ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅನುಷ್ಕಾ ಹಾಗು ಪ್ರಭಾಸ್ ಕತ್ತಿ ಹಿಡಿದು ಪ್ರಾಕ್ಟೀಸ್ ನೋಡಿ…ಚಿಂದಿ ವಿಡಿಯೋ

775

Behind The Scenes – Prabhas & Anushka Shetty: ಬಾಹುಬಲಿ ಭಾರತೀಯ ಸಿನಿಮಾ ರಂಗದಲ್ಲಿ ದೊಡ್ಡ ಇತಿಹಾಸ ಹುಟ್ಟುಹಾಕಿದ ಸಿನಿಮಾ ಎನ್ನಬಹುದು. ಭಾರತೀಯ ಚಿತ್ರರಂಗದ ತಾಕತ್ತು ತೋರಿಸಿದ ಸಿನಿಮಾ ಬಾಹುಬಲಿ ಎಂದರೆ ತಪ್ಪಾಗಲಾರದು. ಹೌದು ಬಾಹುಬಲಿ ಒಂದೇ ಒಂದು ಸಿನಿಮಾ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದು ರಾಜಮೌಳಿ ಸಾರಥ್ಯದಲ್ಲಿ ಬಂದ ಬಾಹುಬಲಿ ರಿಲೀಸ್ ಅಗಿ (ಜುಲೈ 10) ಏಳು ವರ್ಷ ಆಯ್ತು.

ಬಾಹುಬಲಿ ಸಿನಿಮಾ ತೆರೆಕಂಡು ಏಳು ವರ್ಷ ಆಗಿದ್ದು ಈ ಸಂಭ್ರಮ ಚಿತ್ರತಂಡದಲ್ಲಿ ಮನೆಮಾಡಿತ್ತು. ಇನ್ನು ಸಿನಿಮಾವನ್ನು ಪ್ರೇಕ್ಷಕರು ಕೂಡಾ ಸಂಭ್ರಮಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳು ಮೂಲಕ ಬಾಹುಬಲಿ ಯಶಸ್ಸನ್ನು ಮೆಲುಕು ಹಾಕಿದ್ದರು ಎನ್ನಬಹುದು.
ಇನ್ನು ಬಾಹುಬಲಿ ಸಿನಿಮಾದ ಮೂಲಕ ನಟ ಪ್ರಭಾಸ್ ಭಾರತೀಯ ಚಿತ್ರರಂಗದ ನಂಬರ್ ಒನ್ ನಟ ಎನಿಸಿಕೊಂಡಿದ್ದು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಸಿಯಾಗಿದ್ದಾರೆ.

ಇನ್ನು ಬಾಹುಬಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದು ಏಳು ವರ್ಷಗಳ ಹಿಂದೆಯೇ ಹಾಕಿದ ಬಜೆಟ್‌ಗಿಂತ ಮೂರು ಪಟ್ಟು ಹೆಚ್ಚಿನ ಲಾಭವನ್ನು ಗಳಿಸಿಕೊಂಡಿತು. ಹೌದು ಈ ಚಿತ್ರಕ್ಕೆ ಹಾಕಿರುವ ಬಜೆಟ್ 180 ಕೋಟಿ ರೂ. ಆದರೆ ಬಂದಿದ್ದು 600 ರಿಂದ 650 ಕೋಟಿ ರೂ. ಎಂದು ಅಧಿಕೃತವಾಗಿ ವರದಿಯಾಗಿದ್ದು ಹೀಗೆ ಮೂರು ಪಟ್ಟು ಹೆಚ್ಚಿನ ಲಾಭಗಳಿಸಿ ಬಾಕ್ಸಾಫಸ್‌ನಲ್ಲಿ ಹೊಸ ಇತಿಹಾಸ ಬರೆಯಿತು.

