ದಿನನಿತ್ಯದ ಅಡುಗೆಯಲ್ಲಿ ಕೊತ್ತಂಬರಿಯನ್ನು ಪುಡಿ, ಸೊಪ್ಪು ಹಾಗೂ ಬೀಜದ ರೂಪದಲ್ಲಿ ಬಳಸುತ್ತೇವೆ. ಅದರಲ್ಲೂ ಈ ಕೊತ್ತಂಬರಿ ಸೊಪ್ಪು ಅಡುಗೆಯ ರುಚಿಯ ಜೊತೆಗೆ ಘಮವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ, ಖಾದ್ಯದ ಅಲಂಕಾರಕ್ಕಾಗಿಯೂ ಈ ಕೊತ್ತಂಬರಿ ಸೊಪ್ಪನ್ನು ಬಳಸುತ್ತೇವೆ. ಹಸಿರು ಬಣ್ಣದಿಂದ ಕೂಡಿರುವ ಈ ಸೊಪ್ಪು ಸುವಾಸನಭರಿತವಾಗಿರುತ್ತದೆ. ಈ ಕೊತ್ತಂಬರಿ ಸೊಪ್ಪು ಮೆಗ್ನೀಸಿಯಮ್, ವಿಟಮಿನ್ ಎ, ಬಿ, ಸಿ, ಕೆ, ರಂಜಕ, ಪೊಟ್ಯಾಸಿಯಮ್, ಸೋಡಿಯಂ ಮತ್ತು ಕ್ಯಾಲ್ಸಿಯಂ ಪ್ರಮಾಣವಿರುವುದರಿಂದ ಆರೋಗ್ಯದ ದೃಷ್ಟಿಯಿಂದ ಈ ಸೊಪ್ಪು ಬಹಳ ಒಳ್ಳೆಯದು. ಅಡುಗೆ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೇ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಸಾಕಷ್ಟು ರೋಗಗಳಿಗೆ ರಾಮಬಾಣವಾಗಿಕೆಲಸ ಮಾಡುತ್ತದೆ. ಈ ಕೊತ್ತಂಬರಿ ಸೊಪ್ಪಿನಲ್ಲಿ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಅರಿತು ಕೊಳ್ಳುವುದು ಒಳ್ಳೆಯದು.
- ಕೊತ್ತಂಬರಿ ಸೊಪ್ಪಿನ ರಸ ಒಂದು ಭಾಗ, ಎಳ್ಳೆಣ್ಣೆ ಅರ್ಧಭಾಗ, ರೋಸ್ವಾಟರ್ (ಪನ್ನೀರು) ಅರ್ಧ ಭಾಗ ಸೇರಿಸಿ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಸಣ್ಣಗಿನ ಉರಿಯಲ್ಲಿ ನೀರಿನಂಶ ಹೋಗುವವರೆಗೂ ಕಾಯಿಸಿ, ತಣ್ಣಗಾದ ಮೇಲೆ ಬಾಟಲಿಗೆ ಹಾಕಿಟ್ಟುಕೊಳ್ಳಬೇಕು. ಇದನ್ನು ಆಗಾಗ ತಲೆಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ತಲೆನೋವು ನಿವಾರಣೆಯಾಗುತ್ತದೆ.
- ಕೊತ್ತಂಬರಿ ಸೊಪ್ಪಿನ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ಉರಿಮೂತ್ರ ರೋಗ ಗುಣವಾಗುತ್ತದೆ.
- ಕೊತ್ತಂಬರಿ ಸೊಪ್ಪನ್ನು ಹಲ್ಲುಗಳಿಂದ ಜಗಿಯುವುದರಿಂದ ದಂತಕ್ಷಯ ನಿವಾರಣೆಯಾಗುತ್ತದೆ.
- ಕೊತ್ತಂಬರಿ ಸೊಪ್ಪಿನ ರಸವನ್ನು ಬೆರೆಸಿಕೊಂಡು ದಿನವೂ ಸೇವಿಸುತ್ತಿದ್ದರೆ ಕಣ್ಣು ಕಿವಿ, ಹೃದಯ ಮತ್ತು ಶ್ವಾಸಕೋಶಗಳ ಕ್ರಿಯೆ ಬಿರುಸಿನಿಂದ ನಡೆಯುತ್ತದೆ