ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಿರಿಕ್ ಪಾರ್ಟಿಗೆ ರಶ್ಮಿಕಾ ಆಡಿಷನ್ ಹೇಗಿತ್ತು ನೋಡಿ…ಅಮೋಘ ನಟನೆ ವಿಡಿಯೋ

71,306

Rashmika Mandanna Kirik party Audition : ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬಿಸಿದ್ದ ಚಿತ್ರ ಎಂದರೆ ಕಿರಿಕ್ ಪಾರ್ಟಿ ಸಿನಿಮಾ. ಹೌದು ಈ ಚಿತ್ರದ ಮೂಲಕ ಚೆಂದನವನಕ್ಕೆ ಸಾನ್ವಿಯಾಗಿ ರಶ್ಮಿಕಾ ಮಂದಣ್ಣ ಅವರನ್ನು ರಕ್ಷಿತ್ ಶೆಟ್ಟಿ ಅವರು ಪರಿಚಯಿಸುತ್ತಾರೆ. ಈ ಸಿನಿಮಾವನ್ನು ರಕ್ಷಿತ್ ಎಷ್ಟು ಪ್ರೀತಿ ಮಾಡಿ ಅಭಿನಯಿಸಿದ್ದರೋ ಅಷ್ಟೆ ಪ್ರೀತಿ ರಶ್ಮಿಕಾ ಅವರ ಮೇಲೂ ಇತ್ತು. ಅಲ್ಲದೇ ಇವರಿಬ್ಬರು ಪ್ರೀತಿಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳೆಲ್ಲಾ ಸಖತ್ ಖುಷಿ ಪಟ್ಟಿದ್ದರು.

ತದನಂತರ ಎರಡು ಕುಟುಂಬದ ಸಮೂಖದಲ್ಲಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ ಈ ಪ್ರೀತಿ ನಿಶ್ಚಿತಾರ್ಥಗಳೆಲ್ಲಾ ಜಾಸ್ತಿ ದಿನ ಉಳಿಯಲಿಲ್ಲ. ಇತ್ತ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದಿಂದ ಜನಪ್ರಿಯತೆ ಗಳಿಸಿ ಪರಭಾಷೆಯಲ್ಲಿ ಬ್ಯುಸಿಯಾಗಿಬಿಟ್ಟರು. ದಿನಗಳು ಉರುಳಿದಂತೆ ರಶ್ಮಿಕಾ ಕನ್ನಡದ ಚಿತ್ರರಂಗವನ್ನು ಮರೆಯುತ್ತಾ ರಕ್ಷಿತ್ ಅವರಿಗೂ ಕೈ ಕೊಟ್ಟರು.

ಇದರಿಂದ ಬೇಸತ್ತ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಿಂದ ದೂರ ಉಳಿದು ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ತದನಂತರ ಎರಡು ವರುಷಗಳ ಬಳಿಕ ಅವನೇ ಶ್ರೀಮನ್ನಾರಯಣ ಎಂಬ ಪ್ಯಾನ್ ಇಂಡಿಯಾ ಸಿನಿಮಾವನ್ನು ಬರೆದು ನಟಿಸಿ ಪ್ರೇಕ್ಷಕರ ಮುಂದೆ ಬಂದಿದ್ದರು.

ಇದೀಗ ಇಬ್ಬರು ಕೂಡ ತಮ್ಮ ತಮ್ಮ ಜೀವನದಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತ ರಶ್ಮಿಕಾ ಮಂದಣ್ಣ ಸಾಲುಸಾಲು ಸಿನಿಮಾಗಳಲ್ಲಿ ಅಭಿನಯಿಸಿ ನ್ಯಾಷನಲ್ ಕ್ರಶ್ ಕೂಡ ಆಗಿಬಿಟ್ಟಿದ್ದಾರೆ. ಇದರ ಬೆನ್ನಲ್ಲೆ ಕಳೆದ ವರುಷ ರಕ್ಷಿತ್ ಶೆಟ್ಟಿ ಅವರು ರಶ್ಮಿಕಾ ಮಂದಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದು ಹಳೆ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಈ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿದ್ದ ಸಿಂಪಲ್ ಸ್ಟಾರ್ ಇದೀಹ ನಾನು ನಿಮ್ಮ ಸುಂದರವಾದ ವೀಡಿಯೋವೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ಅಂದು ನಾನು ನಿಮ್ಮ ಆಡಿಷನ್ ಮಾಡಿರುವ ದಿನದಿಂದ ಇಲ್ಲಿಯ ತನಕ ನಿಮ್ಮ ಸಿನಿ ಜರ್ನಿ ಬಹಳ ದೂರದವರೆಗೂ ಸಾಗಿ ಬಿಟ್ಟಿದೆ. ನಿವೂ ನಿಮ್ಮ ಕನಸಗಳನ್ನು ಬೆನ್ನಟ್ಟಿ ಸಾಗುತ್ತಿದ್ದೀರಾ. ಈ ಕುರಿತಾಗಿ ನನಗೆ ಖುಷಿ ಹಾಗೂ ಹೆಮ್ಮೆ ಇದೆ.

ನಿಮ್ಮ ಯಶಸ್ಸು ಮತ್ತಷ್ಟಗಾಗಲಿ ಎಂದು ನಾನು ಬಯಸುತ್ತೇನೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡು ಕಿರಿಕ್ ಪಾರ್ಟಿ ಸಿನಿಮಾದ ಆಡಿಷನ್ ವೀಡಿಯೋವನ್ನು ಹಂಚಿಕೊಂಡಿದ್ದರು. ಆ ಆಡಿಷನ್ ವಿಡಿಯೋ ಈಗಲೂ ಕೂಡ ವೈರಲ್ ಆಗುತ್ತಿದ್ದು ಈ ಲೇಖನಿಯ ಕೆಳಗೆ ತಾವು ಆ ವಿಡಿಯೋ ನೋಡಬಹುದು.