ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಬಗ್ಗೆ ಎಲ್ರಿಗೂ ಗೊತ್ತು. ಕನ್ನಡದಲ್ಲಿ ಸಿನಿಮಾ ಕರಿಯರ್ ಆರಂಭಿಸಿದ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್ ಸ್ಟಾರ್ ಎನಿಸಿದ್ಡಾರೆ. ತೆಲುಗು ಸಿನಿಮಾ ರಂಗದಲ್ಲಿ ಹೆಚ್ಚು ಗುರುತಿಸಿಕೊಂಡ ರಶ್ಮಿಕ ಮಂದಣ್ಣ ಇದೀಗ ಬಾಲಿವುಡ್ ನಲ್ಲಿಯೂ ಕೂಡ ತಮ್ಮ ಛಾಪು ಮೂಡಿಸಿದ್ದಾರೆ. ಲಕ್ಷಾಂತರ ಫ್ಯಾನ್ಸ್ ಹೊಂದಿರುವ ರಶ್ಮಿಕ ಮಂದಣ್ಣ ಯೂತ್ ಐಕಾನ್ ಕೂಡ ಆಗಿದ್ದಾರೆ.
ಇಂದು ಬಹು ಬೇಡಿಕೆಯ ನಟಿ ಆಗಿರುವ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ನಟಿಸಿ ಅಭಿನಯಿಸುವುದರ ಜೊತೆಗೆ ಇತರ ವಿಷಯಗಳಿಗೆ ಸಾಕಷ್ಟು ಟ್ರೋಲ್ ಕೂಡ ಆಗುತ್ತಾರೆ. ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಾಸಿಪ್ ಗಳು ಆಗಿವೆ. ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಅವರ ನಡುವೆ ಕುಚ್ ಕುಚ್ ಹೈ ಎನ್ನುತ್ತಿದೆ ಚಿತ್ರರಂಗ.
ಇನ್ನು ರಶ್ಮಿಕ ಮಂದಣ್ಣ ಸ್ಟೈಲ್ ಐಕಾನ್ ಕೂಡ ಹೌದು. ಬಹಳ ವಿಶೇಷವಾದ ಡ್ರೆಸ್ ಧರಿಸುವ ರಶ್ಮಿಕ ಸಿಂಪಲ್ ಆಗಿ ಮೇಕಪ್ ಕೂಡ ಮಾಡುತ್ತಾರೆ. ಪುಷ್ಪ ಸಿನಿಮಾದ ಪ್ರಮೋಷನ್ ಸಮಯದಲ್ಲಿ ಅವರು ಧರಿಸಿರುವ ನೀಲಿ ಬಣ್ಣದ ಲೆಹೆಂಗಾ ಇದೀಗ ಟ್ರೆಂಡ್ ಆಗಿದೆ.
ರಶ್ಮಿಕಾ ಧರಿಸಿದ್ದ ಡೀಪ್ ನೆಕ್, ಹಾಟ್ ಲೆಹೆಂಗಾ ದುಬಾರಿ ಯಾಗಿದ್ದು, ಬಾಲಿವುಡ್ ಫೇಮಸ್ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ರುನಾಯತ್ ಕಲೆಕ್ಷನ್ ಆಗಿದೆ. ಬಹಳ ಟ್ರೆಂಡಿ ಆಗಿರುವ ಡ್ರೆಸ್ ಧರಿಸಿ ಸಿಂಪಲ್ ಆಗಿ ಮೇಕಪ್ ಮಾಡಿ ಪ್ರಿನ್ಸೆಸ್ ತರ ಕಂಗೊಳಿಸುವ ರಶ್ಮಿಕಾ ಮಂದಣ್ಣ ಅವರನ್ನು ಈ ವಿಡಿಯೋ ನೋಡಿ ಅವರ ಸೌಂದರ್ಯವನ್ನು ನೀವೂ ಕಣ್ತುಂಬಿಸಿಕೊಳ್ಳಿ.