೊಂಡು ರಾಜಮೌಳಿ ಕಾಲ್ಪನಿಕ ಕಥೆ ಹೆಣೆದಿದ್ದರು. ಇನ್ನು ಈ ಚಿತ್ರದ ಮೇಕಿಂಗ್ ಹೇಗಿತ್ತು ಎಂದು ತಿಳಿಯಲು ಲೇಖನಿಯ ಕೆಳಗಿರುವ ವಿಡಿಯೋ ನೋಡಿ.
ಇನ್ನು ಆರ್ಆರ್ಆರ್ ಸಿನಿಮಾ ತೆಲುಗಿನಲ್ಲಿ ಸಿದ್ಧವಾಗಿ ಹಿಂದಿ ಕನ್ನಡ ತಮಿಳು ಮಲಯಾಳಂ ಭಾಷೆಗಳಿಗೆ ಡಬ್ ಆಗಿ ತೆರೆಕಂಡಿದೆ. ಎಲ್ಲ ರಾಜ್ಯಗಳಲ್ಲೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಈಗ ಮುಂಬೈನಲ್ಲಿ ಸಕ್ಸಸ್ ಮೀಟ್ ಮಾಡಲಾಗಿದೆ. ಈ ವೇಳೆ ಆರ್ಆರ್ಆರ್ 2 ಮಾಡುವ ಬಗ್ಗೆ ವಿಷಯ ಪ್ರಸ್ತಾಪ ಆಗಿದ್ದು ಜ್ಯೂ. ಎನ್ಟಿಆರ್ ರಾಮ್ ಚರಣ್ ರಾಜಮೌಳಿ ಅವರು ಸೀಕ್ವೆಲ್ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ಹೇಳಿದ್ದಾರೆ.
ಹೌದು ಆರ್ಆರ್ಆರ್ ಸಿನಿಮಾದ ಕಥೆಗಾರ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ರವರು ಸೀಕ್ವೆಲ್ ವಿಚಾರವನ್ನು ಖಚಿತಪಡಿಸಿದ್ದು ಈ ಸಿನಿಮಾ ದೊಡ್ಡ ಯಶಸ್ಸು ಕಂಡಿರುವುದರಿಂದ ಫ್ರಾಂಚೈಸ್ ಮಾಡಲು ಆಲೋಚಿಸಿದ್ದೇವೆ. ಶೀಘ್ರದಲ್ಲೇ ಸೀಕ್ವೆಲ್ ಬರಲಿದೆ ಅಂತ ಅವರು ಹೇಳಿದ್ದಾರೆ ಎಂದು ವರದಿ ಆಗಿದೆ. ಆರ್ಆರ್ಆರ್ ಸೀಕ್ವೆಲ್ ಬಗ್ಗೆ ರಾಜಮೌಳಿ ಅವರು ಪ್ಲ್ಯಾನ್ ಮಾಡಿದರೆ ಒಟ್ಟಿಗೆ ನಟಿಸಲು ನಮಗೆ ಖುಷಿ ಆಗುತ್ತದೆ. ಈ ಆಸೆ ಈಡೇರಲಿ ಎಂದು ರಾಮ್ ಚರಣ್ ಹೇಳಿದ್ದಾರೆ.