ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮುಖ ಮುಚ್ಚಿಕೊಂಡು ಓಡಾಡುತ್ತಿರುವ ರಶ್ಮಿಕಾ…ನೋಡಿ ವಿಡಿಯೋ

2,972

ನಟಿ ರಶ್ಮಿಕಾ ಮಂದಣ್ಣ ರವರು ದೇಶಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದು ಪುಷ್ಪ’ಸಿನಿಮಾ ಗೆದ್ದ ಬಳಿಕ ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಶೈನ್​ ಆಗುತ್ತಿದ್ದಾರೆ. ಹೌದು ಅವರ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಎಲ್ಲ ಭಾಷೆಯಲ್ಲೂ ರಶ್ಮಿಕಾ ಮಂದಣ್ಣ ಅವರನ್ನು ಇಷ್ಟಪಡುವ ಜನರಿದ್ದಾರೆ.

ಹೌದು ಅವರ ಜೊತೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದು ಲಕ್ಷಾಂತರ ಮಂದಿ ಹಂಬಲಿಸುತ್ತಿದ್ದು ಆಟೋಗ್ರಾಫ್​ ಪಡೆಯಲು ಎಲ್ಲಿಲ್ಲದ ಸಾಹಸ ಮಾಡುತ್ತಾರೆ. ಇನ್ನು ತುಂಬ ಲಕ್ಕಿ ಎಂಬಂತಹ ಅಭಿಮಾನಿಗಳಿಗೆ ಮಾತ್ರ ಅದೆಲ್ಲವೂ ಸಿಗುತ್ತದೆ. ಹೌದು ಅದಕ್ಕಿಂತಲೂ ಹೆಚ್ಚು ಅದೃಷ್ಟವಂತರಾಗಿದ್ದರೆ ಎದೆ ಮೇಲೆ ಆಟೋಗ್ರಾಫ್​ ಸಿಗುತ್ತದೆ ಎಂಬುದಕ್ಕೆ ಹೊಸ ಘಟನೆ ಸಾಕ್ಷಿಯಾಗಿತ್ತು.

ಹೌದು ಈಗಾಗಲೇ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ರಶ್ಮಿಕಾ ಮಂದಣ್ಣ ರವರ ಚಾರ್ಮ್​ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಅವರು ಗುಡ್​ಬೈ ಚಿತ್ರದಲ್ಲಿ ಬ್ಯೂಸಿಯಾಗಿದ್ದು ಹಲವು ದಿನಗಳಿಂದ ಪ್ರಚಾರದಲ್ಲಿದ್ದರು. ಕಳೆದ ತಿಂಗಳು ಅಕ್ಟೋಬರ್​ 7ರಂದು ಆ ಚಿತ್ರ ಬಿಡುಗಡೆ ಆಗಿದ್ದು ಹಲವು ನಗರಗಳಿಗೆ ತೆರಳಿ ಅವರು ಪ್ರಚಾರ ಮಾಡಿದ್ದರು. ಈ ವೇಳೆ ಅಪ್ಪಟ ಅಭಿಮಾನಿಗಳು ಮುಗಿ ಬಿದ್ದಿದ್ದು ಈ ವೇಳೆ ಎದುರಾದ ಅಭಿಮಾನಿಯೊಬ್ಬ ಆಟೋಗ್ರಾಫ್​ ಮತ್ತು ಫೋಟೋ ಸಲುವಾಗಿ ಗೋಗರೆದಿದ್ದ.

ಹೌದು ಓಡೋಡಿ ಬಂದ ಅಭಿಮಾನಿಯು ನಾನು ನಿಮ್ಮ ದೊಡ್ಡ ಫ್ಯಾನ್​ ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದು ತದನಂತರ ಫೋಟೋ ಬೇಕು ಅಂತ ಅದನ್ನೂ ಗಿಟ್ಟಿಸಿಕೊಂಡ. ಬಳಿಕ ನನ್ನ ಎದೆ ಮೇಲೆ ಆಟೋಗ್ರಾಫ್​ ಹಾಕಿ ಎಂದು ಮನವಿ ಮಾಡಿಕೊಂಡಿದ್ದು ಅದಕ್ಕೆ ರಶ್ಮಿಕಾ ಮಂದಣ್ಣ ಹಿಂದೆ-ಮುಂದೆ ಯೋಚಿಸಲಿಲ್ಲ. ಕೂಡಲೇ ಮಾರ್ಕರ್​ ಕೈಗೆತ್ತಿಕೊಂಡು ಅಭಿಮಾನಿಯ ಎದೆ ಮೇಲೆ ಹಸ್ತಾಕ್ಷರ ಹಾಕಿಯೇ ಬಿಟ್ಟಿದ್ದು ಈ ಕ್ಯೂಟ್​ ಘಟನೆ ಪಾಪರಾಜಿ ಕ್ಯಾಮೆರಾಗಳಲ್ಲಿ ಸೆರೆಯಾಗತ್ತು. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋ ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದರು.

ಇನ್ನು ರಶ್ಮಿಕಾ ಮಂದಣ್ಣ ಕೈಯಲ್ಲಿ ಈಗ ಹಲವು ಸಿನಿಮಾಗಳಿದ್ದು ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ಮಿಷನ್​ ಮಜ್ನು ಚಿತ್ರದಲ್ಲಿ ಅವರು ನಟಿಸಿದ್ದಾರೆ. ರಣಬೀರ್​ ಕಪೂರ್​ ನಟನೆಯ ಅನಿಮಲ್​ ಚಿತ್ರಕ್ಕೂ ರಶ್ಮಿಕಾ ನಾಯಕಿಯಾಗಿದ್ದು ದಕ್ಷಿಣ ಭಾರತದ ಸ್ಟಾರ್​ ಹೀರೋಗಳ ಸಿನಿಮಾಗಳು ಕೂಡ ಅವರನ್ನೇ ಹುಡುಕಿಕೊಂಡು ಬರುತ್ತಿವೆ.

ಸಿನಿಮಾ ಮಾತ್ರವಲ್ಲದೇ ಜಾಹೀರಾತು ಕ್ಷೇತ್ರದಲ್ಲೂ ರಶ್ಮಿಕಾ ಮಂದಣ್ಣ ಅವರಿಗೆ ಸಖತ್​ ಡಿಮ್ಯಾಂಡ್​ ಇದ್ದು ಹಲವಾರು ಬ್ರ್ಯಾಂಡ್​ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಜಾಹೀರಾತುಗಳಲ್ಲಿ ನಟಿಸುವ ಮೂಲಕ ಅವರು ಕೈ ತುಂಬ ಸಂಬಳ ಪಡೆಯುತ್ತಾರೆ.ಸದ್ಯ ಇದೀಗ ರಶ್ಮಿಕಾ ಮುಂಬೈ ಏರ್ಪೋರ್ಟ್ ನಲ್ಲಿ ಕಂಡು ಬಂದಿದ್ದು ಅಭಿಮಾನಿಗಳು ಹೇಗೆ ಮುಗಿ ಬಿದ್ದಿದ್ದಾರೆ ನೀವೆ ನೋಡಿ.