ಕಾಂತಾರ.. ಅನ್ನೋ ಹೆಸರು ದೇಶದ ಸಿನಿಮಾ ಜಗತ್ತಿನಲ್ಲಿ ದಿಗ್ಬಂಧನ ಹಾಕಿದೆ. ಯಾವ ಸಿನಿಮಾ ರಂಗಕ್ಕೆ ಹೋದ್ರು ಕಾಂತಾರದ ಬಗ್ಗೆ ಮಾತನಾಡದೇ ಮುಂದೆ ಹೋಗೋಕೆ ಸಾಧ್ಯವಾಗುತ್ತಿಲ್ಲ. ಇಷ್ಟು ದಿನ ಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದ ಕಾಂತಾರ ಈಗ ಪ್ಯಾನ್ ಇಂಡಿಯಾ ಆಗಿದೆ. ಸಿನಿಮಾ ಪ್ರೇಕ್ಷಕರ ಬಹು ದೊಡ್ಡ ಬೇಡಿಕೆಯ ಮೇರೆಗೆ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೈವಗಳ ಘರ್ಜನೆ ಕೇಳೋಕೆ ಶುರುವಾಗಿದೆ.
ಕನ್ನಡಕ್ಕೆ ಮಾತ್ರ ಸೀಮಿತ ಆಗಿದ್ದ ಕಾಂತಾರ ಸಿನಿಮಾ ದೈವಗಳ ಶಕ್ತಿಯಿಂದಲೇ ಪ್ಯಾನ್ ಇಂಡಿಯಾ ಸಿನಿಮಾ ಆಯ್ತಾ ಅನ್ನೋ ಚರ್ಚೆಗಳು ಶುರುವಾಗಿವೆ. ಯಾವ್ದೇ ಕೆಲಸ ಆಗ್ಲಿ. ಆ ಕೆಲಸವನ್ನ ಭಕ್ತಿಯಿಂದ ಮಾಡಿದ್ರೆ ಆ ಕೆಲಸದ ಫಲ ಸಿಕ್ಕೇ ಸಿಗುತ್ತೆ. ಕಾಂತಾರ ಸಿನಿಮಾವನ್ನು ಕೂಡ ನಿರ್ದೇಶಕ ರಿಷಬ್ ಶೆಟ್ಟಿ ಭಕ್ತಿಪೂರ್ವಕವಾಗೆ ಮಾಡಿದ್ದಾರೆ. ಹೀಗಾಗಿ ಕಾಂತಾರದಲ್ಲಿ ತೋರಿಸಿದ ಗುಳಿಗ ಹಾಗು ಪಂಜುರ್ಲಿ ದೈವಗಳು ಈ ಸಿನಿಮಾ ಗೆಲುವಿನ ಶಕ್ತಿ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ.
ಕಾಂತಾರ ಸಿನಿಮಾದ ಮೇಲೆ ದೈವನ ಅನುಗ್ರಹ ಇದೆ ಅನ್ನೋದಕ್ಕೆ ಮತ್ತೊಂದು ಉದಾಹರಣೆಯೂ ಇದೆ. ಕಾಂತಾರ ಸಿನಿಮಾ ಮಾಡಿರೋ ನಿರ್ದೇಶಕ ರಿಷಬ್ ಶೆಟ್ಟಿ, ಈ ಕಥೆಯನ್ನ ಸಿನಿಮಾ ಮಾಡಬಹುದಾ ಅಂತ ಪಂಜುರ್ಲಿ ದೈವದ ಬಳಿ ಕೇಳಿದ್ರಂತೆ. ಆಗ ಪಂಜುರ್ಲಿ ತನ್ನ ಮುಖಕ್ಕೆ ಹಚ್ಚಿಕೊಂಡಿದ್ದ ಬಣ್ಣವನ್ನ ರಿಷಬ್ ಶೆಟ್ಟಿ ಮುಖಕ್ಕೆ ಬಳಿದು ಮಾಡು ಹೋಗು ಎಂದು ಒಪ್ಪಿಕೊಂಡಿತ್ತಂತೆ.
ಹೀಗಾಗಿ ಈ ಸಿನಿಮಾ ದೊಡ್ಡ ಹಿಟ್ ಆಗಿದೆ. ಕಾಂತಾರ ಗೆಲುವಿಗೆ ದೈವದ ಆಶೀರ್ವಾಧವೇ ಕಾರಣ ಅಂತ ಕಾಂತಾರ ಟೀಂ ಹೇಳಿಕೊಳ್ಳುತ್ತಿದ್ದಾರೆ. ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಈ ಚಿತ್ರ ಹಿಂದಿಯಲ್ಲೂ ಬಿಡುಗಡೆ ಆಗುತ್ತಿದೆ. ಬಾಲಿವುಡ್ನ ಸ್ಕ್ರೀನ್ಗಳಲ್ಲಿ ಕಾಂತಾರ ಬಿಡುಗಡೆ ಆಗುತ್ತಿರೋದು ಈ ದೈವದ ಮತ್ತೊಂದು ಪವಾಡ ಅಂತ ಹೇಳಲಾಗ್ತಿದೆ.
