ನಾಗರಹಾವು ಅಥವಾ ಸರ್ಪ ಅಥವಾ ಕೋಬ್ರಾ ಅಂದ್ರೆ ಎಲ್ಲರಿಗೂ ಭಯವೇ ಅಲ್ವೇ. ಹಿಂದುಗಳು ನಾಗರ ಹಾವನ್ನು ದೇವರು ಎಂದು ಪೂಜೆ ಮಾಡುತ್ತಾರೆ ಹಾವು ಇಲ್ಲದೆ ಇರುವ ಹುತ್ತಕ್ಕೆ ಹಾಲೆರೆಯುವುದು ಅಥವಾ ನಾಗರ ಕಲ್ಲಿಗೆ ಪೂಜೆ ಮಾಡುವುದು ಇವೆಲ್ಲವೂ ರೂಢಿಯಲ್ಲಿದೆ. ಆದರೆ ನಿಜವಾದ ಸರ್ಪ ಕಂಡರೆ ಮಾತ್ರ ಜನ ಭಯಭೀತರಾಗುತ್ತಾರೆ.
ಕೊನೆಗೆ ಆ ಹಾವನ್ನು ಸಾಯಿಸಲು ಕೂಡ ಮುಂದಾಗುತ್ತಾರೆ. ಸರ್ಪವನ್ನು ಸಾಯಿಸುವುದು ಪಾಪ ಎನ್ನುತ್ತೆ ಹಿಂದು ಧರ್ಮ. ಆದರೆ ಅದಕ್ಕಿಂತ ಮಿಗಿಲಾಗಿ ಒಂದು ಪ್ರಾಣಿ ಹಿಂಸೆ ಮಾಡುವುದೇ ತಪ್ಪು ಅಂತದ್ರಲ್ಲಿ ಹಾವನ ಕೊಂದರೆ ಖಂಡಿತವಾಗಿಯೂ ಅದು ಒಳ್ಳೆಯದಲ್ಲ. ಆದರೆ ರಾತ್ರೋರಾತ್ರಿ ಮಲಗಿದ್ದ ಕೋಣೆಗೆ ಹೀಗೆ ನಾಗರಹಾವು ನುಸುಳಿದರೆ ಹೇಗೆ?
ಹೌದು ಓಡಿಸಾದ ಗ್ರಾಮ ಒಂದರಲ್ಲಿ ರಾತ್ರಿ ಎಲ್ಲರೂ ಮಲಗಿರುವ ಸಮಯದಲ್ಲಿ ಮನೆಗೆ ನಾಗರಹಾವು ನುಗ್ಗಿದೆ ಇದರಿಂದ ಮನೆಯಲ್ಲಿ ಇರುವ ಜನರು ಭಯಭೀತರಾಗಿ ಕಂಗಾಲಾಗಿದ್ದಾರೆ. ಏನು ಮಾಡುವುದು ಎಂದೇ, ಅವರಿಗೆ ತೋಚಲಿಲ್ಲ. ಅದೇ ರೀತಿ ಜನರನ್ನ ನೋಡುತ್ತಿದ್ದ ಹಾಗೆ ಕೋಪಗೊಂಡ ಹಾಗೂ ಭಯಗೊಂಡ ನಾಗರಹಾವು ಮಾಡಿದ್ದೇನು ಗೊತ್ತಾ?
ಅ ಊರಿನಲ್ಲಿ ನಾಗರಹಾವು ಹಿಡಿಯುವುದಕ್ಕೆ ಫೇಮಸ್ ಆಗಿರುವ ಆರಿಫ್ ಅವರನ್ನು ಮನೆಯವರು ಕರೆಸುತ್ತಾರೆ. ನಂತರ ಅವರು ಬಂದು ನಾಗರಹಾವನ್ನು ಹಿಡಿಯುತ್ತಾರೆ ಆದರೆ ಈ ಒಂದು ಪ್ರಕ್ರಿಯೆಯಲ್ಲಿ ನಾಗರಹಾವು ಕೋಪಗೊಂಡು ಎದುರಿಗೆ ಇರುವವರನ್ನು ಕಚ್ಚಲು ಬರುವುದು, ಹಾಗೂ ಜೋರಾಗಿ ಉಸಿರು ಬಿಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ಖಂಡಿತವಾಗಿಯೂ ಒಮ್ಮೆ ನಿಮಗೂ ಎದೆ ಜಲ್ ಎನಿಸುತ್ತದೆ. ಇಲ್ಲಿದೆ ನೋಡಿ ವಿಡಿಯೋ.