ಸದ್ಯ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಕ್ರಿಸ್ ಮಸ್ ಹಬ್ಬದ ಆಚರಣೆ ಬಹಳ ಜೋರಾಗಿದ್ದು ಮಕ್ಕಳೊಂದಿಗೆ ರಾಧಿಕಾ ಪಂಡಿತ್ ಕ್ರಿಸ್ಮಸ್ ಸೆಲಬ್ರೇಟ್ ಮಾಡಿದ್ದಾರೆ.ನಮ್ಮ ಕನ್ನಡ ಚಿತ್ರರಂಗದ ಮುದ್ದಾದ ಜೋಡಿ ಯಶ್ ಹಾಗೂ ರಾಧಿಕ್ ಪಂಡಿತ್ ರವರು ಸಮಯ ಸಿಕ್ಕಾಗೆಲ್ಲಾ ಕೂಡ ಮಕ್ಕಳ ಜೊತೆ ಸಮಯ ಕಳೆಯುತ್ತಾರೆ ಎನ್ನಬಹುದು. ಇನ್ನು ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾರೆ. ಹೌದು ಹಬ್ಬದ ಸ್ಪೆಷಲ್ ಅಲಂಕಾರ ಜೊತೆಗೆ ಮಕ್ಕಳೊಂದಿಗಿನ ಫೋಟೋಗಳನ್ನ ರಾಧಿಕಾ ಪಂಡಿತ್ ರವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೆ ರಾಧಿಕಾ ಪಂಡಿತ್ ಹಾಗೂ ಯಶ್ ಇತ್ತೀಚಿಕೆ ಮಕ್ಕಳೊಂದಿಗೆ ಟ್ರಿಪ್ಗೆ ಹೋಗಿದ್ದ ಫೋಟೋಗಳನ್ನು ಸಹ ಶೇರ್ ಮಾಡಿದ್ದರು.
ಸದ್ಯವಇದೀಗ ಕ್ರಿಸ್ಮ್ಮಸ್ ಹಬ್ಬವನ್ನು ಸಹ ತನ್ನ ಮಕ್ಕಳೊಂದಿಗೆ ರಾಧಿಕಾ ಪಂಡಿತ್ ಆಚರಿಸಿದ್ದು ಮಕ್ಕಳಿಗೆ ಕ್ರಿಸ್ಮಸ್ ಗಿಫ್ಟ್ ಕೂಡ ನೀಡಿದ್ದಾರೆ. ಸೆಲಬ್ರೇಷನ್ ಫೋಟೋಗಳನ್ನು ಇನ್ಸ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಹಬ್ಬ ಅಂದರೆ ಬಗೆ ಬಗೆ ಫುಡ್ ತಿಂದು ಪಾರ್ಟಿ ಮಾಡುವುದಲ್ಲ ನಮ್ಮನ್ನು ನಾವು ಹುರಿದುಂಬಿಸಲು ಉತ್ತಮ ಸಮಯ ಎಂದು ರಾಧಿಕಾ ಬರೆದಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಹಬ್ಬಗಳನ್ನು ರಾಧಿಕಾ ಪಂಡಿತ್ ಮನೆಯಲ್ಲೇ ಮಕ್ಕಳೊಂದಿಗೆ ಆಚರಿಸುತ್ತಾರೆ.
ಸದ್ಯ ಇತ್ತೀಚಿಗಷ್ಟೇ ಯಶ್ ಹಾಗೂ ರಾಧಿಕಾ ಮಗಳು ಐರಾ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ಯಶ್ ಮಗ ಯಥರ್ವ್ ಸ್ವೀಟ್ ತಯಾರಿ ಮಾಡುತ್ತಿರಯವುದನ್ನ ನೋಡಬಹುದು.
ಇನ್ನು ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಯ ಮಗಳು ಐರಾ ಬಗ್ಗೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ಅವಳ ಬಗ್ಗೆ ಹೊಸಹೊಸ ವಿಚಾರ ತಿಳಿದುಕೊಳ್ಳಬೇಕು ಎಂದು ಅಭಿಮಾನಿಗಳು ಕಾಯುತ್ತಿರುತ್ತಾರೆ. ರಾಧಿಕಾ ಪಂಡಿತ್ ಕೂಡ ಐರಾ ಹಾಗೂ ಯಥರ್ವ್ ಬಗ್ಗೆ ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ವಿವಿಧ ಫೋಟೋ ಹಾಗೂ ವಿಡಿಯೋ ಪೋಸ್ಟ್ ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಕಳೆದ ವರುಷ ಕ್ರಿಸ್ ಮಸ್ ಸಮಯದಲ್ಲಿ ಹೊಸ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಅವಳ ಪೋಸ್ ನೋಡಿ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದರು.
ಹೌದು ಕ್ರಿಸ್ಮಸ್ ಟ್ರೀ ಎದುರು ನಿಂತಿರುವ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದು ಈ ಫೋಟೋದಲ್ಲಿ ಅವರು ಸಾಮಾನ್ಯ ಪೋಸ್ ನೀಡಿದ್ದರು. ಆದರೆ ಐರಾ ಹಾಗಲ್ಲ. ಸೊಂಟದ ಮೇಲೆ ಕೈ ಇಟ್ಟುಕೊಂಡು ಒಂದು ಕಣ್ಣನ್ನು ಮುಚ್ಚಿದ್ದಾಳೆ. ಅವಳು ಕೊಟ್ಟ ಪೋಸ್ ನೋಡಿ ಅಭಿಮಾನಿಗಳಿಗೆ ಮಾತ್ರವಲ್ಲದೆ ಸ್ವತಃ ರಾಧಿಕಾ ಪಂಡಿತ್ಗೂ ಅಚ್ಚರಿ ಆಗಿತ್ತು. ಐರಾ ನನಗಿಂತಲೂ ಉತ್ತಮವಾಗಿ ಪೋಸ್ ನೀಡಿದ್ದಾಳೆ ಎಂಬರ್ಥ ಬರುವ ರೀತಿಯಲ್ಲಿ ಈ ಫೋಟೋಗೆ ಕ್ಯಾಪ್ಶನ್ ನೀಡಿದ್ದರು ರಾಧಿಕಾ.