ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಗೃಹಬಳಕೆ ಸಿಲಿಂಡರ್ ಮೇಲೆ ಹೊಸ ರೂಲ್ಸ್ ಜಾರಿಗೆ ತಂದ ಕೇಂದ್ರ ಸರ್ಕಾರ, ಅಕ್ರೋಶ ಹೊರಹಾಕಿದ ಗ್ರಾಹಕರು

265

ಕೇಂದ್ರ ಸರಕಾರ ಇತ್ತೀಚೆಗೆ ಪೆಟ್ರೋಲ್ ದರ ನಿಯಂತ್ರಣ ಮುಕ್ತಗೊಳಿಸಿ ಸಬ್ಸಿಡಿ ರಹಿತದಿಂದ ಕೈ ತೊಳೆದುಕೊಂಡಿತ್ತು. ಗಾಬರಿಯ ವಿಷಯವೆಂದರೆ ಇದೀಗ ಅಡುಗೆ ಅನಿಲದ ಬೆಲೆಯನ್ನೂ ತನ್ನ ನಿಯಂತ್ರಣದಿಂದ ಮುಕ್ತಗೊಳಿಸಲು ಸಜ್ಜಾಗಿದೆ. ತನ್ಮೂಲಕ ಅನಿಲ ಸಬ್ಸಿಡಿ ರಗಳೆಯೂ ತನಗೆ ಬೇಡ ಎಂಬುದು ಸರಕಾರದ ಚಿಂತನೆ. ಈ ಮಧ್ಯೆ ಗ್ರಾಹಕನ ಪರಿಸ್ಥಿತಿ ಆ ಭಗವಂತನಿಗೇ ಪ್ರೀತಿ. ಸರಕಾರದ ಹೊಸ ಆಲೋಚನೆಯಿಂದ ಸಾಮಾನ್ಯ ಗೃಹ ಬಳಕೆ ವೆಚ್ಚ ಜನರ ಪಾಲಿಗೆ ಈಗಿರುವ ಬೆಲೆಗಿಂತಲೂ ಅರ್ಧದಷ್ಟು ದುಬಾರಿಯಾಗಲಿದೆ. ಪ್ರಸ್ತುತ ಕೇಂಧ್ರ ಸರಕಾರ ಪ್ರತಿ ಸಿಲಿಂಡರ್ ಗೆ ಭಾರಿ ಸಬ್ಸಿಡಿ ನೀಡುತ್ತಿದೆ. ಗ್ಯಾಸ್ ಸಿಲಿಂಡರ್ ದರ ಮುಕ್ತ ಮಾರುಕಟ್ಟೆಯಲ್ಲಿ ೬೫೦-೭೦೦ ರುಪಾಯಿಯಿದೆ. ಸರಕಾದರ ಸಬ್ಸಿಡಿಯಿಂದ ಜನರಿಗೆ ಇದು ೩೫೦-೩೭೦ ರುಪಾಯಿ ದರದಲ್ಲಿ ಲಭ್ಯವಾಗುತ್ತಿದೆ. ಇದರಿಂದ ಬೊಕ್ಕಸಕ್ಕೆ ವಾರ್ಷಿಕ ೨೨ ಸಾವಿರ ಕೋಟಿ ರು. ಹೊರೆಯಾಗಿದೆ. ಈ ಹೊರೆಯಿಂದ ಹಗುರವಾಗಲು ಬಯಸಿರುವ ಸರಕಾರ ಸಬ್ಸಿಡಿ ವಾಪಸ್ ತೆಗೆದುಕೊಳ್ಳುವುದಿಲ್ಲ ವಾದರೂ ಸಬ್ಸಿಡಿ ದರದಲ್ಲಿ ಮನೆಗಳಿಗೆ ವಿತರಿಸುತ್ತಿರುವ ಸಿಲಿಂಡರ್ ಗಳ ಸಂಖ್ಯೆಯನ್ನು ಇಳಿಸಲು ಚಿಂತಿಸುತ್ತಿದೆ. ಇದೇ ಜನಸಾಮಾನ್ಯರ ಚಿಂತೆಯನ್ನು ಹೆಚ್ಚಿಸಿರುವುದು. ಇದುವರೆಗೆ ಪ್ರತಿ ಸಂಪರ್ಕಕ್ಕೆ ಎಷ್ಟು ಬೇಕಾದರೂ (ಸರಾಸರಿ ೮-೧೦) ಸಬ್ಸಿಡಿ ದರದ ಸಿಲಿಂಡರ್ ಗಳಿಗೆ ಜನ ಆರ್ಡರ್ ಮಾಡಬಹುದಿತ್ತು.

