ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಎದುರೇ ಇದ್ದ ಹುಲಿಯ ಫೋಟೋ ತಗೆದ ಡಿಬಾಸ್…ಧೈರ್ಯ ನೋಡಿ ವಿಡಿಯೋ

48,427

ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅವರಿಗೂ ಪ್ರಾಣಿ ಪಕ್ಷಿಗಳಿಗೂ ಅದೇನೋ ಅವಿನಾಭಾವ ಸಂಬಂಧವಿದೆ ಎನ್ನಬಹುದು. ಹೌದು ಹೀಗಾಗಿಯೇ ಕರ್ನಾಟಕ ಸರ್ಕಾರ ಡಿ ಬಾಸ್​ರನ್ನು ಅರಣ್ಯ ಇಲಾಖೆಯ ರಾಯಭಾರಿಯನ್ನಾಗಿಸಿದ್ದು ಬಿಡುವು ಸಿಕ್ಕಾಗೆಲೆಲ್ಲ ತಮ್ಮ ತೋಟದ ಮನೆ ಹಾಗೂ ಬಂಡೀಪುರ-ನಾಗರಹೊಳೆ ಅಭಯಾರಣ್ಯದಲ್ಲಿ ಕ್ಯಾಮೆರಾ ಹಿಡಿದು ಅಭಿಮಾನಿಗಳ ದಾಸ ಅಡ್ಡಾಡುವುದು ಕೂಡ ಇದೇ ಕಾರಣಕ್ಕೆ.

ಹೌದು ದರ್ಶನ್​ ಅವರಿಗೆ ವೈಲ್ಡ್​ ಲೈಫ್ ಫೋಟೋಗ್ರಫಿ ಎಂದರೆ ಎಷ್ಟು ಇಷ್ಟ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದೇ ಕಾರಣಕ್ಕೆ ದರ್ಶನ್​ ಈ ಹಿಂದೆ ಕೀನ್ಯಾಗೆ ಹೋಗಿ ಅಲ್ಲಿನ ಮಸಾಯಿ ಮಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಸುತ್ತಾಡುತ್ತಾ ವನ್ಯಜೀವಿಗಳ ಛಾಯಾಚಿತ್ರಗಳನ್ನು ಸೆರೆ ಹಿಡಿದು ಹಿಂತಿರುಗಿದರು.

ಹೌದು ಅಷ್ಟೇಅಲ್ಲದೇ ಉತ್ತರ ಭಾರತದ ಕಾಡಿಗೂ ಹೋಗಿ ವೈಲ್ಡ್​ವೈಫ್​ ಫೋಟೋಗ್ರಫಿ ಮಾಡಿಕೊಂಡು ಬಂದಿದ್ದು ದರ್ಶನ್​ ತೆಗೆದ ಈ ಎಲ್ಲ ಫೋಟೋಗಳ ಪ್ರದರ್ಶನವನ್ನು ಸದ್ಯದಲ್ಲೇ ಏರ್ಪಡಿಸಲಾಗುವುದು ಎಂದೂ ಹೇಳಲಾಗಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಎಲ್ಲದಕ್ಕೂ ಬ್ರೇಕ್​ ಬಿತ್ತು. ಇನ್ನು ದರ್ಶನ್​ ಮತ್ತೆ ವನ್ಯಜೀವಿಗಳ ಛಾಯಾಗ್ರಹಣ ಮಾಡಲು ಮುಂದಾಗಿದ್ದು ಅದಕ್ಕಾಗಿ ಇತ್ತೀಚೆಗಷ್ಟೆ ದರ್ಶನ್​ ಕಬಿನಿಯಲ್ಲಿ ಸಫಾರಿ ಮಾಡಿದ್ದಾರೆ. ಹೌದು ಸಫಾರಿಯಲ್ಲಿದ್ದ ನಟ ದರ್ಶನ್ ಅವರ ಕ್ಯಾಮರಾದಲ್ಲಿ ಹುಲಿ ಸೆರೆಯಾಗಿದೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆಯ ಕಬಿನಿಗೆ ದರ್ಶನ್ ​ರವರು ಆಗಾಗ ಸ್ನೇಹಿತರ ಜೊತೆ ಸಫಾರಿ ಮಾಡುತ್ತಿರುತ್ತಾರೆ. ಹೌದು ಈ ಹಿಂದೆಯೂ ಕೂಡ ದರ್ಶನ್ ಸ್ನೇಹಿತತೊಂದಿಗೆ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ಮಾಡಿದ್ದು ಸದ್ಯ ಈಗ ದರ್ಶನ್​ ಅವರಿಗೆ ಹುಲಿ ದರ್ಶನ ನೀಡಿದೆ. ಹುಲಿಯ ಪೋಟೋವನ್ನು ದರ್ಶನ್​ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ದರ್ಶನ್​ ಛಾಯಾಗ್ರಹಣ ಮಾಡುತ್ತಿರುವ ವಿಡಿಯೋವನ್ನು ಅವರ ಸ್ನೇಹಿತರು ಮಾಡಿದ್ದು ಈಗ ಅದು ವೈರಲ್​ ಆಗುತ್ತಿದೆ.

