ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಾಧಿಕಾ ಪಂಡಿತ್ ಮಗಳು ಮನೆಯಲ್ಲಿ ಎಷ್ಟು ಭಾಷೆ ಮಾತಾಡುತ್ತಾಳೆ ಗೊತ್ತಾ..ಚಿಂದಿ

1,028

ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸಿನಿಮಾ ಕರೆಯರ್‌ಗೆ ಫುಲ್‌ ಸ್ಟಾಪ್‌ ಇಟ್ಟು ಹಲವು ವರ್ಷಗಳೇ ಕಳೆದು ಹೋಗಿದೆ. ಈಗೇನಿದ್ದರೂ ಮಕ್ಕಳ ಲಾಲನೆ ಪಾಲನೆಯಲ್ಲಿಯೇ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಸಿನಿಮಾದಿಂದ ದೂರ ಇದ್ದರೂ ಸಹ ರಾಧಿಕಾ ಪಂಡಿತ್‌ಗೆ ಈಗಲೂ ದೊಡ್ಡ ಫ್ಯಾನ್ಸ್ ಫಾಲೋವಿಂಗ್ ಇದೆ.

2016 ರಲ್ಲಿ ರಾಧಿಕಾ ಪಂಡಿತ್ ನಟ ಯಶ್ ಜೊತೆ ಮದುವೆಯಾದರು. ಆದಾದ ಬಳಿಕ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ನಂತರ 2019 ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಸಿನಿಮಾದಲ್ಲಿ ನಟಿಸಿದರು. ಆದಾದ ಬಳಿಕ ಸಂಪೂರ್ಣವಾಗಿ ನಟನೆಗೆ ಫುಲ್ ಸ್ಟಾಪ್ ಇಟ್ಟು ಮಕ್ಕಳ ಪೋಷಣೆಯಲ್ಲಿಯೇ ಬ್ಯುಸಿಯಾದರು. ರಾಧಿಕಾ ಪಂಡಿತ್ ಈಗಲಾದರೂ ಮತ್ತೆ ಸಿನಿ ಪ್ರಪಂಚಕ್ಕೆ ವಾಪಾಸ್‌ ಆಗಲಿ ಎಂಬುದು ಅಭಿಮಾನಿಗಳ ಆಶಯ.

ರಾಧಿಕಾ ಪಂಡಿತ್ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಷಿವ್ ಆಗಿ ಇರ್ತಾರೆ. ಆಗಾಗ ತಮ್ಮ ಮಕ್ಕಳ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅಭಿಮಾನಿಗಳು ಕೂಡ ರಾಧಿಕಾ ಪಂಡಿತ್ ಪೋಟೊಗಳಿಗೆ ಹೆಚ್ಚು ಲೈಕ್ಸ್, ಕಮೆಂಟ್ಸ್ ಮಾಡುತ್ತಲೇ ಇರುತ್ತಾರೆ.ಯಶ್ ಮತ್ತು ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಸ್ಟಾರ್ ಸೆಲೆಬ್ರೆಟಿಗಳು. ಇ

