ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಶ್ವಿನಿ ಬರುತ್ತಿದ್ದಂತೆ ಕೈಮುಗಿದ ದರ್ಶನ್ ತಮ್ಮ…ಚಿಂದಿ ವಿಡಿಯೋ

1,719
Join WhatsApp
Google News
Join Telegram
Join Instagram

ಸದ್ಯ ಸಿಸಿಎಲ್(CCL) ಕ್ರಿಕೆಟ್ ಲೀಗ್ ನಂತರ ಇದೀಗ ದಕ್ಷಿಣ ಭಾರತದ ಸಿನಿಮಾ‌ (South Indian Cinima) ಉದ್ಯಮ ಮಾತ್ರವಲ್ಲದೇ ಅಂತಾರಾಷ್ಟ್ರೀಯ(International) ಮಟ್ಟದಲ್ಲಿ ಕೂಡ ಗಮನ ಸೆಳೆದ ಕ್ರಿಕೆಟ್ ಟೂರ್ನಿ (Cricket Tournement) ಅಂದರೆ ಅದು ಕೆಸಿಸಿ(KCC). ಹೌದು ಕರ್ನಾಟಕ ಚಲನಚಿತ್ರ ಕಪ್ ಹೆಸರಿನಲ್ಲಿ ಇಡೀ ಕನ್ನಡ ಚಿತ್ರರಂಗದ ( Kannada Filim Industry) ಕಲಾವಿದರೆಲ್ಲರೂ ಕೂಡ ಒಂದೆಡೆ ಸೇರಿ ಒಗ್ಗಟ್ಟು ಪ್ರದರ್ಶಿಸುವ ವೇದಿಕೆ ಇದಾಗಿದ್ದು ಈಗಾಗಲೇ ಕೆಸಿಸಿ ಸೀಸನ್‌ 2 ಯಶಸ್ವಿಯಾಗಿದ್ದು ನಟ ಸುದೀಪ್‌ (Sudeep) ನೇತೃತ್ವದಲ್ಲಿ ಇದೀಗ ಕೆಸಿಸಿ ಸೀಸನ್ 3 ಪ್ರಾರಂಭವಾಗಲು‌ ಮುಹೂರ್ತ ನಿಗದಿಯಾಗಿದೆ.

ಫೆಬ್ರವರಿ 24 ಹಾಗೂ 25ರಂದು ಬೆಂಗಳೂರಿನ‌(Banglore) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಪಂದ್ಯಾವಳಿ ನಡೆಯಲಿದ್ದು ಕಳೆದ ಗುರುವಾರವಷ್ಟೆ 6 ತಂಡಗಳ ಆಟಗಾರರ ಆಯ್ಕೆ ಪ್ರಕ್ರಿಯೆ ಇದೇ ಸ್ಟೇಡಿಯಂ(Stadium) ಹಾಲ್‌ನಲ್ಲಿ ನಡೆದಿದ್ದು ‌ಬಿಡ್ಡಿಂಗ್ ಪ್ರಕ್ರಿಯೆ ಐಪಿಎಲ್(IPL) ಬಿಡ್ಡಿಂಗ್ ರೀತಿಯೇ ಕಂಡುಬಂದಿದ್ದು ವಿಶೇಷ.

