ನವಿಲುಗಳು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ…? ತಮ್ಮ ಸುಂದರ ನೋಟ, ಅಪೂರ್ವ ನಾಟ್ಯದ ಮೂಲಕವೇ ಗಮನ ಸೆಳೆಯುವ ಪಕ್ಷಿಗಳಿವು. ನವಿಲಿಗೆ ಭಾರತದಲ್ಲಿ ರಾಷ್ಟ್ರ ಪಕ್ಷಿ ಎಂಬ ಹೆಗ್ಗಳಿಕೆಯೂ ಇದೆ. ಮಯೂರಗಳು ಗರಿಬಿಚ್ಚಿ ನರ್ತಿಸಿದರೆ ಆ ದೃಶ್ಯವೇ ಕಣ್ಣಿಗೆ ಹಬ್ಬ. ನವಿಲಿನ ನಾಟ್ಯವೇ ಸುಂದರ… ಮಯೂರವೊಂದು ಗರಿಬಿಚ್ಚಿ ಕುಣಿಯುತ್ತಿದ್ದರೆ ಆ ದೃಶ್ಯವೇ ಕಣ್ಣಿಗೆ ಹಬ್ಬ. ನವಿಲಿನ ಸೌಂದರ್ಯ ಕಣ್ಣಿಗೆ ಮಾತ್ರವಲ್ಲ ಮನಸ್ಸಿಗೆ ಮುದ ನೀಡುತ್ತದೆ. ಖಂಡಿತಾ ಎಲ್ಲರೂ ಈ ಸೌಂದರ್ಯವನ್ನು ತದೇಕಚಿತ್ತದಿಂದ ನೋಡಿ ಆನಂದಿಸುತ್ತಾರೆ.
ಅಲ್ಲದೆ, ಈ ಸೊಬಗಿನ ದೃಶ್ಯವನ್ನು ಸೆರೆ ಹಿಡಿಯುವ ಜತೆಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿಯೂ ಹಂಚಿಕೊಳ್ಳುತ್ತಾರೆ. ಈ ದೃಶ್ಯಗಳು ಕ್ಷಣಾರ್ಧದಲ್ಲಿ ನೆಟ್ಟಿಗರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗುತ್ತವೆ. ಸದ್ಯ ಅಂತಹದ್ದೇ ದೃಶ್ಯವೊಂದು ನೆಟ್ಟಿಗರ ಗಮನ ಸೆಳೆದಿದೆ. ನವಿಲಿನ ನಾಟ್ಯದ ಈ ದೃಶ್ಯ ಅಲ್ಲೊಂದು ಸುಂದರ ಲೋಕವನ್ನು ಸೃಷ್ಟಿಸಿತ್ತು. `ಅದ್ಭುತ ಮತ್ತು ವರ್ಣರಂಜಿತ ಭಾರತೀಯ ರಾಷ್ಟ್ರೀಯ ಪಕ್ಷಿಯ ನೋಟ’ ಎಂದು ಕ್ಯಾಪ್ಶನ್ನೊಂದಿಗೆ ಈ ಟ್ವಿಟ್ಟರ್ ಬಳಕೆದಾರರು ಈ ಅಪೂರ್ವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎಲ್ಲರೂ ಬಲು ಆನಂದದಿಂದಲೇ ಈ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ನಮ್ಮ ಹೆಮ್ಮೆಯ ರಾಷ್ಟ್ರೀಯ ಪಕ್ಷಿಯ ಸೊಬಗು ಎಲ್ಲರ ಕಣ್ಮನ ಸೆಳೆದಿದೆ. ಹೀಗಾಗಿ, ಈ ದೃಶ್ಯ ಕಂಡ ಎಲ್ಲರೂ ಖುಷಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದೀಗ ಅದರ ಬೆನ್ನಲ್ಲೆ ನವೀಲು ಹಿಡಿಯುವ ಬಗ್ಗೆ ಸಹ ಹಲವು ವೀಡಿಯೋ ವೈರಲ್ ಆಗುತ್ತಿದೆ.
ನವಿಲು ಹಿಡಿಯುವುದು ಅಪರಾಧ ಕೃತ್ಯವಾಗಿದ್ದರೂ ಅದನ್ನು ಹಿಡಿಯುವ ವೀಡಿಯೋ ವೈರಲ್ ಆಗುತ್ತಿದೆ. ಹಕ್ಕಿ ಹಿಡಿಯಲು ಬಾಕ್ಸ್, ಬಿದಿರು ಹಾಗೂ ರಬ್ಬರ್ ಅನ್ನು ಬಳಸಲಾಗಿದೆ. ಇದು ಯಾವ ಹಕ್ಕಿಯಾದರೂ ಸುಲಭವಾಗಿ ಹಿಡಿಯಲು ಸಾಧ್ಯವಾಗುತ್ತದೆ. ಈ ವೀಡಿಯೋದಲ್ಲಿ ಈ ಬಾಕ್ಸ್ ನೊಳಗಡೆ ಕಾಳುಗಳನ್ನು ಹಾಕಲಾಗಿತ್ತು ಅದನ್ನು ತಿನ್ನಲು ಸಣ್ಣ ನವಿಲು ಬಂದಿದ್ದು ಬಾಕ್ಸ್ ನೊಳಗೆ ಬಿದ್ದಿದೆ.