ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸೀರೆ ಕಟ್ಟಿಕೊಂಡು ಡಾನ್ಸ್ ಮಾಡಿದ ನಟಿ ರೋಜಾ…ಚಿಂದಿ ವಿಡಿಯೋ

3,926

Minister Roja Mass Dance: ತಿರುಪತಿ ಬಳಿಯ ಚಿಕ್ಕಹಳ್ಳಿ ಒಂದರಲ್ಲಿ ಜನಿಸಿದ ಈ ನಟಿ ಇಡೀ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯಾಗಿ ಬೆಳೆಯುತ್ತಾರೆ.ಆ ನಟಿ ಬೇರೆ ಯಾರು ಅಲ್ಲ ಅವರೇ ರೋಜಾ. ಹೌದು ಕೇವಲ 17 ವಯಸ್ಸಿಗೆ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದ ಕೊಂಡ ಈ ನಟಿ ಚಿಕ್ಕವಯಸ್ಸಿನಲ್ಲಿಯೇ ಕುಚುಪುಡಿ ನೃತ್ಯವನ್ನು ಕರಗತ ಮಾಡಿಕೊಂಡಿದ್ದು ಚಿಕ್ಕ ವಯಸ್ಸಿನಲ್ಲಿಯೇ ತುಂಬಾ ಸಿನಿಮಾಗಳನ್ನು ನೋಡುತ್ತಿದ್ದ ನಟಿ ರೋಜಾ ರವರು ನಟನೆಯಲ್ಲಿಯೂ ಸಹ ಆಸಕ್ತಿ ಬೆಳೆಸಿಕೊಂಡಿರುತ್ತಾರೆ.

ಹೌದು ತಿರುಪತಿಯ ಪದ್ಮಾವತಿ ಯೂನಿವರ್ಸಿಟಿಯಲ್ಲಿ ಯುವತಿಯರು ಹೆಚ್ಚಾಗಿ ಇದ್ದ ಕಾರಣ ತೆಲುಗು ಚಿತ್ರರಂಗದ ಸಿನಿಮಾ ನಿರ್ದೇಶಕರುಗಳು ತಮ್ಮ ಸಿನಿಮಾ ಗಳಿಗಾಗಿ ಹೊಸ ನಾಯಕಿಯನ್ನು ಹುಡುಕಲು ಪದ್ಮಾವತಿ ಯೂನಿವರ್ಸಿಟಿಗೆ ತೆರಳಿರುತ್ತಾರೆ. ಹೀಗೆ ತಮ್ಮ ಚಿತ್ರಕ್ಕೆ ನಾಯಕಿ ನಟಿಯನ್ನು ಹುಡುಕಲು ಅಂದಿನ ತೆಲುಗು ಖ್ಯಾತ ನಿರ್ದೇಶಕ ಶಿವಪ್ರಸಾದ್ ಈ ಕಾಲೇಜಿಗೆ ಆಗಮಿಸಿದ್ದ ರೋಜಾ ಅವರ ಫೋಟೋ ನೋಡಿ ನಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಂಡರು.

ಇನ್ನು ಶಿವಪ್ರಸಾದ್ ಅವರಿಗೆ ರೋಜಾ ಅವರ ತಂದೆ ಆಪ್ತ ಸ್ನೇಹಿತರಾಗಿದ್ದ ಕಾರಣದಿಂದಾಗಿ ತಂದೆಯೊಂದಿಗೆ ತಮ್ಮ ಸಿನಿಮಾಗೆ ನಿಮ್ಮ ಮಗಳನ್ನು ನಾಯಕಿಯಾಗಿ ಮಾಡುತ್ತೇನೆ ಎಂದು ಹೇಳಿ ಒಪ್ಪಿಸಿದ್ದು ಬಳಿಕ ರೋಜಾ ಅವರನ್ನು ಅವರ ತಂದೆಯೇ ಸಿನಿಮಾಗಾಗಿ ಒಪ್ಪಿಸಿದ್ದು ಒಂದು ಸಿನಿಮಾ ತಾನೇ ಮಾಡಿಬಿಡೋಣ ಎಂದು ಹೇಳಿ ರೋಜಾ ಕೂಡ ಅಂದು ಆ ಸಿನಿಮಾ ಮಾಡಲು ಒಪ್ಪಿಗೆ ನೀಡಿತ್ತಾರೆ.

