ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಉಸಿರು ಬಿಗಿಹಿಡಿದು ಕೋಗಿಲೆ ರೀತಿ ಹಾಡಿದ ಕನ್ನಡತಿ ರಂಜಿನಿ…ಚಿಂದಿ ವಿಡಿಯೋ

9,758

ಸಾಕಷ್ಟು ಕಿರುತೆರೆ ನಟ ನಟಿಯರು ಪ್ರತಿಯೊಂದು ಧಾರಾವಾಹಿಯಲ್ಲೂ ಕೂಡ ವೈವಿಧ್ಯತೆ ನೀಡಬೇಕೆಂದೇ ಶುರು ಮಾಡುವವರಿದ್ದಾರೆ. ಆದರೆ ಎಷ್ಟೇ ವೈವಿಧ್ಯತೆ ನೀಡಿದರೂ ಸಾಕಷ್ಟು ಪ್ರೇಕ್ಷಕರಿಗೆ ಎಲ್ಲವೂ ಇಷ್ಟವಾಗುತ್ತಿಲ್ಲ ಎಂದಾಗ ಮತ್ತೆ ಅದೇ ಹಳೆಯ ಅತ್ತೆ ಸೊಸೆ ಜಗಳದ ಕಾನ್ಸೆಪ್ಟ್‌ಗೆ ತಂದು ಬಿಡುತ್ತಾರೆ.

ಆದರೆ ಕಲರ್ಸ್ ವಾಹಿನಯಲ್ಲಿ ಪ್ರಸಾರವಾಗುವ `ಕನ್ನಡತಿ’ ಧಾರವಾಹಿ ಆರಂಭದಿಂದಲೇ ಕನ್ನಡದ ಬಗ್ಗೆ ಮೂಡಿಸಿರುವ ಒಲವನ್ನು ಪ್ರೇಕ್ಷಕರಲ್ಲಿ ಹಾಗೆಯೇ ಉಳಿಸಿರುವಂಥ ಅಪರೂಪದ ಧಾರಾವಾಹಿಯಾಯಿತು. ಇದರ ಯಶಸ್ಸಿನಲ್ಲಿ ಒಟ್ಟು ತಂಡದ ಜೊತೆಗೆ ನಾಯಕಿಯಾಗಿರುವ ರಂಜನಿ ರಾಘವನ್ ಅವರ ಪಾತ್ರ ಬಹಳ ಪ್ರಮುಖದದ್ದು. ಅದರಲ್ಲಿಯೂ ಒಂದು ಕಾಲದಲ್ಲಿ ಕನ್ನಡಿಗರ ಪಾಲಿನ ಜನಪ್ರಿಯ ಸೊಸೆಯಾಗಿದ್ದಾಕೆ ಈಗ ಶಿಕ್ಷಕಿಯಾಗಿಯೂ ಜನಮೆಚ್ಚುಗೆ ಪಡೆದಿರುವುದು ವಿಶೇಷ.

ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಸಕ್ರಿಯರಾಗಿರುವ ನಟಿ ರಂಜನಿ ರಾಘವಾನ್ ಅವರಿಗೆ ಕಿರುತೆರೆ ಲೋಕದಲ್ಲಿ ತನ್ನದೇ ಆದ ಅಭಿಮಾನಿ ಬಳಗವಿದೆ. ಇನ್ನೂ ಇದೀಗ ಈ ನಟಿ 27 ನೇ ವರುಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಬಹಳ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

ಆಕಾಶದೀಪ ಎಂಬ ಕಿರುತೆರೆ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಈ ನಟಿ, ಕಲರ್ಸ್ ವಾಹಿನಿಯಲ್ಲಿ ಪ್ರಸರಾವಾಗುತ್ತಿದ್ದ ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಅಪಾರ ಜನಪ್ರಿಯತೆ ಕಂಡುಕೊಂಡರು. ಇದೀಗ ಈಕೆ ಹಾಡಿದ ಕ್ಷಣ ನೋಡಿ.