ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಡಿಬಾಸ್ ಜೊತೆ ನಟಿಸಿದ್ದ ಗಜ ಚಿತ್ರದ ಈ ಖ್ಯಾತ ವಿಲನ್ ಏನಾದರು ಗೊತ್ತಾ…

22,462

ಖ್ಯಾತ ಖಳನಾಯಕ ಪ್ರದೀಪ್ ರಾವತ್ ರವರು ಜನವರಿ 21 1952 ರಂದು ಜನಿಸಿದ್ದು ಇವರು ಮೂಲತಃ ಜಬಲಪುರ್ ನವರು. ಇವರು ತೆಲುಗು ಹಿಂದಿ ತಮಿಳು ಕನ್ನಡ ಮಲಯಾಳಂ ಇಂಗ್ಲಿಷ್ ಒರಿಯಾ ಬೆಂಗಾಲಿ ಭೋಜ್ ಪುರಿ ಹೀಗೆ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಅದರಲ್ಲೂ ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು ಪ್ರದೀಪ್ ರಾವತ್ ಅವರು 1985 ರಂದು ಹಿಂದಿಯ ಐತ್ ಬಾರ್ ಎಂವ ಚಿತ್ರದ ಮೂಲಕ ತಮ್ಮ ಸಿನಿ ಜೀವನ ಪ್ರಾರಂಭಿಸಿದರು.

ತೆಲುಗು ಚಿತ್ರರಂಗದಲ್ಲಿ 2004 ರಲ್ಲಿ ನಿತಿನ್ ಅವರ ನಟನೆಯ ಸೈ ಎನ್ನುವ ಚಿತ್ರದ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಕಾಲಿಟ್ಟ ಅವರು ಇದರಲ್ಲಿ ಭಿಕ್ಷು ಯಾದವ್ ಎನ್ನುವ ಪಾತ್ರವನ್ನು ಮಾಡಿ ಅತ್ಯುತ್ತಮ ಖಳನಾಯಕ ಅವಾರ್ಡ್ ಕೂಡ ಮುಡಿಗೇರಿಸಿಕೊಂಡರು.

ಇನ್ನೂ ನಮ್ಮ ಕನ್ನಡದಲ್ಲಿ ನೋಡಿದರೆ 2007 ರಲ್ಲಿ ಪರೋಡಿ ಎಂಬ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಇದಾದ ಮೇಲೆ ಗಜ ಅಭಯ್ ಬಚ್ಚನ್ ಎಲೆಕ್ಷನ್ ಶಿವಲಿಂಗ ಲಕ್ಷ್ಮಣ ತ್ರಿಶೂಲ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ.गजनी' में पर्दे पर दहशत फैलाने वाले 70 साल के प्रदीप रावत बॉलीवुड से हैं  दूर, साउथ में बनाया ठिकाना - photogallery pradeep rawat notable for playing  villain role in ghajini now

ಇನ್ನು ಪ್ರದೀಪ್ ರಾವತ್ ಅವರು ಕನ್ನಡದಲ್ಲಿ 8 ಚಿತ್ರಗಳಲ್ಲಿ ನಟಿಸಿದ್ದು ಮಲಯಾಳಂನಲ್ಲಿ 4 ಇಂಗ್ಲಿಷ್ ಒರಿಯಾ ಬೆಂಗಾಲಿ ಭೋಜ್ ಪುರಿ ಭಾಷೆಗಳಲ್ಲಿ ಒಂದೊಂದು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ಹಿಂದಿ ಭಾಷೆಯಲ್ಲಿ ಕೂಡ ಸಾಕಷ್ಟು ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ.

ಇನ್ನು ತಮಿಳಿನಲ್ಲಿ ಸೂರ್ಯ ಅವರ ಅಭಿನಯದ ಗಜಿನಿ ಚಿತ್ರದಲ್ಲಿ ಡಬಲ್ ರೋಲ್ ಪಾತ್ರಗಳನ್ನು ಮಾಡಿ ಇದರಿಂದ ತುಂಬಾನೇ ಜನಪ್ರಿಯರಾದರು. ಇನ್ನು ಪ್ರದೀಪ್ ರಾವತ್ ಅವರು ಕಲ್ಯಾಣಿ ರಾವತ್ ಎನ್ನುವವರನ್ನು ವಿವಾಹವಾಗಿದ್ದು ಇವರಿಗೆ ವಿಕ್ರಂ ರಾವತ್ ಹಾಗೂ ಸಿಂಗ್ ರಾವತ್ ಎನ್ನುವ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಇದೀಗಅವಕಾಶ ಇರದೇ ಈ ನಟ ಬೇರೆ ಯಾವ್ದೋ ದುಡಿಮೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ ನಿಜಕ್ಕೂ ಇದು ಬೇಸರದ ಸಂಗತಿ