ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮದುವೆಯಲ್ಲಿ ಕಣ್ಣೀರಿಟ್ಟ ಅದಿತಿ ಪ್ರಭುದೇವ…ನೋಡಿ ಚಿಂದಿ ವಿಡಿಯೋ

989

ಪ್ರಪಂಚಾನೇ ಒಂದು ರೌಂಡ್ ಹಾಕಿಕಿಕೊಂಡು ಬಂದರೂ ಸಿಗದಂತಹ ಚೆಲುವೆ ಈ ಅದಿತಿ ಪ್ರಭುದೇವ. ಹಾಲಿನ ಕೆನೆಯಂತೆ ಬಿಳುಪಾಗಿರುವ ಈ ಮಿಲ್ಕಿ ಗರ್ಲ್ ನ ನಟನಾ ಕೌಶಲ್ಯ, ನಡವಳಿಕೆ, ಕನ್ನಡ ಸಿನಿಮಾಗಳ ಬಗ್ಗೆ ಇರುವ ಒಲವು, ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಮಾತನಾಡುವ ಆಕೆಯ ಶೈಲಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಮೂಲತಃ ದಾವಣಗೆರೆಯಲ್ಲಿ ಜನಿಸಿದ ಅದಿತಿ, ಎಂಜಿನಿಯರಿಂಗ್ ಪದವಿ ಮತ್ತು ಎಂ.ಬಿ.ಎ ಯನ್ನು ಅಲ್ಲಿಯೇ ಮುಗಿಸುತ್ತಾರೆ. ಅನಂತರ ಕಿರುತೆರೆಯಲ್ಲಿ ಗುಂಡಯ್ಯನ ಹೆಂಡತಿ ಎಂಬ ಧಾರಾವಾಹಿಯ ಮುಖಾಂತರ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅದಿತಿ, 2017 ರಲ್ಲಿ ಅಜಯ್ ರಾವ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಂತಹ ಧೈರ್ಯಂ ಚಿತ್ರದ ಮೂಲಕ ಹಿರಿತೆರೆಗೆ ಪದಾರ್ಪಣೆ ಮಾಡುತ್ತಾರೆ.

ಆದರೆ ಈ ಸಿನಿಮಾ ಅಂದುಕೊಂಡಂತೆ ಯಶಸ್ವಿಯಾಗದ ಕಾರಣ, ಅದಿತಿ ಪ್ರಭುದೇವ ಅವರು ಮತ್ತೆ ನಾಗಕನ್ನಿಕೆ ಎಂಬ ಧಾರಾವಾಹಿಯ ಮುಖಾಂತರ ದೂರದರ್ಶನಕ್ಕೆ ಮರಳುತ್ತಾರೆ.

ತಾವು ಮಾಡುವ ಕೆಲಸದಲ್ಲಿ ನಿಷ್ಠೆ ಮತ್ತು ಆಸಕ್ತಿ ಉಳ್ಳವರಿಗೆ ಕಲಾದೇವತೆ ಎಂದೂ ಕೈಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ ಅದಿತಿ ಅವರಿಗೆ ಮತ್ತೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತದೆ.

ಹೌದು, 2019 ರಲ್ಲಿ ಸಿಂಪಲ್ ಸುನಿ ನಿರ್ದೇಶನದ ಬಜಾರ್, ಚಿರಂಜೀವಿ ಸರ್ಜಾ ಅವರ ಜೊತೆಗೆ ಸಿಂಗ, ದಯಾಳ್ ಪದ್ಮನಾಭನ್ ಅವರ ನಿರ್ದೇಶನದ ರಂಗನಾಯಕಿ, ಸತೀಶ್ ನೀನಾಸಂ ಅವರ ಜೊತೆ ಬ್ರಹ್ಮಚಾರಿ ಎಂಬ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ.

ಈಕೆಯ ಅಂದ ಮತ್ತು ವಯ್ಯಾರಕ್ಕೆ ಯುವ ಪೀಳಿಗೆಗಳು ಮಾರು ಹೋಗಿದ್ದಾರೆ. ನಟನೆಯಲ್ಲಿ ಚತುರೆಯಾಗಿದ್ದರೂ ಈಕೆಯ ಅದೃಷ್ಟ ಸರಿಯಿಲ್ಲ ಅನ್ನಿಸುತ್ತದೆ. ಇದೀಗ ಅವರ ಮದುವೆಯ ಕ್ಷಣ ನೋಡಿ ಚಿಂದಿ ವಿಡಿಯೋ.