ವಾರ್ತಾ ಮಂಜರಿ
Trending Stories, Viral News, Gossips & Everything in Kannada

Ashwini Puneeth: ದೊಡ್ಡವಳಾದ ಮೇಲೆ ಏನಾಗಲಿದ್ದೇನೆ ಎಂದು ಉತ್ತರ ಕೊಟ್ಟ ಅಪ್ಪು ಮಗಳು…ಕಣ್ಣೀರಿಟ್ಟ ಅಶ್ವಿನಿ

3,954

Ashwini Puneeth interview: ಕನ್ನಡ ಚಿತ್ರರಂಗದ ಮೇರು ನಟ ರಾಜ್‌ಕುಮಾರ್ ಕುಟುಂಬ ಅಂದ್ರೆ ಸಾಮಾನ್ಯಾನ, ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಅಂದ್ರೆ ದೊಡ್ಮನೆನ್ನೆ. ಪ್ರೀತಿ ಒಳ್ಳೆಯತನ್ನ ಇವರನ್ನ ನೋಡಿ ಕಲಿಯಬೇಕು.ಒಳ್ಳೆಯ ಸಭ್ಯತೆ, ಒಳ್ಳೆಯ ಮನೋಭಾವ, ಸರಳತೆ, ಇದಕ್ಕೆ ದೊಡ್ಡ ಹೆಸರೆ ಅಪ್ಪು, ಈಗ ಜಗತ್ತಿಗೆ ದೊಡ್ಡ ಮಾದರಿ ಆಗಿದ್ದಾರೆ.

ಇವರ ಮುದ್ದಾದ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಹೇಗಿದ್ದರೂ ಅಂತ ಈ ಪೋಟೋಗಳಲ್ಲಿ ನೋಡಬಹುದು. ಅಶ್ವಿನಿ ಮೇಡಂ ಅವರು ಕೂಡ ಮಕ್ಜಳು ಚಿಕ್ಕವರು ಆಗಿದ್ದಾಗ ಬಹಳಷ್ಟು ಸಂತೋಷ ಹಾಗು ಎಂಜಾಯ್ ಮಾಡಿದ್ದಾರೆ.. ಮಕ್ಕಳ ಲಾಲನೆ ಪಾಲನೆಯಲ್ಲಿ ಮಾಡುವಲ್ಲಿ ಅಪ್ಪು ಕೂಡ ಬ್ಯುಸಿಯಾಗಿರುತ್ತಿದ್ದರು.

ಅಪ್ಪು ಎಂತಹ ಫ್ಯಾಮಿಲಿ ಮ್ಯಾನ್ ಎನ್ನುವುದು ನಮಗೆ ಗೊತ್ತಿದೆ ಎಷ್ಟೇ ಬ್ಯುಸಿ ಇದ್ದರು, ಏನೇ ಕೆಲಸ ಇದ್ದರು ಅಪ್ಪು ಅವರು ಫ್ಯಾಮಿಲಿಗಾಗಿ ಸಮಯ ಕೊಡುವುದನ್ನು ಕಡಿಮೆ ಮಾಡುತ್ತಿರಲಿಲ್ಲ.ಎಲ್ಲರಿಗು ಅಪ್ಪು ಅವರು ಹೇಳುತ್ತಿದ್ದಿದ್ದು ಒಂದೇ ಮಾತು. ಮೊದಲು ನಿಮ್ಮ ಫ್ಯಾಮಿಲಿನ ಪ್ರೀತಿಸಿ, ನಂತರ ನನ್ನನ್ನ ಪ್ರೀತಿಸಿ ಅಂತ. ಅಪ್ಪು ಅವರು ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾದರು.

ಚಂದನವದಲ್ಲಿ ಎಲ್ಲರ ನೆಚ್ಚಿನ ಜೋಡಿ ಎಂದರೆ ನಟ ದಿವಂಗತ ಪುನೀತ್ ರಾಜಕುಮಾರ್ ಮತ್ತು ಅವರ ಪತ್ನಿ ಅಶ್ವಿನಿ ಎನ್ನುವ ಮಟ್ಟಕ್ಕೆ ಅವರು ಪರಿಚಿತರಾಗಿದ್ದರು. ಪ್ರೀತಿ ಮದುವೆಯಾದ ಈ ಜೋಡಿಯನ್ನು ಆದರ್ಶ ದಂಪತಿಗಳು ಎಂದು ಕರೆಯಲಾಗುತ್ತಿತ್ತು.

