ಸತ್ಯ (Sathya) ಧಾರಾವಾಹಿ (Serial) ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್.ಕಾರ್ತಿಕ್ ಪಾತ್ರಧಾರಿ ನಟ ಸಾಗರ್ ಬಿಳಿಗೌಡ ಅವರು ಸದ್ಯಕ್ಕೆ ಸ್ಮಾಲ್ ಸ್ಕ್ರೀನ್ ನಲ್ಲಿ ಸಖತ್ ಶೈನ್ ಆಗ್ತಿರೋ ನಟ. ಈಗಾಗಲೇ ಕಿನ್ನರಿ, ಮನಸಾರೆ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಸದ್ಯಕ್ಕೆ ಸತ್ಯ ಧಾರಾವಾಹಿಯಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಾಗರ್ ಬಿಳಿಗೌಡ ಅವರು ಲಂಡನ್ ನಲ್ಲಿ ಎಂಬಿಎ ಅಧ್ಯಾಯನ ಮಾಡಿ ಭಾರತದಲ್ಲಿ ಮಾಸ್ಟರ್ ಇನ್ ಬಿಸಿನೆಸ್ ಲಾ ಕೂಡ ಮುಗಿಸಿಕೊಂಡಿದ್ದಾರೆ. ಏನೇ ಓದಿದ್ರೂ ಸಾಗರ್ ಅವರಿಗೆ ಸೆಳೆದದ್ದು ಮಾತ್ರ ಬಣ್ಣದ ಪ್ರಪಂಚ. ಹಾಗಾಗಿ ಕಿರುತೆರೆಗೆ ಹೆಜ್ಜೆ ಇಟ್ಟು ಹೆಸರೂ ಕೂಡ ಮಾಡಿ ಇದೀಗ ಖ್ಯಾತ ನಟಿಯನ್ನೇ ಮದುವೆ ಆಗಿದ್ದಾರೆ.
ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರ ಮಾಡುತ್ತಾ ಇರುವವರ ನಿಜವಾದ ಹೆಸರು ಸಾಗರ್ ಬಿಳಿಗೌಡ. ಸೀರಿಯಲ್‍ನಲ್ಲಿ ಕಾರ್ತಿಕ್ ತುಂಬಾ ಮುಗ್ಧ. ತನ್ನ ಅಮ್ಮನ ಮಾತು ಕೇಳೋ ಮಗ. ಎಲ್ಲದಕ್ಕೂ ಭಯ ಪಡೋ ಹುಡುಗಸಿರಿ ರಾಜು ಮಾಡೆಲ್ ಕಮ್ ನಟಿ. ಇವರು ಉದ್ಯಮಿ ಕೂಡ ಹೌದು. ಸಿರಿ ರಾಜು ಅವರು ಈವೆಂಟ್ ಕಂಪನಿಯನ್ನ ನಡೆಸುತ್ತಿದ್ದಾರೆ. ವಿಜಯ್ ರಾಘವೇಂದ್ರ ಜೊತೆಗೆ FIR 6 to 6 ಸಿನಿಮಾದಲ್ಲಿ ಸಿರಿ ರಾಜು ಅಭಿನಯಿಸುತ್ತಿದ್ದಾರೆ.
ಆರತಕ್ಷತೆಯಲ್ಲಿ ಸಿರಿ ರಾಜು ಅವರು ತಿಳಿ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿದ್ದರು. ಸಾಗರ್ ಅವರು ಮರೂನ್ ಕಲರ್ ಡ್ರೆಸ್ ಹಾಕಿದ್ದರು. ಇದು ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದು,ಕಿರುತೆರೆಯ ಅನೇಕ ಕಲಾವಿದರು ಈ ಮದುವೆಗೆ ಆಗಮಿಸಿ, ನವ ಜೋಡಿಗೆ ಶುಭ ಹಾರೈಸಿದ್ದಾರೆ.ಹಸೆಮನೆ ಏರಿ ಮದುವೆಯಾದ ನಟಿ ಸಾಗರ್ ಮನೆಗೆ ಸಂಪ್ರದಾಯಿಕವಾಗಿ ಸೇರು ಒದ್ದು ಪ್ರವೇಶ ನೀಡಿದ್ದಾರೆ.ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.