ದೈವಾರಾಧನೆಯ ಕಥೆಯುಳ್ಳ ಸಿನಿಮಾ, ನಾಟಕ ಇತ್ಯಾದಿ ಮಾಡುವ ಸಂದರ್ಭದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ. ಸ್ವಲ್ಪ ದಾರಿ ತಪ್ಪಿದ್ದರೂ ಇಡೀ ಸಿನಿಮಾ ತಂಡ ಭಾರೀ ಟೀಕೆಗೆ, ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಕಾಂತಾರ ಸಿನಿಮಾವೂ ಕಾಡು, ಪ್ರಕೃತಿ-ಮನುಷ್ಯ ಸಂಬಂಧ, ಕರಾವಳಿಯ ದೈವಾರಾಧನೆಯ ಹಿನ್ನೆಲೆ ಇರುವ ಸಿನಿಮಾ ಆಗಿದೆ.
ಕಾಂತಾರ ಆತ್ಮಕ್ಕೆ ಮುಟ್ಟುವ ಕಥೆ ಆಗಿದೆ. ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ಇಡೀ ತಂಡವು ಶ್ರದ್ಧಾ ಭಕ್ತಿಯಿಂದ ಮಾಡಿದೆ. ಮದ್ಯ-ಮಾಂಸವನ್ನು ತ್ಯಜಿಸಿ ಈ ಸಿನಿಮಾ ಮಾಡಲಾಗಿದೆ. ಅಲ್ಲದೆ ಕೋಲದ ಶೂಟಿಂಗ್ ನಡೆಯುವ ಸ್ಥಳದಲ್ಲಿ ಚಪ್ಪಲಿಯನ್ನು ಹಾಕದೆ ಎಲ್ಲರೂ ಇದ್ದರು.
ಶೂಟಿಂಗ್ ವೇಳೆ ಅದೆಷ್ಟೋ ಕಾಡು ಪ್ರಾಣಿಗಳು ಬಂದಿದ್ದ ವೆ. ಶೂಟಿಂಗ್ ವೇಳೆ ಹುಲಿ ಚಿರತೆ ಬಂದ ಉದಾಹರಣೆ ಗಳು ಇವೆ..ದೈವ ವೇಷ ಹಾಕಿದ ರಿಷಬ್ ಅಷ್ಟೆ ಶುದ್ದ ದಿಂದ ಇದ್ದು ಅವರು ಅಚ್ಚುಕಟ್ಟಾಗಿ ಮಾಡಿದ್ದಾರೆ.ಇನ್ನು ಕೋಲ ವೇಷ ಹಾಕಿದ್ದಾಗ ರಿಷಬ್ ಅವರಿಗೆ ಡೈರೆಕ್ಸನ್ ಮಾಡಲು ಆಗುತ್ತಿರಲಿಲ್ಲ.ಆ ಸಂಧರ್ಭದಲ್ಲಿ ದೈವ ನಲಿಯುತ್ತೆ.ರಿಷಭ್ ದೈವ ಪಾತ್ರದಲ್ಲಿ ಮಗ್ನ ರಾಗಿರುತ್ತಾರೆ ಎಂದು ನಟ ಶನಿಲ್ ಹೇಳಿದ್ದಾರೆ
ಚಿತ್ರದ ಬಗ್ಗೆ ಮಾತನಾಡಿರುವ ನಟ ಶನಿಲ್, ಚಿತ್ರ ಯಶಸ್ಸು ಕಂಡಾಗ ಇಂತಹ ವಿಮರ್ಶೆಗಳು ಸಾಮಾನ್ಯ. ಇದಕ್ಕೆಲ್ಲಾ ತಲೆಕಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಚಿತ್ರ ಈಗಾಗಲೇ ಗೆದ್ದಾಗಿದೆ. ಹಲವು ಅಡೆತಡೆಗಳು ಬಂದರೂ ದೈವ ಪ್ರೇರಣೆಯಿಂದ ಚಿತ್ರ ಅದ್ಭುತ ಯಶಸ್ಸನ್ನು ಕಾಣುತ್ತಿದೆ. ಎಂದು ಶನಿಲ್ ಶೆಟ್ಟಿ ಹೇಳಿದರು.