ಆದರೆ ಮಾತ್ರ ದರ್ಶನ್​ ಅವರ ಈ ವಿಡಿಯೋ ಯಾವಾಗ ತೆಗೆಯಲಾಗಿದ್ದು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಹೌದು ಸದ್ಯಕ್ಕೆ ಆಪ್ತ ಮೂಲಗಳ ಪ್ರಕಾರ ಕಳೆದ ವಾರ ದರ್ಶನ್​ ಕಬಿನಿ ಹೋಗಿದ್ದರು ಎನ್ನಲಾಗಿದ್ದು ಈ ವೇಳೆ ಅಭಿಮಾನಿಗಳು ದರ್ಶನ್​ ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇನ್ನು ಈ ಹಿಂದೆ ದರ್ಶನ್ ಸೆರೆ ಹಿಡಿದಿರುವ ಒಂದಷ್ಟು ಫೋಟೋಗಳನ್ನು ಸ್ಯಾಂಡಲ್​ವುಡ್ ನಟರು ಉತ್ತಮ ಬೆಲೆಗೆ ಖರೀದಿಸಿದ್ದು ಅಲ್ಲದೆ ಸಂದೇಶ್ ಪ್ರಿನ್ಸ್​ ಹೊಟೇಲ್​ನಲ್ಲಿ ದರ್ಶನ್ ಅವರ ತೆಗೆದ ಫೋಟೋಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಹೌದು ಈ ಪ್ರದರ್ಶನ- ಮಾರಾಟದಿಂದ ಬಂದ ಹಣವನ್ನು ಪ್ರಾಣಿಗಳ ಸಂರಕ್ಷಣೆಗೆ ಮೀಸಲಿಡಲಾಗಿತ್ತು. ಮೈಸೂರಿನ ಮೃಗಾಲಯದಲ್ಲಿರುವ ವನ್ಯ ಜೀವಿಗಳನ್ನೂ ದರ್ಶನ್​ ದತ್ತು ಪಡೆದು ಸಾಕುತ್ತಿದ್ದು ದರ್ಶನ್​ ಅವರಿಗೆ ಕುದುರೆ ಎಂದರೆ ವಿಶೇಷ ಪ್ರೀತಿ.

ಅವರ ಬಳಿ ಈಗಾಗಲೇ ಸಾಕಷ್ಟು ಕುದುರೆಗಳಿದ್ದು ಸಾರಥಿ ಸಿನಿಮಾದಲ್ಲೂ ಅವರು ತಾವೇ ಸಾಕಿದ್ದ ಕುದುರೆಯನ್ನು ಬಳಸಿಕೊಂಡಿದ್ದಾರೆ. ಇಂತಹ ದರ್ಶನ್​ ಅವರ ತೋಟಕ್ಕೆ ಲಾಕ್​ಡೌನ್​ ಸಡಿಲಗೊಂಡಾಗ ಹೊಸ ಕುದುರೆಯೊಂದು ಎಂಟ್ರಿ ಕೊಟ್ಟಿತ್ತು. ಬಿಳಿ ಬಣ್ಣದ ಕುದುರೆ ಇದಾಗಿದ್ದು, ಇದಕ್ಕೆ ಈಗಾಗಲೇ ನಾಮಕರಣ ಸಹ ಮಾಡಲಾಗಿದೆ. ದರ್ಶನ್​ ಅವರಿಗೆ ಕೇವಲ ಕುದುರೆ ಮಾತ್ರವಲ್ಲ ನಾಯಿ ಆನೆ ಸೇರಿದಂತೆ ಪಕ್ಷಿಗಳೆಂದರೆ ತುಂಬಾ ಪ್ರೀತಿ. ಕಾನೂನಿನಲ್ಲಿ ಅವಕಾಶವಿರುವ ಪ್ರಾಣಿ-ಪಕ್ಷಿಗಳನ್ನು ದಚ್ಚು ಸಾಕುತ್ತಿದ್ದು ಅಲ್ಲದೆ ಅರಣ್ಯ ಹಾಗೂ ಪರಿಸರದ ಉಳಿವಿಗಾಗಿ ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ.