ನಮ್ಮ ಚಂದನವನದಲ್ಲಿ ಅನೇಕ ನಟ ನಟಿಯರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಕನ್ನಡ ಸಿನಿರಸಿಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಂತೆಯೇ ಸಾಲುಸಾಲು ಸ್ಟಾರ್ ನಟರ ಜೊತೆ ಅಭಿನಯಿಸಿ ತಮ್ಮ ಅಭಿನಯದ ಮೂಲಕ ಖ್ಯಾತಿ ಪಡೆದ ಈ ನಟಿ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ಹೀರೋಯಿನ್ ಆಗಿ ಮೆರೆದಿದ್ದರು. ಆ ನಟಿ ಬೇರೆ ಯಾರೂ ಅಲ್ಲ ರಾಧಿಕಾ ಕುಮಾರಸ್ವಾಮಿಯವರು .
ಹೌದು ಸದ್ಯ ಇದೀಗ ಅಭಿಮಾನಿಗಳ ಪ್ರೀತಿಯ ಸ್ವೀಟಿ ಅಗಿರುವ ರಾಧಿಕಾ ನವೆಂಬರ್ 12 1986 ರಂದು ದೇವರಾಜ್ ಹಾಗೂ ಸುರೇಖಾ ದಂಪತಿಗಳಿಗೆ ಮಂಗಳೂರಿನಲ್ಲಿ ಜನಿಸಿದ್ದು ಬಾಲ್ಯದಿಂದಲೂ ಸಹ ಅಭಿನಯ ಹಾಗೂ ನೃತ್ಯದ ಮೇಲೆ ಅಪಾರ ಆಸಕ್ತಿಯನ್ನು ಹೊಂದಿರುತ್ತಾರೆ.
ಇದೇ ಕಾರಣದಿಂದಾಗಿಯೇ ಡ್ಯಾನ್ಸ್ ತರಬೇತಿಗೂ ಸಹ ಸೇರಿಕೊಂಡ ರಾಧಿಕಾ ರವರು ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಸಮಯದಲ್ಲಿ ನೀಲ ಮೇಘ ಶ್ಯಾಮ ಎಂಬ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ತದ ನಂತರ ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ಎಂದೇ ಖ್ಯಾತಿ ಪಡೆದಿದ್ದು ವಿಜಯ್ ರಾಘವೇಂದ್ರ ರವರ ನಟನೆಯ ನಿನಗಾಗಿ ಎಂಬ ಸಿನಿಮಾದಲ್ಲಿ ಪರಿಪೂರ್ಣ ನಾಯಕಿಯಾಗಿ ಕಾಣಿಸಿಕೊಳ್ಳುವ ರಾಧಿಕಾ ಚಿತ್ರರಂಗದಲ್ಲಿ ಅಪಾರ ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳುತ್ತಾರೆ.
ಹೌದು ಇನ್ನು ಈ ಸಿನಿಮಾದ ಬಳಿಕ ಹುಡುಗಿಗಾಗಿ ಮಣಿ ಮನೆ ಮಗಳು ಹಾಗೂ ತಾಯಿ ಇಲ್ಲದ ತಬ್ಬಲಿ ಎಂಬ ಸಿನಿಮಾದಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದು ನೋಡು ನೋಡುತ್ತಲೇ ಬಹುಬೇಡಿಕೆಯ ನಟಿಯಾಗಿ ಬಿಡುತ್ತಾರೆ. ಇದೀಗ ಅವರ ದೀಪಾವಳಿ ಹಬ್ಬದ ವಿಡಿಯೋ ನೋಡಿ.