ಇನ್ನು ಶಿವರಾಜ್ ಕುಮಾರ್ (Shivarajkumar) ಕಿಚ್ಚ ಸುದೀಪ್(Kiccha Sudeep) ಗಣೇಶ್ (Ganesh) ಜಗ್ಗೇಶ್ (Jaggesh) ಧನಂಜಯ್ (Dhananjay) ಧ್ರುವ ಸರ್ಜಾ (Dhruva Sarja) ನಟಿಯರಾದ ರಮ್ಯಾ (Ramya) ಸುಧಾರಾಣಿ (Sudharani) ‌ಶ್ರುತಿ (Shruthi) ತಾರಾ ಅನುರಾಧ (Taara Anuradha) ಮಾಲಾಶ್ರೀ(Malashree) ಅನುಪ್ರಭಾಕರ್ (Anu Prabhakar) ನಿರ್ಮಾಪಕಿ‌ ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneethrajkumar) ಸಚಿವರಾದ ಅಶ್ವತ್ಥ್​ ನಾರಾಯಣ್ (Ashwath Narayan) ಮುನಿರತ್ನ(Munirathna) ಸುಧಾಕರ್ (Sudhakar) ಪೊಲೀಸ್ ಅಧಿಕಾರಿ ದೇವರಾಜ್ (Devraj) ಸೇರಿದಂತೆ ಕೆಲ ನಟರು ಹಾಗೂ ನಿರ್ದೇಶಕರು ತಂತ್ರಜ್ಞಾನರು ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಪರೂಪದ ಘಟನೆಯೊಂದು ನಡೆದಿದ್ದು ಅಶ್ವಿನಿ ಪುನೀತ್ ರಾಜ್ ಕುಮಾರ್ ರವನ್ನು ನೋಡಿ ದರ್ಶನ್ (Darshan) ಸಹೋದರ ದಿನಕರ್ (Dinakar) ರವರು ಎದ್ದು ನಿಂತು ಕೈಮುಗಿದಿದ್ದಾರೆ. ಈ ಅಪರೂಪದ ಘಟನೆಯನ್ನ ಲೇಖನಿಯ ಕೆಳಗಿನ ವಿಡಿಯೋ ದಲ್ಲಿ ನೋಡಬಹುದು.

ಕೆಸಿಸಿ ಸೀಸನ್ 3ರ‌ ಸ್ಪೆಷಲ್ ಸೆಲೆಬ್ರಿಟಿಯಾಗಿ ರವಿಚಂದ್ರನ್ ಮತ್ತು ರಮ್ಯಾ ರವರು ಆಯ್ಕೆಯಾಗಿದ್ದು ಕಳೆದ ವರ್ಷ ಚಾಂಪಿಯನ್ ಆಗಿದ್ದ ಗಣೇಶ್ ಕೆಸಿಸಿ ಕಪ್ ಅನ್ನು ರಮ್ಯಾ ಅವರ ಕೈಯಲ್ಲಿ ಅನಾವರಣ ಮಾಡಿಸಿದ್ದರು. ಹೌದು ಪ್ರತಿ ವರ್ಷದಂತೆ ಈ ವರ್ಷವೂ ಕೆಸಿಸಿಯಲ್ಲಿ ಒಟ್ಟು ಆರು ತಂಡಗಳಿದ್ದು ಈ ಆರು ತಂಡಗಳಿಗೆ ಮೆಂಟರ್ ಹಾಗೂ ಸ್ಟಾರ್ ಸೆಲೆಬ್ರಿಟಿ ಮತ್ತು ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಈ ವರ್ಷ ಸಹ 6 ಜನ ಇಂಟರ್ ನ್ಯಾಷನಲ್ ಕ್ರಿಕೆಟ್ ಆಟಗಾರರು ಒಂದೊಂದು ತಂಡದಲ್ಲಿ ಆಡಲಿದ್ದಾರೆ. ಸಿನಿಮಾ ಸ್ಟಾರ್​ಗಳೊಂದಿಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಪ್ಲೇಯರ್ಸ್ ಆಡುತ್ತಿರುವುದು ಕನ್ನಡ ಸಿನಿಮಾ‌ಪ್ರಿಯರು ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ಸಿಗಲಿದೆ. ಇನ್ನು ಆಟಗಾರರ ಬಿಡ್ಡಿಂಗ್ ಮಧ್ಯೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ನೆನಪಿಸಿಕೊಳ್ಳುವ ಕಾರ್ಯವಾಯಿತು. ಹಿಂದಿನ ಎರಡು ಕೆಸಿಸಿ ಸೀಸನ್​ನಲ್ಲಿ‌ ಪುನೀತ್ ರಾಜ್‍ಕುಮಾರ್ ಸ್ಟಾರ್ ಸೆಲೆಬ್ರಿಟಿಯಾಗಿದ್ದರು.