ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮೊದಲಬಾರಿ ಮಧುರ ಕಂಠದಲ್ಲಿ ಹಾಡಿದ ರಚಿತಾರಾಮ್..ಚಿಂದಿ ವಿಡಿಯೋ

2,088

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಎಂದರೆ ಲಕ್ಕಿ ಗರ್ಲ್ ಡಿಂಪಲ್​ ಕ್ವೀನ್​ ರಚಿತಾ ರಾಮ್ ಅವರು. ಹೌದು ಕಳೆದ ಎರಡು ವರುಷಗಳಿಂದ ಈ ಗುಳಿ ಕೆನ್ನೆ ಸುಂದರಿ ಬಹುತೇಕ ಹಿಟ್​ ಸಿನಿಮಾಗಳನ್ನೇ ಚಿತ್ರರಂಗಕ್ಕೆ ನಿಡುತ್ತಾ ಬಂದಿದ್ದು ಸ್ಯಾಂಡಲ್ ವುಡ್ ನ ಬಹುತೇಕ ಎಲ್ಲಾ ಸ್ಟಾರ್​ ನಟರೊಂದಿಗೆ ಅಭಿನಯಿಸಿ ಸೈ ಅನ್ನಿಸಿಕೊಂಡಿರುವ ಈ ರಚ್ಚು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನ ಒಪ್ಪಿಕೊಂಡು ಸದಾ ನಿರತರಾಗಿರುತ್ತಾರೆ.

ಇದೀಗ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ರಚ್ಚು ಸಿನಿಮಾ ನಿರ್ಮಾಣ ಮಾಡುವುದಕ್ಕೂ ಮುಂದಾಗಿದ್ದು
ಸಿನಿಮಾರಂಗದಲ್ಲಿ ಬರೀ ಸ್ಟಾರ್​ ನಟರಷ್ಟೆ ಅಲ್ಲದೇ ನಟಿಮಣಿಯರು ಕೂಡ ಸಿನಿಮಾ ನಿರ್ಮಾಣ ಮಾಡುವ ಕನಸು ಕಾಣುತ್ತಿದ್ದು ನಟನೆಯ ಜೊತೆ ಸಿನಿಮಾ ನಿರ್ಮಾಣದ ಮೇಲೂ ನಟಿಮಣಿಯರು ಹೆಚ್ಚು ಮನಸು ಮಾಡುತ್ತಾರೆ. ಹೌದು ಕನ್ನಡದ ಗುಳಿಕೆನ್ನೆ ಸುಂದರಿ ರಚಿತಾ ರಾಮ್​ ಅವರು ಕೂಡ ಇದೀಗ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟಾಕ್ಕುವ ಸುಳಿವು ಕೊಟ್ಟಿದ್ದು ತಮ್ಮ ಬ್ಯಾನರ್​​ನ ಮೊದಲನೇ ಸಿನಿಮಾದಲ್ಲಿ ದರ್ಶನ್​ ನಟಿಸಬೇಕು ಎಂಬುದು ಅವರ ಮಹದಾಸೆಯಾಗಿದೆ.

ಕನ್ನಡ ಚಿತ್ರರಂಗದ ಅದೃಷ್ಟ ತಾರೆ ಎಂದರೆ ರಚಿತಾರಾಮ್. ಹೌದು ಒಂದು ಕಾಲದಲ್ಲಿ ರಕ್ಷಿತಾ ಮತ್ತು ರಮ್ಯಾ ತರಹದ ಟ್ರೆಂಡ್ ಸೆಟ್ ಮಾಡಿರುವ ಈ ಗುಳಿಕೆನ್ನೆ ಸುಂದರಿ ಹೊಸಬರ ಚಿತ್ರಕ್ಕೆ ಲಕ್ಕಿ ಗರ್ಲ್ ಅಂತಾನೇ ಹೇಳಬಹುದು. ಈ ಮುದ್ದಾದ ಪೋರಿಗೆ ಕರುನಾಡ ಪಡ್ಡೆ ಹೈಕಳೆ ಮಾರುಹೋಗಿದ್ದಾರೆ. ಅವಳ ಕತ್ತರಿಯಂತಹ ನೋಟ ಗುಳಿಗೆನ್ನೆ ಮೋನಾ ಲೀಸಾ ನಂತಹ ನಗು ಸೌಂದರ್ಯ ರಾಶಿಯೇ ಮೈತುಂಬಿಕೊಂಡಿರುವ ಈ ನಟಿಗೆ ಕನ್ನಡದಲ್ಲಿ ಕೋಟ್ಯಾಂತರ ಅಭಿಮಾನಿಗಳಿದ್ದಾರೆ ಎನ್ನಬಹುದು.