Drithi Rajkumar Age, Family, Parents, Wiki, Biography, Net Worth -  Breezemasti

ಮಕ್ಕಳ ಜೊತೆ ಬಹಳಷ್ಟು ಸಮಯವನ್ನ ಕಳೆದಿದ್ದಾರೆ ಅಪ್ಪು ಹಾಗೇಯೇ ಎಂಜಾಯ್ ಮಾಡಿದ್ದಾರೆ.. ಅದೇರೀತಿ ಮಕ್ಕಳನ್ನ ಅಪ್ಪು ಅವರು ಬೆಳೆಸಿದ್ದಾರೆ.ಅಪ್ಪು ಅವರ ಗುಣಗಳು ಮಕ್ಕಳಿಗೂ ಕೂಡ ಬಂದಿರೋದು. ಸ್ವಾಭಿಮಾನ ನಿಷ್ಠೆ ಕೆಲಸದಲ್ಲಿ ಶ್ರದ್ಧೆ. ಈ ರೀತಿಯ ಉತ್ಸಾಹದಿಂದ ಅಪ್ಪು ಮಕ್ಕಳನ್ನ ಬೆಳೆಸಿದ್ದಾರೆ.ವಿದ್ಯಾಭ್ಯಾಸವನ್ನು ಕೂಡ ತುಂಬಾನೇ ಚೆನ್ನಾಗಿ ಮಾಡ್ತೀದ್ದಾರೆ.

ಅಪ್ಪ ಅಮ್ಮ ಹೇಳಿದ್ದ ಮಾತನ್ನ ಚಾಚೂ ತಪ್ಪದೆ ಕೇಳ್ತಾರೆ. ಅಪ್ಪು ಅವರ ಹಾಗೆಯೇ ಮಕ್ಕಳು ಕೂಡ ತುಂಬಾನೇ ಸರಳತೆ. ಸರಳ ವ್ಯಕ್ತಿತ್ವ ಬೇಕಾಬಿಟ್ಟಿ ಹಣವನ್ನ ಖರ್ಚು ಮಾಡೋದಿಲ್ಲ.. ಈ ರೀತಿ ಅಪ್ಪು ಮಕ್ಕಳು ತುಂಬಾ ಚೆನ್ನಾಗಿ ಬೆಳೆದಿದ್ದಾರೆ. ಅಪ್ಪು ಅವರ ಹೆಣ್ಣು ಮಕ್ಕಳು ಎಂದೂ ಕೂಡ ತಾವು ದೊಡ್ಡ ಸ್ಟಾರ್ ನಟನ ಮಕ್ಕಳು ಎಂದು ಬಿಂಬಿಸಿಕೊಂಡು ಬೀಗುವುದಿಲ್ಲ. ಇನ್ನೂ ದೊಡ್ಡ ಸ್ಟಾರ್ ನಟನ ಮಕ್ಕಳು ಎಂಬುವ ಮನೋಭಾವ ಇಲ್ಲದೇ ಅಪ್ಪು ತನ್ನ ಮಕ್ಕಳನ್ನು ತುಂಬಾ ಸರಳವಾಗಿ ಹಾಗು ಶಿಸ್ತಿನಿಂದ ಬೆಳೆಸುತ್ತಿದ್ದಾರೆ.

ಅಪ್ಪು ಅವರ ಮಕ್ಕಳು ಸಾಮಾನ್ಯವಾಗಿ ಎಲ್ಲೂ ಕೂಡ ಸಾರ್ವಜನಿಕವಾಗಿ ಕಾಣಿಸಿಕೊಂಡ ಉದಾಹರಣೆಯೇ ಇಲ್ಲ. ಎಷ್ಟೇ ಶಿಸ್ತಿನಿಂದ ಮಕ್ಕಳನ್ನು ಅಪ್ಪು ಬೆಳೆಸುತ್ತಿದ್ದರು ಮನೆಯಲ್ಲಿ ತಮ್ಮ ಮಕ್ಕಳನ್ನು ಸ್ನೇಹಿತನ ರೀತಿಯಲ್ಲಿ ಖುಷಿ ಖುಷಿಯಿಂದ ಇರುತ್ತಾರೆ. ಮಕ್ಕಳು ಎಂದರೆ ಅಪ್ಪು ಅವರಿಗೆ ಎಲ್ಲಿಲ್ಲದ ಪ್ರೀತಿ, ಸಂತೋಷ ಹಾಗೆ ಅವರ ಜೊತೆ ಮಾತನಾಡುವ ವೇಳೆ ಅವರು ಮಕ್ಕಳಾಗಿ ಅವರ ಜೊತೆ ಆಟ ಆಡುತ್ತಿದ್ದವರು.

ದೊಡ್ಡವರಾಗಲಿ, ಸಣ್ಣವರಾಗಲಿ, ಚಿಕ್ಕ ಮಕ್ಕಳಾಗಲಿ ಎಲ್ಲರ ಜೊತೆ ಅಪ್ಪು ನಡೆದುಕೊಳ್ಳುತ್ತಿದ್ದ ರೀತಿ ಎಂದಿಗೂ ಮರೆಯಲಾಗದು. ಪುನೀತ್ ಅವರು ಇದೀಗ ನಮ್ಮ ಜೊತೆಗೆ ಇಲ್ಲವಲ್ಲ ಎಂದು ಒಂದು ಕ್ಷಣ ನೆನೆಸಿಕೊಂಡರೆ, ಈಗಲೂ ಕಣ್ಣೀರು ಜಾರುತಿದೆ. ಹೆಚ್ಚು ಜನರ ಜೊತೆ ನಂಟು ಇಟ್ಟುಕೊಂಡಿದ್ದ ನಟ ಪುನೀತ್ ಅವರ ಅಗಲಿಕೆಯನ್ನು ಯಾರು ಕೂಡ ಅರಗಿಸಿಕೊಳ್ಳಲು ಆಗಲಾರದು.

