ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಜನಪ್ರಿಯತೆ ಪಡೆದಿರುವ ನಟಿ ಎಂದರೆ ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ರವರು ಎಂದೇ ಹೇಳಬಹಯದು. ಸಿನಿಜರ್ನಿ ಪ್ರಾರಂಭ ಮಾಡಿದ ಕೆಲವೇ ವರುಷದಲ್ಲಿ ಕರುನಾಡ ಕ್ರಶ್ ಆಗಿ ಜನಪ್ರಿಯ ಗಳಿಸಿರುವ ಈ ಹಾಲ್ಗೆನ್ನೆ ಸುಂದರಿಗೆ ಕರುನಾಡ ಯುವ ಪೀಳಿಗೆಗಳು ಮಾರು ಹೋಗಿದ್ದು ಕ್ರೇಜಿ ಬಾಯ್ ಎಂಬ ಸಿನಿಮಾ ಮೂಲಕ ಪರಿ ಪೂರ್ಣ ನಾಯಕಿಯಾಗಿ ಕಾಣಿಸಿಕೊಂಡ ಈ ನಟಿಗೆ ಬಹಳ ಹೆಸರು ತಂದುಕೊಂಡ ಚಿತ್ರವೆಂದರೆ ಯೋಗ ರಾಜ್ ಭಟ್ ಹಾಗೂ ನಟ ಗಣೇಶ್ ರವರ ಕಾಂಭಿನೇಷನ್ ನ ಮುಗುಳುನಗೆ ಸಿನಿಮಾದಲ್ಲಿ ಅಕೆಯ ಅಭಿನಯ ಹಾಗೂ ಮುಗ್ದ ನಗು ಪ್ರೇಕ್ಷಕರಿಗೆ ಬಹಳ ಇಷ್ಟವಾಯಿತು.
ತದನಂತರ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾದ ಆಶಿಕಾ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಹೊರ ಹೊಮ್ಮಿದ್ದಾರೆ. ಇನ್ನು ಆಶಿಕಾ ರಂಗನಾಥ್ ರವರ ಹುಟ್ಟು ಹೆಸರು ಆಶಿಕ್ ಗೌಡ ಆಗಿದ್ದು ಮನೆಯಲ್ಲಿ ಇವರನ್ನು ಪ್ರೀತಿಯಿಂದ ಸ್ವೀಟಿ ಎಂದು ಕರೆಯುತ್ತಾರೆ. ಆಗಸ್ಟ್ 5 1994 ರಲ್ಲಿ ಹಾಸನ ದಲ್ಲಿ ಜನಿಸಿದ ಆಶಿಕಾ ರವರು ಬೆಳೆದಿದ್ದೆಲ್ಲ ತುಮಕೂರಿನಲ್ಲಿ. ಎನ್ ರಂಗನಾಥ್ ಹಾಗೂ ಸುಧಾ ರಂಗನಾಥ್ ದಂಪತಿಗಳಿಗೆ ಕಿರಿಯ ಪುತ್ರಿಯಾಗಿ ಜನಿಸಿರುವ ಆಶಿಕಾ ರವರಿಗೆ ಅನುಷಾ ರಂಗನಾಥ್ ಎಂಬ ಸಹೋದರಿ ಕೂಡ ಇದ್ದಾರೆ.
ಶಾಲಾ ವ್ಯಾಸಂಗವನ್ನು ಬಿಷೋಪ್ ಶಾಲೆಯಲ್ಲಿ ಮುಗಿಸಿದ ಆಶಿಕಾ ರವರು ಜ್ಯೋತಿ ನಿವಾಸ್ ಕೋರಮಂಗಲ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದು ಎಂಇಎಸ್ ಕಾಲೇಜು ಬೆಂಗಳೂರಿನಲ್ಲಿ ಡಿಗ್ರಿ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ.ಡಿಗ್ರಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಕ್ಲೀನ್ & ಕ್ಲಿಯರ್ ಫ್ರೆಶ್ ಫೇಸ್ ಆಫ್ ಬೆಂಗಳೂರು ಎಂಬ ಕಂಟೆಸ್ಟೆಂಟ್ ನಲ್ಲಿ ಭಾಗವಹಿಸಿದ್ದ ಆಶಿಕಾ ರವರು ರನ್ನರ್ ಅಪ್ ಆಗಿ ಹೊರಹೊಮ್ಮುತ್ತಾರೆ.
ಇದು 2014 ರಲ್ಲಿ ನಡೆದಂತಹ ಕಾಂಟೆಸ್ಟ್ ಆಗಿದ್ದು ಇದರಿಂದಾಗಿ ಕನ್ನಡ ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶವನ್ನು ಗಿಟ್ಟಿಸಿಕೊಂಡ ಅವರು ಕ್ರೇಜಿ ಬಾಯ್ಸ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ. ಇದೆಲ್ಲದರ ಜೊತೆಗೆ ಡ್ಯಾನ್ಸ್ ಕರ್ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಶಿಕಾ ಇದರಲ್ಲಿಯೂ ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮುತ್ತಾರೆ. ಹೌದು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಕರ್ನಾಟಕ ಕಾರ್ಯಕ್ರಮವನ್ನು ಅನುಶ್ರೀ ಅವರು ಹೋಸ್ಟ್ ಮಾಡಿದ್ದು ಈ ಕಾರ್ಯಕ್ರಮದಿಂದ ಆಶಿಕಾ ದೊಡ್ಡ ಜನಪ್ರಿಯತೆಯನ್ನು ಕಂಡುಕೊಳ್ಳುತ್ತಾರೆ.
ನೃತ್ಯದಲ್ಲಿ ಪರಿಣಿತಿ ಹೊಂದಿದ್ದ ಆಶಿಕಾ ಅವರಿಗೆ ನಟನೆಯಲ್ಲಿಯೂ ಕೂಡ ಪರಿಣಿತಿ ಹೊಂದಲು ಸಾಕಷ್ಟು ಸಿನಿಮಾಗಳ ಅವಕಾಶ ಸಿಗುತ್ತದೆ.ಮಾಸ್ ಲೀಡರ್ ಮುಗುಳುನಗೆ ರಾಜು ಕನ್ನಡ ಮೀಡಿಯಂ ತಾಯಿಗೆ ತಕ್ಕ ಮಗ ರ್ಯಾಂಬೊ ೨ ರೆಮೋ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ ಆಶಿಕಾ ನೋಡುನೋಡುತ್ತಲೇ ಕರ್ನಾಟಕದ ಕ್ರ್ಯಾಶ್ ಆಗಿ ಬಿಡುತ್ತಾರೆ .
ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ಅವರು ಈ ಸಿನಿಮಾದ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸುವುದು ಖಚಿತ ಎಂದೇ ಹೇಳಲಾಗುತ್ತಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ನಿರತರಾಗಿರುವ ಆಶಿಕಾ ರಂಗನಾಥ್ ಸದಾ ವಿಶೇಷವಾದ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಗ್ಲಾಮರಸ್ ಲುಕ್ ನಿಂದಲೇ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿದ್ದಾರ.
ಸದ್ಯ ಇದೀಗ ಇತ್ತೀಚೆಗಷ್ಟೇ ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ಆಶಿಕಾ ಕಾಣಿಸಿಕೊಂಡಿದ್ದು ಇಲ್ಲಿ ಕೆಲವು ಫನ್ನಿ ಮೊಮೆಟ್ಸ್ ಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಅದೇನು ಎಂದು ತಿಳಿಯಲು ಕೆಳಗಿನ ವಿಡಿಯೋ ನೋಡಿ.