ಹೌದು ನಟಿ ರೋಜಾ ಅವರ ಮೊದಲ ಸಿನಿಮಾ ಪ್ರೇಮ ತಪಸ್ಸು ಎಂಬುದಾಗಿದ್ದು ತೆಲುಗಿನ ನಾಯಕನಟ ರಾಜೇಂದ್ರ ಪ್ರಸಾದ್ ಸಿನಿಮಾದಲ್ಲಿ ಹೀರೋ ಆಗಿದ್ದರು. ಆ ಸಿನಿಮಾ 1991 ರಲ್ಲಿ ತೆರೆಕಂಡು ಚಿತ್ರರಂಗದಲ್ಲಿ ಯಶಸ್ಸು ಕಂಡಿತ್ತು. ಇನ್ನು ಈ ಸಿನಿಮಾದ ನಂತರ ನಟಿ ರೋಜಾ ಅವರು ಸಿನಿಮಾರಂಗದಲ್ಲಿ ಸೆಟಲ್ ಆಗಿದ್ದು ತೆಲುಗು ಚಿತ್ರರಂಗದಲ್ಲಿ ಬ್ಯೂಸಿಯಾದರು. ತದನಂತರ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾದ ಇವರು ತಮಿಳಿನ ಖ್ಯಾತ ನಿರ್ದೇಶಕ ಸೆಲ್ವ ಮಣಿ ಅವರನ್ನು ಪ್ರೀತಿಸಿ ಮದುವೆಯಾದರು.

ಇನ್ನು 2002 ರಲ್ಲೀ ತಿರುಪತಿಯಲ್ಲಿ ಇವರ ಮದುವೆ ನಡೆದಿದ್ದು ಇನ್ನು ರೋಜಾ ಅವರು ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಮೆಗಾಸ್ಟಾರ್ ಚಿರಂಜೀವಿ ಬಾಲಕೃಷ್ಣ ನಾಗಾರ್ಜುನ ಇನ್ನೂ ಅನೇಕ ನಟರ ಜೊತೆ ಅಭಿನಯ ಮಾಡಿ ಸೈ ಎನಿಸಿಕೊಂಡರು.

ಹೌದು ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ಗಡಿಬಿಡಿ ಗಂಡ ಕಲಾವಿದ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು ಹಾಗೂ ಗ್ರಾಮದೇವತೆ ಯಂತಹ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ರಾಜಕೀಯದಲ್ಲೂ ಕೂಡ ಗುರುತಿಸಿಕೊಂಡಿರುವ ರೋಜಾ ಅವರು ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಅವರ ಪಕ್ಷದಲ್ಲಿ MLA ಕೂಡ ಆಗಿದ್ದರು.

ಇನ್ನು ಇವರಿಗೆ ಅಂಶಮಾಲಿಕ ಎಂಬ ಮದ್ದುದಾ ಮಗಳಿದ್ದು ಕೃಷ್ಣ ಕೌಶಿಕ್ ಎಂಬ ಮಗ ಕೂಡ ಇದ್ದಾನೆ. ಇನ್ನು ಅಂಶಮಾಲಿಕ ನೋಡಲು ಯಾವ ನಟಿಗೂ ಕಮ್ನಿಯಿಲ್ಲ ಎಂಬುವಂತಿದ್ದು ಈ ಲೇಖನಿಯಲ್ಲಿ ಅವರನ್ನು ನೋಡನಹುದು. ಸದ್ಯ ಇದೀಗ ನಟಿ ರೋಜಾ ಅವರಿಗೆ ಇಬ್ಬರು ಮಕ್ಕಳಿದ್ದರು ಕೂಡ ಅಷ್ಟೇ ಎನರ್ಜಿಟಿಕ್ ಆಗಿ ಇದ್ದು ಕೆಲವು ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ತೀರ್ಪುಗಾರರ ಆಗುವುದರ ಜೊತೆಗೆ ಅದ್ಭುತವಾಗಿ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಒಂದು ವಿಡಿಯೋ ವೈರಲ್ ಆಗಿದ್ದು ಜಾನಪದ ಗೀತೆಗೆ ಕಲಾವಿದರ ಮಧ್ಯೆ ನಟಿ ರೋಜಾ ಹೇಗೆ ಕುಣಿದಿದ್ದಾರೆ ನೀವೆ ನೋಡಿ.