ಪುನೀತ್ ರಾಜ್ ಕುಮಾರ್ ಅವರು ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ ರೀತಿಯಲ್ಲಿ ಅವರ ಹಿರಿಯ ಮಗಳು ದೃತಿ ಕೂಡ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲಿ. ಕಳೆದ ವರ್ಷವಷ್ಟೇ ನೇತ್ರದಾನದ ವಿಚಾರವಾಗಿ ರೋಟರಿ ಕ್ಲಬ್ ಗೆ ಪುನೀತ್ ರಾಜ್ ಕುಮಾರ್ ಅವರ ಹಿರಿಯ ಮಗಳು ಧೃತಿ ಬೆಂಬಲ ನೀಡಿದ್ದಾರೆ.

ವಿದೇಶದಲ್ಲಿ ದೊಡ್ಡ ಮಗಳು ಧೃತಿ ಓದುತ್ತಿದ್ದರೂ ಕೂಡ ತನ್ನ ಸ್ವಂತ ಹಣದಿಂದ ವ್ಯಾಸಂಗ ಮಾಡುತ್ತಿದ್ದಾರೆ ಎಂದರೆ ನಿಮಗೂ ಆಶ್ಚರ್ಯವಾಗಬಹುದು. ವಿದೇಶದಲ್ಲಿ ಸ್ಕೋಲರ್ ಶಿಪ್ ಪಡೆಯುವುದು ತುಂಬಾ ದೊಡ್ಡ ವಿಷಯವಾಗಿದ್ದು ಅಲ್ಲಿ ಅವರು ಶಾಲಾ ಕಾಲೇಜುಗಳಲ್ಲಿ 85 ರಿಂದ 90 ಪರ್ಸೆಂಟ್ ಪಡೆದರೂ ಕೂಡ ಮತ್ತೊಂದು ಪರೀಕ್ಷೆಯನ್ನು ನಡೆಸಿ ಅದರಲ್ಲಿ 95% ಗಿಂತ ಅಧಿಕ ಇದ್ದಾರೆ ಮಾತ್ರ ಸ್ಕಲಾರ್ ಶಿಪ್ ಪಡೆದುಕೊಳ್ಳುತ್ತಾರೆ.

ಹೀಗೆ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಗಾಗಿ ಪರೀಕ್ಷೆ ಬರೆದರು ಅದರಲ್ಲಿ 500 ಮಾತ್ರ ಸ್ಕಾಲರ್ ಶಿಪ್ ಪಡೆದುಕೊಳ್ಳುವ ಯೋಗ ಇರುತ್ತದೆ. ಅಂತೆಯೇ ಧೃತಿ ಕೂಡ ತಾವು ಪಡೆದ ವಿದ್ಯಾಭ್ಯಾಸದ ಅಂಕಗಳ ಮೂಲಕ ತಮ್ಮ ಜ್ಞಾನದ ಮೂಲಕ ಸ್ಕಾಲರ್ ಶಿಪ್ ಪಡೆದು ಓದುತ್ತಿದ್ದು ಇದು ಹೆಮ್ಮೆಯ ವಿಷಯವೇ ಸರಿ.ಅಪ್ಪು ಅವರು ತಮ್ಮ ಮಕ್ಕಳಿಗೆ ಶಿಸ್ತು ಸಂಯಮ ಕಲಿಸಿರುವುದಲ್ಲದೆ ಅಷ್ಟೇ ಪ್ರೀತಿ ವಿಶ್ವಾಸಗಳನ್ನು ನೀಡಿ ಬೆಳೆಸಿದ್ದಾರೆ

ತಮ್ಮ ಕುಟುಂಬ ಹಾಗೂ ಸಮಾಜ ಎರಡನ್ನೂ ಸಹ ಒಂದೇ ಭಾವನೆ ಪ್ರೀತಿಯಿಂದ ನೋಡುತ್ತಿದ್ದ ಅಪ್ಪು ಅವರು ಇಂದು ಎಲ್ಲರ ಮನ ಮನೆಗಳಲ್ಲಿ ಪ್ರೀತಿಯ ಅಪ್ಪುವಾಗಿ ರಾರಾಜಿಸಿ ಅಮರತ್ವ ಪಡೆದಿದ್ದಾರೆ. ಇಷ್ಟೆಲ್ಲ ಶ್ರೀಮಂತರಾದರೂ ತಮ್ಮ ಸ್ವ ಪ್ರತಿಭೆಯಿಂದ ವಿದ್ಯಾಭ್ಯಾಸ ಮುಂದುವರಿಸುವ ಧೃತಿ ನಿಜಕ್ಕೂ ಅಪ್ಪನ ಕೀರ್ತಿ ಉಳಿಸಿದ್ದಾರೆ.