ಟಾಪ್ ನಟರು ಸೇರಿದಂತೆ ಹೊಸಬರ ಚಿತ್ರಗಳಳೆಲ್ಲಾ ಅಭಿನಯಿಸುವ ರಚ್ಚು ಕನ್ನಡದ ನಂಬರ್ ಒನ್ ನಟಿ ಅಂತಾನೇ ಹೇಳಬಹುದು. ಹೌದು ಸಿನಿಮಾಗಳ ವಿಚಾರಗಳ ಜೊತೆ ತಮ್ಮ ವಯಕ್ತಿಕ ವಿಚಾರದಲ್ಲೂ ಸದಾ ಸುದ್ದಿಯಲ್ಲಿರುವ ರಚ್ಚು ತಮ್ಮ ವಿವಾಹದ ಕುರಿತು ಅನೇಕ ವಂದಂತಿಗಳು ಹರಿದಾಡುತ್ತಲೇ ಇರುತ್ತವೆ. ಈ ಹಿಂದೆ ಸೀತಾರಾಮ ಕಲ್ಯಾಣ ಚಿತ್ರದ ಮೂಲಕ ನಿಖಿಲ್ ಕುಮಾರಸ್ವಾಮಿ ಅವರ ಜೊತೆ ಅಭಿನಯಿಸಿದ್ದ ರಚಿತಾ ನಿಖಿಲ್ ಅವರ ಜೊತೆ ಆಪ್ತ ಸ್ನೇಹಿತೆಯಾಗುತ್ತಾರೆ.

ತದನಂತರ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡುತ್ತವೆ. ಅಲ್ಲದೆ ಇವರಿಬ್ಬರು ಮದುವೆಯಾಗುತ್ತಾರೆ ಎಂಬ ಮಾತುಗಳು ಜೋರಾಗಿಯೇ ಕೇಳುತ್ತಿತ್ತು. ನಂತರ ಈ ಎಲ್ಲ ಊಹಾಪೋಹ ಮತ್ತು ವದಂತಿಗಳಿಗೆ ಸ್ವತಃ ರಚಿತಾ ರಾಮ್ ಅವರೇ ತೆರೆ ಎಳೆದು ನಿಖಿಲ್ ಮತ್ತು ತಮ್ಮ ನಡುವಿನ ಸಂಬಂಧವನ್ನು ಕುರಿತು ರಚಿತಾರಾಮ್ ಅವರು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು.

ಹೌದು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದ ರಚಿತಾ ರಾಮ್
ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ರಚಿತಾ ರಾಮ್ ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರೋ ವದಂತಿಗಳ ಬಗ್ಗೆ ಒಂದು ಸ್ಪಷ್ಟತೆ ಕೊಡಲು ಬಯಸುತ್ತೇನೆ.

ನನ್ನ ಸಿನಿಮಾಗಳ ಕುರಿತಾದ ವಿಷಯಗಳಾಗಲಿ ಅಥವಾ ವೈಯಕ್ತಿಕ ವಿಷಯಗಳಾಗಲಿ ನನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದರೆ ಮಾತ್ರ ಅದು ಸತ್ಯವೆಂದು ಪರಿಗಣಿಸಿ ಮನರಂಜನೆಗಾಗಿ ಸುಳ್ಳು ವದಂತಿಗಳನ್ನು ಸೃಷ್ಟಿ ಮಾಡಿದರೆ ಖುಷಿಯುಂಟಾಗಬಹುದು ಆದರೆ ಅದರಿಂದ ನನಗೆ ಹಾಗೂ ವದಂತಿಗಳಲ್ಲಿ ಸಿಲುಕಿದ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೇಸರ ಉಂಟಾಗುತ್ತದೆ ಎಂಬ ವಿಷಯ ಅರ್ಥ ಮಾಡಿಕೊಂಡರೆ ಉತ್ತಮ.

ಅತಿ ಮುಖ್ಯವಾದ ಸಂಗತಿ ಏನೆಂದರೆ ಸದ್ಯಕ್ಕೆ ನನ್ನ ಮದುವೆ ನಿಶ್ಚಯ ಆಗಿಲ್ಲ. ನಾನು ಮದುವೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ತಿಳಿಸಿ ಎಲ್ಲರ ಸಮ್ಮುಖದಲ್ಲ ಗುರು ಹಿರಿಯರ ಆಶೀರ್ವಾದದೊಂದಿಗೆ ಆಗುತ್ತೇನೆ. ಸುಳ್ಳು ವದಂತಿಗಳನ್ನು ನಂಬಿ ವೖಯಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲು ಮಾಡಬೇಡಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತಿದ್ದೇನೆ.

ನಿಮ್ಮ ರಚಿತಾ ರಾಮ್ ಎಂದು ಬರೆದುಕೊಂಡಿದ್ದರು. ಸದ್ಯ ಇದೀಗ ನಿಖಿಲ್ ಮದುವೆ ಅಗಿ ಒಂದು ಮಗುವಿನ ತಂದೆ ಕೂಡ ಆಗಿ ನೆಮ್ಮದಿಯಾಗಿದ್ದಾರೆ. ಈ ನಡುವೆ ನಿಖಿಲ್ ಜೊತೆ ನನ್ನ ರಾಜ ನೀನು ನಿನ್ನ ರಾಣಿ ನೀನು ಎಂದು ರಚಿತಾ ಹಾಡು ಹೇಳಿರುವ ವಿಡಿಯೋ ವೈರಲ್ ಆಗುತ್ತಿದ್ದು ನಂತರ ನಿಖಿಲ್ ಏನೆಂದು ರೇಗಿಸಿದ್ದಾರೆ ನೀವೆ ನೋಡಿ.

.