ತೈಲ ಕಂಪನಿಗಳು ಈಗ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿವೆ. ಸಬ್ಸಿಡಿ ರಹಿತ ಗೃಹ ಬಳಕೆ ಸಿಲಿಂಡರ್ ಗಳ ಖರೀದಿಗೆ ಮಿತಿ ಹೇರಲು ಮುಂದಾಗಿದ್ದು, ಈ ನಿಯಮ ಜಾರಿಗೆ ಬಂದರೆ ವಾರ್ಷಿಕ ಕೇವಲ 15 ಸಿಲಿಂಡರ್ ಗಳನ್ನಷ್ಟೇ ಇನ್ನು ಮುಂದೆ ಖರೀದಿಸಬೇಕಾಗುತ್ತದೆ. ಸಬ್ಸಿಡಿ ರಹಿತ ಗೃಹ ಬಳಕೆ ಸಿಲಿಂಡರ್ ಗಳು ದುರ್ಬಳಕೆಯಾಗುತ್ತಿವೆ ಎಂಬ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಈ ಕ್ರಮಕ್ಕೆ ಮುಂದಾಗಿದ್ದು, ತಿಂಗಳಿಗೆ ಗರಿಷ್ಠ ಎರಡು ಸಿಲಿಂಡರ್ ಹಾಗೂ ವಾರ್ಷಿಕ 15 ಸಿಲಿಂಡರ್ ಗಳನ್ನಷ್ಟೇ ಖರೀದಿಸಲು ಮಿತಿ ನಿಗದಿಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಈ ಮೊದಲು ಸಬ್ಸಿಡಿ ರಹಿತ ಎಷ್ಟು ಬೇಕಾದರೂ ಅಷ್ಟು ಗೃಹ ಬಳಕೆ ಸಿಲಿಂಡರ್ ಗಳನ್ನು ಗ್ರಾಹಕರು ಮಾರುಕಟ್ಟೆ ದರ ನೀಡಿ ಖರೀದಿಸಬಹುದಾಗಿತ್ತು. ಅಲ್ಲದೆ ಸಬ್ಸಿಡಿ ಸಿಲಿಂಡರ್ ಗಳನ್ನು ವರ್ಷಕ್ಕೆ 12 ಮಾತ್ರ ಖರೀದಿಸಬಹುದಾಗಿತ್ತು. ತೈಲ ಕಂಪನಿಗಳು ಈ ನಿಯಮ ಜಾರಿಗೆ ತರಲು ಮುಂದಾಗಿವೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಬ್ಸಿಡಿ ನೀಡುವುದನ್ನು ನಿಲ್ಲಿಸಲಾಗಿದ್ದು, ಪ್ರಸ್ತುತ ಮಾರುಕಟ್ಟೆ ದರದಲ್ಲಿಯೇ ನಾವುಗಳು ಗೃಹಬಳಕೆ ಸಿಲಿಂಡರ್ ಗಳನ್ನು ಖರೀದಿಸುತ್ತಿದ್ದೇವೆ. ಇದರ ಮೇಲೆ ಮಿತಿ ನಿಗದಿಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.