ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಆಶಿಕಾ ರಂಗನಾಥ್ ಜೊತೆ ಅಶ್ವಿನಿ ಹೇಗೆ ಮಾತಾಡುತ್ತಾರೆ ನೋಡಿ…ಚಿಂದಿ ವಿಡಿಯೋ

2,292

2016ರಲ್ಲಿ ತೆರೆಕಂಡ ಕ್ರೇಜಿ ಬಾಯ್ ಎಂಬ ಚಿತ್ರದ ಮೂಲಕ‌ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಆಶಿಕಾ ರಂಗನಾಥ್ ರವರು ಬಳಿಕ ಶಿವ ರಾಜ್ ಕುಮಾರ್ ನಟನೆಯ ಮಾಸ್ ಲೀಡರ್ ಚಿತ್ರದಲ್ಲಿ ಸಹ ನಟಿಸಿದ್ದರು. ಹೌದು ಬಳಿಕ 2017ರಲ್ಲಿ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಜೋಡಿಯ ಮುಗುಳುನಗೆ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ ಆಶಿಕಾ ರಂಗನಾಥ್ ರವರು ದೊಡ್ಡ ಖ್ಯಾತಿ ಪಡೆದರು.

ತದನಂತರ ಶರಣ್ ನಟನೆಯ ರಾಂಬೋ 2 ಚಿತ್ರದಲ್ಲಿ ನಟಿಸಿ ಗೆಲುವನ್ನು ಕಂಡ ಆಶಿಕಾ ರಂಗನಾಥ್ ರವರು ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರದ ಐಟಂ ಹಾಡಿಗೆ ಹಾಗೂ ಪುನೀತ್ ರಾಜ್‍ಕುಮಾರ್ ನಟನೆಯ ಜೇಮ್ಸ್‌ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದು ಬಿಟ್ಟರೆ ಸ್ಟಾರ್ ನಟರ ಚಿತ್ರಗಳಲ್ಲಿ ಲೀಡ್ ರೋಲ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.

ಹೌದು ಕೈನಲ್ಲಿ ಕನ್ನಡದ ಹಲವು ಚಿತ್ರಗಳು ಆಶಿಕಾ ಕೈನಲ್ಲಿ ಇರುವಾಗಲೇ ನಟಿ ಪಕ್ಕದ ಇಂಡಸ್ಟ್ರಿಗಳಿಗೆ ಜಿಗಿದಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಆಶಿಕಾ ರಂಗನಾಥ್ ರವರ ನಟನೆಯ ಮೊದಲ ತಮಿಳು‌ ಚಿತ್ರ ಪಟ್ಟದು ಅರಸನ್ ಬಿಡುಗಡೆಯಾಗಿತ್ತು. ಈ ಚಿತ್ರ ಸದ್ದು‌ ಮಾಡಲೇ ಇಲ್ಲ. ಇನ್ನು ತಮಿಳು‌ ನಟ ಸಿದ್ಧಾರ್ಥ್ ನಟನೆಯ ಮತ್ತೊಂದು ತಮಿಳು ಚಿತ್ರಕ್ಕೆ ಆಶಿಕಾ ಆಯ್ಕೆಯಾಗಿದ್ದು ಇದರ ಬೆನ್ನಲ್ಲೇ ನಟಿ ತೆಲುಗು ಚಿತ್ರರಂಗಕ್ಕೆ ಹಾರಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು‌.

ಈ ಸುದ್ದಿ ಇದೀಗ ನಿಜವಾಗಿದ್ದು ತೆಲುಗಿನ ದೊಡ್ಡ ಬ್ಯಾನರ್ ನಿರ್ಮಿಸುತ್ತಿರುವ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ನಟಿ ಆಶಿಕಾ ರಂಗನಾಥ್ ಪದಾರ್ಪಣೆ ಮಾಡಲಿದ್ದಾರೆ. ಹೌದು ಮೈತ್ರಿ‌‌ ಮೂವಿ ಮೇಕರ್ಸ್ ಬಂಡವಾಳ ಹೂಡುತ್ತಿರುವ ಅಮಿಗೊಸ್ ಎಂಬ ವಿಭಿನ್ನ ಟೈಟಲ್ ಉಳ್ಳ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ರಾಜೇಂದ್ರ ರೆಡ್ಡಿ ನಿರ್ದೇಶನವಿದ್ದು ನಂದಾಮೂರಿ‌ ಕಲ್ಯಾಣ್ ರಾಮ್ ನಾಯಕನಾಗಿದ್ದಾರೆ‌. ಇನ್ನು ಚಿತ್ರತಂಡ ಆಶಿಕಾ ರಂಗನಾಥ್ ನಮ್ಮ ಚಿತ್ರದಲ್ಲಿ ಇಶಿಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪರಿಚಯಿಸಿದೆ.

ಇನ್ನು ಆಶಿಕಾ ನಟನೆಯ ಮೊದಲ ತಮಿಳು ಸಿನಿಮಾದ ಮುಹೂರ್ತ ನೆರವೇರಿದ್ದು ಅಂದಹಾಗೆ ಆಶಿಕಾ ಕಾಲಿವುಡ್‌ನ ಖ್ಯಾತ ನಟನಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದು ಮತ್ಯಾರು ಅಲ್ಲ ಸಿದ್ಧಾರ್ಥ್. ಸಿದ್ಧಾರ್ಥ್ ಜೊತೆ ನಟಿಸುವ ಮೂಲಕ ಆಶಿಕಾ ತಮಿಳು ಸಿನಿಮಾರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಆಶಿಕಾ ಮತ್ತು ಸಿದ್ಧಾರ್ಥ್ ಸೇರಿದಂತೆ ಇಡೀ ಸಿನಿಮಾತಂಡ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಂದಹಾಗೆ ನಟ ಸಿದ್ಧಾರ್ಥ್ ಆಶಿಕಾ ಅವರ ನೆಚ್ಚಿನ ನಟರಂತೆ. ತನ್ನ ಫೇವರಿಟ್ ಹೀರೋ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎಂದು ಆಶಿಕಾ ಸಂತಸ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿರುವ ಆಶಿಕಾ ಶಾಲ ದಿನಗಳ ಹೀರೋ ಜೊತೆ ಸಿನಿಮಾ ಮಾಡುತ್ತಿರುವುದು ತುಂಬಾ ವಿಶೇಷ ಎಂದು ಬರೆದುಕೊಂಡಿದ್ದಾರೆ. ಸಿದ್ಧಾರ್ಥ್ ಜೊತೆ ಪೋಸ್ ನೀಡಿರುವ ಫೋಟೋ ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಈ ನಡುವೆ ಆಶಿಕಾಗೆ ಬೆಸ್ಟ್ ಆಕ್ಟ್ರೆಸ್ ಆಫ್ ಕರ್ನಾಟಕ ಎಂಬ ಅವಾರ್ಡ್ ದೊರಕಿದ್ದು ಈ ಪ್ರಶಸ್ತಿ ನೀಡಿದ್ದು ಮತ್ಯಾರು ಅಲ್ಲ ದೊಡ್ಮನೆಯ ಕಿರಿಯ ಸೊಸೆ ಅಶ್ವಿನಿ ಪುನೀತ್ ರಾಜಕುಮಾರ್ ರವರು. ಈ ಅದ್ಬುತ ಕ್ಷಣ ಹೇಗಿತ್ತು ಎಂದು ತಿಳಿಯಲು ಕೆಳಗಿನ ವಿಡಿಯೋ ನೋಡಿ.