ನ್ನು ಇವರ ಮಕ್ಕಳು ಕೂಡ ಸ್ಟಾರ್‌ ಕಿಡ್‌ಗಳಾಗಿದ್ದು, ಐರಾ ಹಾಗೂ ಯಥರ್ವ್‌ಗೆ ಈಗಿನಿಂದಲೇ ಫ್ಯಾನ್ಸ್ ಫಾಲೋವಿಂಗ್ ಇದೆ. ಅವರ ಒಂದು ಪೋಟೊ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರೂ ನಿಮಿಷಗಳಲ್ಲೇ ಆ ಪೋಟೊ ವೈರಲ್ ಆಗಿ ಬಿಡುತ್ತವೆ. ರಾಧಿಕಾ ಹಾಗೂ ಯಶ್‌ ದಂಪತಿಗೆ ಮಕ್ಕಳ ಮೇಲೆ ಎಲ್ಲಿಲ್ಲದ ಪ್ರೀತಿ ಹೀಗಾಗಿ ಸಮಯ ಸಿಕ್ಕಾಗಲೆಲ್ಲಾ ಮಕ್ಕಳ ಜೊತೆ ಸಮಯ ಕಳೆಯೋಕೆ ಇಷ್ಟ ಪಡುತ್ತಾರೆ. ಅಲ್ಲದೆ ಮಕ್ಕಳ ಕೀಟಲೆ ಪೋಟೊಗಳನ್ನು ರಾಧಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ರಾಕಿಂಗ್ ಸ್ಟಾರ್ ಯಶ್ ಸಮಯ ಸಿಕ್ಕಾಗಲೆಲ್ಲಾ ತಮ್ಮ ಮುದ್ದಾದ ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆ ಆಟವಾಡುತ್ತಾ ಕಾಲ ಕಳೆಯುತ್ತಾರೆ. ಇತ್ತೀಚೆಗಷ್ಟೇ ಮಗಳು ಮತ್ತು ಮಗನ ಜೊತೆ ಸಮಯ ಕಳೆಯುತ್ತಿದ್ದ ವಿಡಿಯೋವೊಂದನ್ನು ಯಶ್ ಶೇರ್ ಮಾಡಿಕೊಂಡಿದ್ದರು. ವಿಡಿಯೋದಲ್ಲಿ ಯಥರ್ವ್ ಅಪ್ಪನಿಗೆ ಐ ಲವ್ ಯೂ ಹೇಳಿ ನಾನು ಡೈನೋಸಾರ್ ಎಂದು ಕಿರುಚಿದ್ದ, ಇದಕ್ಕೆ ಯಶ್ ಕೂಡ ನಾನು ಹುಲಿಯಾಗುವುದನ್ನು ನೋಡು ಎಂದು ಹೇಳಿ ಹುಲಿಯ ಘರ್ಜನೆ ಮಾಡಿದಾಗ ಯಥರ್ವ್ ಅಲ್ಲಿಂದ ಓಡಿ ಹೋಗಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ರಾಧಿಕಾ ಪಂಡಿತ್ ಮಗಳು ತನ್ನ ತಂದೆ-ತಾಯಿಯ ಫೋಟೋ ಗುರುತಿಸುವ ಫನ್ನಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಕ್ಯೂಟ್ ವಿಡಿಯೋ ನೋಡಿ ಇಷ್ಟಪಟ್ಟ ಜನ ಒಂದು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಅದೇನೆಂದರೆ ವಿಡಿಯೋದಲ್ಲಿ ರಾಧಿಕಾ ತಮ್ಮ ಮಗಳಿಗೆ ಕೊಂಕಣಿ ಭಾಷೆಯಲ್ಲಿ ಮಾತನಾಡಿಸುತ್ತಿದ್ದರು. ಕೊಂಕಣಿ ರಾಧಿಕಾ ಮಾತೃಭಾಷೆ.

ಆದರೆ ಅಭಿಮಾನಿಗಳಿಗೆ ಯಾಕೋ ಇದು ಇಷ್ಟವಾಗಿಲ್ಲ. ಹೀಗಾಗಿ ಮಗುವಿಗೆ ಕನ್ನಡ ಕಲಿಸಿ ಎಂದು ಹಲವು ಕಾಮೆಂಟ್ ಮಾಡಿದ್ದರು. ಕಾಮೆಂಟ್ ಗಳಿಗೆ ರಾಧಿಕಾ ಸ್ಪಷ್ಟನೆ ನೀಡಿದ್ದು, ‘ನಮ್ಮ ಮಗಳಿಗೆ ನಾವು ಯಾವ ಭಾಷೆ ಕಲಿಸುತ್ತಿದ್ದೇವೆ ಎಂಬ ಬಗ್ಗೆ ಇರುವ ಗೊಂದಲಗಳಿಗೆ ಇಲ್ಲಿ ಸ್ಪಷ್ಟನೆ ಕೊಡುತ್ತಿದ್ದೇನೆ. ಐರಾ ಅವಳ ಅಮ್ಮನ ಮಾತೃಭಾಷೆ ಕೊಂಕಣಿ ಮತ್ತು ಅಪ್ಪನ ಮಾತೃಭಾಷೆ ಕನ್ನಡ ಮಾತನಾಡಿದರೂ ಚೆನ್ನಾಗಿ ಪ್ರತಿಕ್ರಿಯಿಸುತ್ತಾಳೆಎಂದಿದ್ದಾರೆ. ಈ ಮೂಲಕ ಎರಡೂ ಭಾಷೆಯನ್ನು ಆಕೆಗೆ ಕಲಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.