ಇಂಟರ್ನೆಟ್ನಲ್ಲಿ ಒಮ್ಮೆ ಕಣ್ಣಾಡಿಸಿದರೆ ಸಾಕು ಖುಷಿ ಕೊಡುವ, ಭಾವುಕರನ್ನಾಗಿ ಮಾಡುವ ಸಾಕಷ್ಟು ವಿಡಿಯೋಗಳು ಕಾಣಸಿಗುತ್ತವೆ. ಮದುವೆ ಮನೆಗಳಲ್ಲಿ ನಡೆಯುವ ಫನ್ನಿ ಸನ್ನಿವೇಶಗಳ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಮಾಲೆ ಹಾಕುವುದು, ತಾಳಿ ಕಟ್ಟುವುದು, ಪೂಜಾರಿ ಮಂತ್ರ ಹೇಳುವುದು, ವಧು-ವರರಿಗೆ ಸಂಬಂಧಿಕರು ಮಾಡುವ ಕಿಟಲೆ ಹೀಗೆ ಚಿತ್ರ-ವಿಚಿತ್ರ ಹಾಸ್ಯ ಪ್ರಸಂಗಗಳು ಮದುವೆ ಮನೆಯಲ್ಲಿ ನಡೆಯುತ್ತಲೇ ಇರುತ್ತವೆ.
ವಧು-ವರರ ಡ್ಯಾನ್ಸ್ ಇಲ್ಲದೆ ಯಾವುದೇ ಮದುವೆ ಪೂರ್ಣಗೊಳ್ಳುವುದೇ ಇಲ್ಲ. ಮದುವೆಯಾದ ಹೊಸ ಹುರುಪಿನಲ್ಲಿ ನೂತನ ದಂಪತಿ ಕುಣಿದು ಕುಪ್ಪಳಿಸುತ್ತಾರೆ. ಸಂಬಂಧಿಗಳು ಕೂಡ ಮನಬಂದಂತೆ ಡ್ಯಾನ್ಸ್ ಮಾಡಿ ಗಮನ ಸೆಳೆಯುತ್ತಾರೆ.
ಸಣ್ಣಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ಸಖತ್ ಆಗಿ ಡ್ಯಾನ್ಸ್ ಮಾಡುತ್ತಾರೆ. ಸಾಮಾನ್ಯವಾಗಿ ಮದುವೆಗಳಲ್ಲಿ ಮದುಮಗ ಫುಲ್ ಜೋಶ್ನಲ್ಲಿ ಇರುತ್ತಾನೆ. ಮದುವೆಯಾದ ಖುಷಿಗೆ ತನ್ನ ಸ್ನೇಹಿತರ ಜೊತೆಗೆ ಒಂದೆರಡು ಸ್ಟೇಪ್ಸ್ ಹಾಕುತ್ತಾನೆ.
ಪತಿಯ ಡ್ಯಾನ್ಸ್ ಕಂಡು ಪತ್ನಿ ನಾಚಿ ನೀರಾಗಿರುತ್ತಾಳೆ. ಆದರೆ ಈ ಮದುವೆಯಲ್ಲಿ ಮಾತ್ರ ಮದುಮಗಳೇ ಫುಲ್ ಜೋಶ್ನಲ್ಲಿದ್ದಳು. ಸದ್ಯ ಈ ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ.