ಸತ್ಯ ದಾರವಾಹಿಯ ಮೂಲಕ ಖ್ಯಾತಿ ಗಳಿಸಿರುವ ಸಾಗರ್ ಬಿಳಿ ಗೌಡ ಇದೀಗ ತನ್ನ ಗೆಳತಿ ಸಿರಿ ರಾಜು ಅವರ ಜೊತೆಗೆ ಹಸೆಮಣೆ ಏರಿದ್ದಾರೆ. ಸತ್ಯ ಧಾರವಾಹಿಯಲ್ಲಿ ಉತ್ತಮ ನಟನೆಯ ಮೂಲಕ ಫೇಮಸ್ ಆಗಿರುವ ನಟ ಸಾಗರ್. ಧಾರವಾಹಿಯಲ್ಲಿ ಸಾಗರ್ ಅವರ ಮದುವೆ ಅಚಾನಕ್ ಆಗಿ ಸತ್ಯ ಜೊತೆ ನಡೆಯುತ್ತೆ. ಇಷ್ಟ ಇಲ್ಲದೆ ಇದ್ದರೂ ಸತ್ಯ ಜೊತೆ ಜೀವನ ನಡೆಸುತ್ತಿರುವ ಸಾಗರ್ ಇದೀಗ ನಿಜ ಜೀವನದಲ್ಲಿ ಸಂಭ್ರಮದಿಂದ ತನ್ನ ಪ್ರೀತಿಯ ಗೆಳತಿಯ ಜೊತೆ ಸಪ್ತಪದಿ ತುಳಿದಿದ್ದಾರೆ.
ಸತ್ಯ ಧಾರವಾಹಿಯಲ್ಲಿ ಕಾರ್ತಿಕ ಪಾತ್ರವನ್ನು ನಿಭಾಯಿಸುತ್ತಿರುವ ಸಾಗರ್ ವಿದೇಶದಲ್ಲಿ ಆರು ತಿಂಗಳ ಕಾಲ ಅಡ್ವಾನ್ಸ್ ಆಕ್ಟಿಂಗ್ ಕೋರ್ಸ್ ಕೂಡ ಮಾಡಿದ್ದಾರೆ. ಇನ್ನು ಅವರನ್ನು ಮದುವೆ ಆಗಿರುವ ಸಿರಿ ರಾಜು ಮಾಡೆಲ್ ಹಾಗೂ ಕಿರುತೆರೆಯ ನಟಿ ಹಾಗಾಗಿ ಇಬ್ಬರು ಬಣ್ಣದ ಲೋಕದವರೇ ಆಗಿದ್ದು ಇದೀಗ ಜೀವನದಲ್ಲಿಯೂ ಬಣ್ಣದ ಬದುಕನ ಆರಂಭಿಸಿದ್ದಾರೆ.
ಸಾಗರ್ ಬಿಳಿ ಗೌಡ ಹಾಗೂ ಸಿರಿ ರಾಜು ಅವರ ಮದುವೆಯ ಸಮಾರಂಭಕ್ಕೆ ಕಿರುತೆರೆಯ ಎಲ್ಲಾ ಕಲಾವಿದರು ಆಗಮಿಸಿದ್ದರು. ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋತ್ತವಾಗಿ ನಡೆದ ಸಾಗರ ಬಿಳಿ ಗೌಡ ಹಾಗೂ ಸಿರಿ ರಾಜು ಅವರ ಮದುವೆಯ ಒಂದು ಝಲಕ್ ಈ ವಿಡಿಯೋದಲ್ಲಿ ಇದೆ ನೋಡಿ.