ಇತ್ತೀಚೆಗಷ್ಟೇ ಜಪಾನ್ನ ಈಶಾನ್ಯ ಕರಾವಳಿಯಲ್ಲಿ ಪ್ರಬಲವಾದ ಭೂಕಂಪವಾಗಿದ್ದು ರಿಕ್ಟರ್ ಮಾಪಕದಲ್ಲಿ 7 ರಷ್ಟು ತೀವ್ರತೆ ದಾಖಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿತ್ತು.
ಹೌದು ಜಪಾನ್ನ ಈಶಾನ್ಯ ಕಡಲತೀರದಲ್ಲಿ ಸಂಭವಿಸಿರುವ ಈ ಭೂಕಂಪದಿಂದ ಜಪಾನ್ಗೆ ಸುನಾಮಿ ಭೀತಿ ಎದುರಾಗುವ ಸಾಧ್ಯತೆ ಇದೆ ಎಂದು ಕೂಡ ಅಲ್ಲಿನ ಹವಾಮಾನ ಇಲಾಖೆ ತಿಳಿಸಿದ್ದು ಮಿಯಾಮಿ ಪ್ರದೇಶದ ಸಾಗರದ ಆಳದಲ್ಲಿ ಈ ಭೂಕಂಪ ಸಂಭವಿಸಿದ್ದು ಭೂಕಂಪನದಿಂದ ಯಾವುದೇ ದುರ್ಘಟನೆಗಳು ಅಥವಾ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.
ಆದರೆ ಸುನಾಮಿ ಏಳುವ ಮುನ್ಸೂಚನೆ ಇದೆ ಎಂದು ವರದಿಯಾಗಿದ್ದು ಹೀಗಾಗಿ ಜಪಾನ್ನಾದ್ಯಂತ ಭಾರಿ ಮುಂಜಾಗರೂಕತೆ ವಹಿಸಲಾಗಿದೆ. ಹೌದು ರಿಕ್ಟರ್ ಮಾಪಕದಲ್ಲಿ 7 ರಷ್ಟು ತೀವ್ರತೆ ದಾಖಲಾಗಿರುವುದರಿಂದ ರೈಲ್ವೆ ಇಲಾಖೆಯು ರೈಲು ಸಂಚಾರವನ್ನು ಈಗಾಗಲೇ ಸ್ಥಗಿತಗೊಳಿಸಿದೆ. ಅಲ್ಲದೇ ಈಶಾನ್ಯ ಜಪಾನ್ನ ಅಣು ಸ್ಥಾವರಗಳ ಸುರಕ್ಷತೆಯ ಪ್ರಶ್ನೆಯೂ ಈ ಭೂಕಂಪದಿಂದ ಉಂಟಾಗಿದ್ದು ಈ ಕುರಿತು ತಜ್ಞ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 2011ರಲ್ಲಿ ಸುನಾಮಿ ಹೊಡೆತದಿಂದ ಪುಕುಶಿಮಾ ಅಣು ಸ್ಥಾವರಕ್ಕೆ ಧಕ್ಕೆ ಬಂದಿತ್ತು ಎಂದು ಸ್ಮರಿಸಬಹುದು.
ಹೌದು 2011 ಮಾ. 11ರಂದು ಜಪಾನಿಗೆ ಭಾರಿ ಸುನಾಮಿ ಅಪ್ಪಳಿಸಿದ್ದು ಇದು ಈಶಾನ್ಯ ಕರಾವಳಿಯಲ್ಲಿ ಮಾರ್ಚ್ 11 ರ ಮಧ್ಯಾಹ್ನ ಸ್ಥಳೀಯ ಕಾಲಮಾನ 2.45ರಲ್ಲಿ ಸಂಭವಿಸಿತ್ತು. ಮೊದಲು 8.9 ಪ್ರಮಾಣದ ತೀವ್ರ ಭೂಕಂಪ ಸಂಭಿಸಿದೆ. ಬಳಿಕ 13 ಅಡಿ ಎತ್ತರದ ಸುನಾಮಿ ಅಲೆಗಳು ರುದ್ರನರ್ತನ ಮಾಡಲಾರಂಭಿಸಿದ್ದು ಅನೇಕ ಕಟ್ಟಡಗಳು ಧರಾಶಾಹಿಯಾಗಿದ್ದು ರಸ್ತೆಗಳಲ್ಲಿ ವಾಹನಗಳು ಕೊಚ್ಚಿಹೋಗಿದ್ದವು. ಟೋಕಿಯೊದಲ್ಲಿ ಅನೇಕ ಮಂದಿ ಗಾಯಗೊಂಡ ವರದಿಗಳು ಕೂಡ ದಾಖಲಾಗಿದ್ದುಟೋಕಿಯೋದಿಂದ 240 ಮೈಲು ದೂರದಲ್ಲಿ ಆರು ಮೈಲು ಆಳದಲ್ಲಿ ಈ ಭೂಕಂಪ ಸಂಭವಿಸಿತ್ತು.
ಜಪಾನಿನ ಕರಾವಳಿ ಉದ್ದಕ್ಕೂ ಅನೇಕ ಕಡೆಗಳಲ್ಲಿ ಸುನಾಮಿ ರೌದ್ರಾವತಾರ ತಾಳಿರುವುದು ದೃಶ್ಯಗಳೂ ನಿಜಕ್ಕೂ ಎಂತಹವರಿಗೂ ಮನಕಲಕುವಂತಿತ್ತುಮ ತಟದಲ್ಲಿ ಹಡಗುಗಳು ರಸ್ತೆಗಳಲ್ಲಿ ವಾಹನಗಳು ಇಡೀ ಮನೆಗಳೇ ಕೊಚ್ಚಿ ಹೋಗಿದ್ದು ದೊಡ್ಡ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೃಹತ್ ಬೆಂಕಿಯುಂಡೆಯಾಗಿ ಜ್ವಲಿಸಿತ್ತು.
ಅಲ್ಲದೇ ಟೋಕಿಯೋದ ಕುಡಾನ್ ಕೈಕನ್-ನಲ್ಲಿ ಬೃಹತ್ ಸಭಾಭವನವೊಂದು ಧರೆಗುರುಳಿದ್ದು ಇದರಡಿ ಅಸಂಖ್ಯಾತ ಮಂದಿ ಸಿಲುಕಿದ್ದರು. ಅನೇಕ ಹಳ್ಳಿಗಳು ಕೂಡ ಕೊಚ್ಚಿ ಹೋಗಿದ್ದವು.ಇನ್ನು ಕೆಸೆನ್ನುಮಾ ನಗರದ ಬಳಿ ದೊಡ್ಡ ಹಡಗೊಂದು ಸಮುದ್ರದಿಂದ ಮನೆಗಳತ್ತ ನುಗ್ಗಿ ಭಾರಿ ಅನಾಹುತ ಸೃಷ್ಟಿಸಿತ್ತು. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು ಇಲ್ಲೀ ಭೀಕರ ಸುನಾಮಿ ಎದ್ದಿದ್ದೆ. ಅದು ಎಲ್ಲಿ ಗೊತ್ತಾ? ಕೆಳಗಿನ ವಿಡಿಯೋ ನೋಡಿ.