ಮೂರು ಪಟ್ಟು ಲಾಭದಾಯಕವಾದ ಕಲೆಕ್ಷನ್ ಗಳಿಸಿಕೊಂಡ ಹೆಗ್ಗಳಿಕೆಗೂ ಅಂದು ಪಾತ್ರವಾಗಿತ್ತು. ಇನ್ನು ಬಾಹುಬಲಿಯ ಚಿತ್ರದ ಮತ್ತೊಂದು ಮುಖ್ಯ ಆಕರ್ಷಣೆ ಎಂದರೆ ಕಾಲಕೇಯ ಎನ್ನಬಹುದು. ಕಾಲಕೇಯ ಬಳಗಕ್ಕಾಗಿ ಚಿತ್ರತಂಡ ಹೊಸ ಭಾಷೆಯನ್ನೇ ಹುಟ್ಟು ಹಾಕಿದ್ದು ಇದಕ್ಕಾಗಿ ಕಾಲ್ಪನಿಕ ಭಾಷೆಯನ್ನು ರಚಿಸಲಾತು. ಇದು ಭಾರತೀಯ ಮೊದಲ ಕಾಲ್ಪನಿಕ ಭಾಷೆಯಾಗಿ ಹೊರ ಹೊಮ್ಮಿದೆ. ಕಾಲ್ಪನಿಕ ಭಾಷೆಯಲ್ಲಿ 748 ಪದಗಳು ಮತ್ತು 40 ವ್ಯಾಕರಣ ನಿಯಮಗಳು ಇದ್ದು, ಇದನ್ನು ಕಿಲಿಕಿ ಎಂದು ಕರೆಯಲಾಯಿತು ಮತ್ತು ಬಾಹುಬಲಿ ಎಲ್ಲಾ ಭಾಷೆಯ ಅವತರಣಿಕೆಗಳಲ್ಲೂ ಒಂದೆ ರೀತಿಯಾಗಿದೆ.

ಇನ್ನು ಬಾಹುಬಲಿ ಸರಣಿಗಾಗಿ ಪ್ರಭಾಸ್ ಐದು ವರ್ಷಗಳನ್ನು ಮೀಸಲಿಟ್ಟಿದ್ದು ಬಾಹುಬಲಿ ಮೊದಲ ಭಾಗದ ಚಿತ್ರೀಕರಣ ಆರಂಭಿಸಿದ ಬಳಿಕ ಅವರು ಐದು ವರ್ಷಗಳ ಕಾಲ ಮತ್ಯಾವ ಚಿತ್ರಕ್ಕೂ ಸಹಿ ಹಾಕಿರಲಿಲ್ಲ. ಉಳಿದ ಪ್ರಮುಖ ತಾರಾಗಳದಲ್ಲಿದ್ದ ರಾಣಾ ದಗ್ಗುಬಾಟಿ ತಮನ್ನಾ ಭಾಟಿಯಾ ಮತ್ತು ಅನುಷ್ಕಾ ಶೆಟ್ಟಿ ಸೇರಿದಂತೆ ಹಲವರು ಬಾಹುಬಲಿ ನಂತರ ನಾನಾ ಸಿನಿಮಾಗಳಲ್ಲಿ ನಟಿಸಿದರು.

ಆದರೆ ಪ್ರಭಾಸ್ ಮಾತ್ರ ಸಿನಿಮಾ ಸಂಪೂರ್ಣವಾಗಿ ಮುಗಿದು ಬಿಡುಗಡೆಯಾಗುವ ತನಕ ಯಾವ ಚಿತ್ರವನ್ನು ಕೈಗೆತ್ತಿ ಕೊಂಡಿಲಿಲ್ಲ. ಇನ್ನು ಅಂದು ಬಾಹುಬಲಿ ಸಿನಿಮಾ ತೆಲುಗಿನಲ್ಲಿ ಪ್ರಮುಖವಾಗಿ ನಿರ್ಮಾಣವಾದರೂ ಹಿಂದಿ ತಮಿಳು ಮತ್ತು ಮಲಯಾಳಂಗೆ ಡಬ್ ಆಗಿ ರಿಲೀಸ್ ಆಗಿತ್ತು. ಎಲ್ಲಾ ಭಾಷೆಗಳಲ್ಲೂ ಸಹ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು ಬಾಹುಬಲಿ.

ಬಳಿಕ ಬಂದ ಬಾಹುಬಲಿ 2 ಸಿನಿಮಾ ಕೂಡ ಬಹು ಭಾಷೆಗಳಲ್ಲಿ ತೆರೆಗೆ ಬಂದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು ಸಾವಿರ ಕೋಟಿ ಗಳಿಕೆ ಮಾಡಿತ್ತು. ಹೌದು ಈ ಚಿತ್ರಗಳ ಬಳಿಕ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹೆಚ್ಚಾಯ್ತು ನಂತರ ಕನ್ನಡದಲ್ಲಿ ಬಂದ ಕೆಜಿಎಫ್ ಕೂಡ ಇದೇ ದಾರಿಯನ್ನು ಹಿಡಿಯಿತು. ಸದ್ಯ ಇದೀಗ ಬಾಹುಬಲಿ ಸಿನಿಮಾದ ಮೇಕಿಂಗ್ ವಿಡಿಯೋ ವೈರಲ್ ಆಗುತ್ತಿದ್ದು ವಿಡಿಯೋದಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ರವರ ಕತ್ತಿ ವರಸೆ ನೋಡಬಹುದು.